ಅತ್ಯಾಚಾರ (ಸಾಂದರ್ಭಿಕ ಚಿತ್ರ) 
ಪ್ರಧಾನ ಸುದ್ದಿ

ಬಿಹಾರದ ಕಟಿಹಾರ್‌ನಲ್ಲಿ ಅಪ್ರಾಪ್ತ ವಯಸ್ಸಿನ ಅಮ್ಮಂದಿರು!

ಬಿಹಾರದ ಕಟಿಹಾರ್ ಎಂಬ ಗ್ರಾಮವೊಂದರಲ್ಲಿನ ಅಪ್ರಾಪ್ತ ಬಾಲಕಿಯರ ವ್ಯಥೆಯ ಕತೆಯಿದು. ಇಲ್ಲಿನ ಹೆಣ್ಮಕ್ಕಳು ಆಟವಾಡುತ್ತಾ...

ನವದೆಹಲಿ/ಪಾಟ್ನಾ: ಎಲ್ಲಿ ನೋಡಿದರೂ ಅತ್ಯಾಚಾರದ ಸುದ್ದಿಗಳೇ! ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ರಕ್ಷಣೆ ಎಲ್ಲಿ? ಎಂದು ಕೇಳುವ, ಅನ್ಯಾಯದ ವಿರುದ್ಧ ಸಿಡಿದೇಳುವ ಹೊತ್ತು ಇದು. ಪ್ರತಿದಿನ ಒಂದಲ್ಲ ಒಂದು ಕಡೆ ಮಹಿಳೆಯರ ಮೇಲೆ ಅತ್ಯಾಚಾರವಾಗಿರುವ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಆದರೆ ಬಿಹಾರದ ಕುಗ್ರಾಮವೊಂದರಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಕೇಳಿದರೆ ನಿಜವಾಗಿಯೂ ಈ ಸಮಾಜ ಇಷ್ಟೊಂದು ಕ್ರೂರವಾಗಿದೆಯೇ? ಎಂದು ಅನಿಸಿಬಿಡುತ್ತದೆ.

ಬಿಹಾರದ ಕಟಿಹಾರ್ ಎಂಬ ಗ್ರಾಮವೊಂದರಲ್ಲಿನ ಅಪ್ರಾಪ್ತ ಬಾಲಕಿಯರ ವ್ಯಥೆಯ ಕತೆಯಿದು. ಇಲ್ಲಿನ ಹೆಣ್ಮಕ್ಕಳು ಆಟವಾಡುತ್ತಾ ಕಲಿಯಬೇಕಾದ ವಯಸ್ಸಲ್ಲಿ ಮಗುವೊಂದಕ್ಕೆ ಜನ್ಮ ನೀಡುತ್ತಾರೆ. ಅವರ ಗರ್ಭಕ್ಕೆ ಕಾರಣ ಅತ್ಯಾಚಾರ!
ಇಲ್ಲಿ 6ರಿಂದ 8ನೇ ಕ್ಲಾಸಿನಲ್ಲಿ ಓದುತ್ತಿರುವ ಹೆಣ್ಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಲೇ ಇರುತ್ತದಂತೆ. ಇಷ್ಟೊಂದು ಅನ್ಯಾಯವಾದರೂ ಈ ಬಗ್ಗೆ ಯಾರೂ ಸೊಲ್ಲೊತ್ತುವುದಿಲ್ಲ. ಅತ್ಯಾಚಾರಕ್ಕೊಳಗಾದ ಬಾಲಕಿಯರು ಗರ್ಭಿಣಿಯರಾಗುತ್ತಾರೆ. ಪಾಪಿ ಅತ್ಯಾಚಾರಿಯೊಬ್ಬನ ಕುಡಿಗೆ ಜನ್ಮ ನೀಡುವ ಬಾಲಕಿಯರ ಭವಿಷ್ಯ ಅಲ್ಲಿಗೆ ಮುದುಡಿ ಹೋಗುತ್ತದೆ. ಶಾಲೆಗೆ ಹೋಗಬೇಕಾದ ವಯಸ್ಸಲ್ಲಿ ಗರ್ಭಿಣಿಯಾಗಿ ನಂತರ ಮಗುವಿನ ಆರೈಕೆಯಲ್ಲಿ ಇವರ ಜೀವನ ಕಳೆದುಹೋಗುತ್ತದೆ. ಬಾಲ್ಯದ ಸುಖ ಅನುಭವಿಸುವ ಹೊತ್ತಿನಲ್ಲಿ ಅವರ ಕೈಗೊಂದು ಪಾಪು ಬಂದಿರುತ್ತದೆ. ಅದರಲ್ಲೂ ಅಪ್ರಾಪ್ತ ಬಾಲಕಿಯರಾಗಿರುವ ಕಾರಣ ಹೆರಿಗೆಯ ವೇಳೆ ಬದುಕುಳಿಯುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಅವರೀಗೂ ಗೊತ್ತಿರುವುದಿಲ್ಲ.

ಹೀಗಿರುವಾಗಲೂ ಇಂಥಾ ಬಾಲಕಿಯರ ನೆರವಿಗೆ ಜಿಲ್ಲಾಡಳಿತ ಮುಂದಾಗುವುದಿಲ್ಲ. ಇತ್ತ ಅತ್ಯಾಚಾರಿಗಳು ರಾಜಾರೋಷವಾಗಿ ತಮ್ಮ ಕಾಯಕವನ್ನು ಮುಂದುವರಿಸುತ್ತಲೇ ಇರುತ್ತಾರೆ.  ಇದು ಕಟಿಹಾರ್ ಗ್ರಾಮದಲ್ಲಿನ ಬಾಲಕಿಯರ ಸಂಕಟದ ಕತೆ, ಅಲ್ಲ ಜೀವನ.




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!