ವಾಷಿಂಗ್ಟನ್: ಜಗತ್ತಿನ 'ಅಪಾಯಕರ ದೇಶ'ಗಳ ಪಟ್ಟಿಯಲ್ಲಿ ಪಾಕಿಸ್ತಾನ ಎಂಟನೇ ಸ್ಥಾನದಲ್ಲಿದೆ. ಅಮೆರಿಕ ಮೂಲದ ಇಂಟೆಲ್ ಸೆಂಟರ್ ಸಂಸ್ಥೆ 'ಕಂಟ್ರಿ ಥ್ರೆಟ್ ಇಂಡೆಕ್ಸ್ '(ದೇಶದಲ್ಲಿ ಬೆದರಿಕೆ ಹುಟ್ಟಿಸುವಂತಹ ಘಟನೆ) ಆಧರಿಸಿ ಈ ಪಟ್ಟಿಯನ್ನು ತಯಾರಿಸಿದ್ದು, ಇದರಲ್ಲಿ ಇರಾಕ್ ಮೊದಲನೇ ಸ್ಥಾನದಲ್ಲಿದೆ.
ಅದೇ ವೇಳೆ ಕ್ರಮವಾಗಿ ನೈಜೀರಿಯಾ (2ನೇ ಸ್ಥಾನ), ಸೊಮಾಲಿಯಾ (3ನೇ ಸ್ಥಾನ), ಅಪ್ಘಾನಿಸ್ತಾನ (4ನೇ ಸ್ಥಾನ), ಯೆಮನ್ (5ನೇ ಸ್ಥಾನ), ಸಿರಿಯಾ (6ನೇ ಸ್ಥಾನ), ಲಿಬಿಯಾ (7ನೇ ಸ್ಥಾನ), ಈಜಿಪ್ಟ್ (9ನೇ ಸ್ಥಾನ)ಮತ್ತು ಕೀನ್ಯಾ (10ನೇ ಸ್ಥಾನ)ಗಳಲ್ಲಿದೆ.
ಜಗತ್ತಿನ ರಾಷ್ಟ್ರಗಳಲ್ಲಿನ ಉಗ್ರ ಚಟುವಟಿಕೆಗಳು, ಉಗ್ರ ಕೃತ್ಯಗಳು ಹಾಗು ಕಳೆದ 30ದಿನಗಳಲ್ಲಿ ನಡೆದ ಹಿಂಸಾತ್ಮಕ ಕೃತ್ಯಗಳ ಘಟನೆಗಳು, ವೀಡಿಯೋ, ಫೋಟೋ ಹಾಗೂ ಸಾವಿಗೀಡಾದವರ ಸಂಖ್ಯೆ ಎಲ್ಲವನ್ನು ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ.