ತೆಲಂಗಾಣ: ಅತ್ಯಾಚಾರ ಪ್ರಕರಣದ ನಂತರ ರಾಜಧಾನಿ ನವದೆಹಲಿಯಲ್ಲಿ ಯೂಬರ್ ಮತ್ತು ಇತರ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ತೆಲಂಗಾಣ ಸಾರಿಗೆ ಇಲಾಖೆ ಪ್ರಸ್ತುತ ಕ್ಯಾಬ್‌ಗೆ ತೆಲಂಗಾಣ ರಾಜ್ಯದಲ್ಲಿ ನಿಷೇಧ ಹೇರಿದೆ.
ಮಂಗಳವಾರ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಖಾತೆ ಸಚಿವ ರಾಜ್‌ನಾಥ್ ಸಿಂಗ್ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ನಿಷೇಧಿಸುವಂತೆ ಎಲ್ಲ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಸಂಚಾರ ವ್ಯವಸ್ಥೆ ಕಲ್ಪಿಸುತ್ತಿರುವ ಟ್ಯಾಕ್ಸಿ, ಕ್ಯಾಬ್ ಮಾಲೀಕರು/ ಚಾಲಕರು ಯಾರು ಕೂಡಾ ಯೂಬರ್ ಕಂಪನಿಯೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿರಬಾರದು. ಮಾತ್ರವಲ್ಲದೆ ತೆಲಂಗಾಣ ಸರ್ಕಾರದ ಸಾರಿಗೆ ಇಲಾಖೆ ಯೂಬರ್ ಕಂಪನಿಗೆ ರಾಜ್ಯದಲ್ಲಿ ಸೇವೆ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ತೆಲಂಗಾಣ ಸರ್ಕಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕರು ತಮ್ಮ ಕೂಡಾ ಯೂಬರ್ ಕಂಪನಿಗೆ ಸೇರಿದ ವಾಹನಗಳನ್ನು ಬಾಡಿಗೆಗೆ ಕರೆಯುವುದಾಗಲೀ, ವೆಬ್ ಆಧಾರಿತ ಅಪ್ಲಿಕೇಷನ್‌ಗಳನ್ನು ಬಳಸುವುದಾಗಲೀ ಮಾಡಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.