ಅತ್ಯಾಚಾರ (ಸಾಂದರ್ಭಿಕ ಚಿತ್ರ ) 
ಪ್ರಧಾನ ಸುದ್ದಿ

ಎಂಎನ್‌ಸಿ ಉದ್ಯೋಗಿಯನ್ನು ಕ್ಯಾಬ್‌ನಲ್ಲಿ ರೇಪ್ ಮಾಡಿದ ಚಾಲಕ

ಶುಕ್ರವಾರ ರಾತ್ರಿ ಗುರ್‌ಗಾಂವ್ ನಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಕ್ಯಾಬ್ ಚಾಲಕನೊಬ್ಬ 25ರ ಹರೆಯದ ಮಹಿಳೆಯನ್ನು...

ನವದೆಹಲಿ: ಶುಕ್ರವಾರ ರಾತ್ರಿ ಗುರ್‌ಗಾಂವ್ ನಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಕ್ಯಾಬ್ ಚಾಲಕನೊಬ್ಬ 25ರ ಹರೆಯದ ಮಹಿಳೆಯನ್ನು ಕ್ಯಾಬ್‌ನಲ್ಲಿ ಅತ್ಯಾಚಾರಗೈದ ಘಟನೆ ವರದಿಯಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಬಲ್ಲಮೂಲಗಳ ಪ್ರಕಾರ ಆರೋಪಿಯ ಹೆಸರು ಶಿವ ಕುಮಾರ್ ಯಾದವ್ ಎಂದು ಪತ್ತೆ ಹಚ್ಚಲಾಗಿದ್ದು, ಈತ ಸ್ವಿಫ್ಟ್ ಡಿಸೈರ್ ಕಾರ್‌ನ ಮಾಲೀಕನಾಗಿದ್ದಾನೆ.. ಈತನ ಕಾರನ್ನು ಮಥುರಾದಲ್ಲಿ ಪತ್ತೆ ಹಚ್ಚಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ  ಹಾಜರು ಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಎಂಎನ್‌ಸಿಯೊಂದರಲ್ಲಿ ಉದ್ಯೋಗಿಯಾಗಿರುವ 25ರ ಹರೆಯದ ಮಹಿಳೆ ಶುಕ್ರವಾರ ರಾತ್ರಿ ಡಿನ್ನರ್ ಪಾರ್ಟಿಯೊಂದನ್ನು ಮುಗಿಸಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಸಂತ್ ವಿಹಾರ್ ವರೆಗೆ ತನ್ನ ಗೆಳೆಯ ಗೆಳತಿಯರೊಂದಿಗೆ ಬಂದ ಈಕೆ ಅಲ್ಲಿಂದ ಮನೆಗೆ ತೆರಳಲು ರಾತ್ರಿ 9.30ರ ವೇಳೆಗೆ ಕ್ಯಾಬ್ ಹತ್ತಿದ್ದಳು. ಕ್ಯಾಬ್‌ನ ಹಿಂದಿನ ಸೀಟಿನಲ್ಲಿ ಕುಳಿತ ಈಕೆಗೆ ನಿದ್ದೆ ಬಂದಿದೆ. ನಿದ್ದೆಯಿಂದ ಎದ್ದಾಗ ಆಕೆಗೆ ತಾನು ಅತ್ಯಾಚಾರಕ್ಕೊಳಗಾಗಿರುವ ವಿಷಯ ಗೊತ್ತಾಗಿದೆ. ಕಾರ್‌ನ ಡೋರ್ ಲಾಕ್ ಆಗಿದ್ದು, ಕಾರನ್ನು ರೋಹಿಲ್ಲಾ ಮತ್ತು ಇಂದ್ರಲೋಕ್ ನಡುವೆ ನಿಲ್ಲಿಸಲಾಗಿತ್ತು.

ಅನಂತರ ಆರೋಪಿ, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಂದು ಹಾಕ್ತೀನಿ ಎಂದು ಬೆದರಿಕೆಯೊಡ್ಡಿ ಆಕೆಯನ್ನು ಮನೆಗೆ ಡ್ರಾಪ್ ಮಾಡಿದ್ದಾನೆ.

ಅತ್ಯಾಚಾರಕ್ಕೊಳಗಾದ ಮಹಿಳೆ ತನ್ನ ಸೆಲ್‌ಫೋನ್‌ನಲ್ಲಿ ಕ್ಯಾಬ್ ನ ಫೋಟೋ ತೆಗೆದು ನಂಬರ್ ನೋಟ್ ಮಾಡಿದ್ದಾಳೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಘಟನೆಯ ಬಗ್ಗೆ ಮಹಿಳೆ ಶನಿವಾರ ದೂರು ನೀಡಿದ್ದಳು. ಈಕೆಯ ದೂರಿನ ಮೇರೆಗೆ ಸರಾಯ್ ರೋಹಿಲ್ಲಾ ಪೊಲೀಸ್ ಠಾಣೆಯಲ್ಲಿ ಕ್ಯಾಬ್  ಚಾಲಕನ ವಿರುದ್ಧ ಐಪಿಸಿ 376, 323 ಹಾಗೂ 506 ಪರಿಚ್ಛೇದದಡಿಯಲ್ಲಿ ಕೇಸು ದಾಖಲಿಸಲಾಗಿದೆ.

2012 ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರದ ನಂತರ ಇದೀಗ ಕ್ಯಾಬ್‌ನಲ್ಲಿ ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದು, ದೆಹಲಿ ಮಹಿಳೆಯರಿಗೆ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಮತ್ತೊಮ್ಮೆ ಕೇಳುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?