ರಾಮ್‌ಪಾಲ್‌ 
ಪ್ರಧಾನ ಸುದ್ದಿ

ದೇವಮಾನವರ ಆಶ್ರಮಗಳು 'ಭಯೋತ್ಪಾದನಾ' ಕೇಂದ್ರಗಳಾಗುತ್ತಿವೆ: ಬಿಜೆಪಿ

ರಾಮ್‌ಪಾಲ್‌ನಂತ ದೇವ ಮಾನವರಿಂದ ನಡೆಸಲ್ಪಡುವ ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆಯನ್ನು ಹುಟ್ಟಿಸುತ್ತವೆ...

ನವದೆಹಲಿ: ರಾಮ್‌ಪಾಲ್‌ನಂತ ದೇವ ಮಾನವರಿಂದ ನಡೆಸಲ್ಪಡುವ ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆಯನ್ನು ಹುಟ್ಟಿಸುತ್ತವೆ ಎಂದು ಬಿಜೆಪಿ ಹೇಳಿದೆ.

ಪಕ್ಷದ ಮುಖವಾಣಿ ಕಮಲ್ ಸಂದೇಶದಲ್ಲಿ, ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆ ಹುಟ್ಟಿಸಿ, ಭಯೋತ್ಪಾದನಾ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇವುಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿ ಹೇಳಿದೆ.

ರಾಮ್‌ಪಾಲ್‌ನಂತವರು ಒಂದೇ ದಿನದಲ್ಲಿ ಹುಟ್ಟಿಕೊಳ್ಳುವುದಿಲ್ಲ. ಇಂಥವರು ಸಮಾಜದಲ್ಲಿ ಮೂಢನಂಬಿಕೆಗಳನ್ನು ಪಸರಿಸಿ, ತಮ್ಮ ಜಾಲವನ್ನು ಬೆಳೆಸಿಕೊಂಡು ಹೋಗುತ್ತಾರೆ. ಆದ್ದರಿಂದ ಈ ಆಶ್ರಮಗಳು ಆರಂಭವಾಗುವ ಹೊತ್ತಿಗೇ ಅವುಗಳನ್ನು ನಿಷೇಧಕ್ಕೊಳಪಡಿಸಬೇಕು.

ಯಾರನ್ನು ನಾವು ಬಾಬಾ ಅಥವಾ ಸ್ವಾಮಿಗಳೆಂದು ಕರೆಯಬೇಕು ಎಂಬುದಕ್ಕೆ ಉತ್ತರವಾಗಿ ಬರೆದ ಬರಹವೊಂದರಲ್ಲಿ ಬಿಜೆಪಿ ಉಪಾಧ್ಯಕ್ಷ ಪ್ರಭಾತ್ ಜಾ, ಮೂಢನಂಬಿಕೆಯ ಮೂಲಕ ಜನರಿಗೆ ಮಂಕುಬೂದಿಯೆರಚುವುದನ್ನು ನೋಡಿದರೆ ನಾವಿನ್ನೂ ಕತ್ತಲ ಯುಗದಲ್ಲೇ ಇದ್ದೀವಿ ಎಂದು ಅನಿಸಿಬಿಡುತ್ತದೆ ಎಂದಿದ್ದಾರೆ.

ರಾಮ್‌ಪಾಲ್‌ನ್ನು ಬಂಧಿಸಿದ ಹರ್ಯಾಣ ಸರ್ಕಾರವನ್ನು ಶ್ಲಾಘಿಸಿದ ಬಿಜೆಪಿ, ಇಂಥಾ ದೇವಮಾನವರನ್ನು ಶಿಕ್ಷೆಗೊಳಪಡಿಸವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನನ್ನು ನೀಡಿದಂತಾಗಿದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT