ಪೇಶಾವರದಲ್ಲಿನ ಸೇನಾ ಶಾಲೆಯಲ್ಲಿ ಗಾಯಗೊಂಡ ವಿದ್ಯಾರ್ಥಿಯನ್ನು ಕರೆದೊಯ್ಯುತ್ತಿರುವುದು 
ಪ್ರಧಾನ ಸುದ್ದಿ

ಪೇಶಾವರ: ಸೇನಾ ಕಾರ್ಯಾಚರಣೆ ಅಂತ್ಯ

ಪಾಕಿಸ್ತಾನದ ಪೇಶಾವರದಲ್ಲಿನ ಸೇನಾ ಶಾಲೆಯೊಳಗೆ ಒತ್ತೆಯಾಳುಗಳಾಗಿದ್ದ ಮಕ್ಕಳ ರಕ್ಷಣೆಗಾಗಿ ನಡೆಸಿದ ಸೇನಾ ಕಾರ್ಯಾಚರಣೆ...

ಪೇಶಾವರ: ಪಾಕಿಸ್ತಾನದ ಪೇಶಾವರದಲ್ಲಿನ ಸೇನಾ ಶಾಲೆಯೊಳಗೆ ಒತ್ತೆಯಾಳುಗಳಾಗಿದ್ದ ಮಕ್ಕಳ ರಕ್ಷಣೆಗಾಗಿ ನಡೆಸಿದ ಸೇನಾ ಕಾರ್ಯಾಚರಣೆ ಇದೀಗ ಅಂತ್ಯಗೊಂಡಿದೆ.

ಪ್ರಸ್ತುತ ಶಾಲೆಯಲ್ಲಿ  ಸೇನೆ 7 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದು ಒತ್ತೆಯಾಳುಗಳಾಗಿದ್ದ ಮಕ್ಕಳನ್ನು ಮತ್ತು ಶಿಕ್ಷಕರನ್ನು ರಕ್ಷಿಸಲಾಗಿದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ

ಮಂಗಳವಾರ  ಮಧ್ಯಾಹ್ನ ಶಾಲೆಗೆ ನುಗ್ಗಿದ ತೆಹ್ರೀಕ್ ಎ ತಾಲೀಬಾನ್ ಸಂಘಟನೆಯ ಉಗ್ರರು ನಡೆಸಿದ ದಾಳಿಯಲ್ಲಿ ಒಟ್ಟು 132 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 124ಕ್ಕೇರಿದ್ದು, 250 ಮಂದಿಗೆ ಗಾಯಗಳಾಗಿವೆ.

ಶಾಲೆಗೆ ನುಗ್ಗಿದ 6 ಉಗ್ರರು 1,500ಕ್ಕಿಂತಲೂ ಹೆಚ್ಚು ಮಕ್ಕಳು ಮತ್ತು ಶಿಕ್ಷರನ್ನು ಒತ್ತೆಯಾಳುಗಳಾಗಿರಿಸಿದ್ದರು. ಮಕ್ಕಳ ಮೇಲೆ ಉಗ್ರಾವತಾರ ತೋರಿದ ಇವರು ಶಾಲೆಯಲ್ಲಿ ಮಕ್ಕಳ ಮಾರಣಹೋಮ ಮಾಡಿ ಮೆರೆದಿದ್ದಾರೆ. ಯಾವುದೇ ಕನಿಕರವಿಲ್ಲದೆ ಮಕ್ಕಳ ಮೇಲೆ ಗುಂಡು ಹಾರಿಸಿದ ಉಗ್ರರು 12-16ರ ವಯಸ್ಸಿನ ಮಕ್ಕಳ ಮೇಲೆಯೇ ಗುಂಡಿನ ಸುರಿಮಳೆಗೆರೆದಿದ್ದಾರೆ. ಮಕ್ಕಳ ಎದೆ ಹಾಗೂ ತಲೆಗೆ ಗುಂಡು ಹಾರಿಸಿ, ಓಡುತ್ತಿದ್ದ ಮಕ್ಕಳನ್ನೂ ಬಿಡದೆ ತಮ್ಮ ಪೈಶಾಚಿಕ ಅವತಾರವನ್ನು ತೋರಿದ್ದು, ಮಕ್ಕಳ ಎದುರಲ್ಲೇ ಶಿಕ್ಷಕರನ್ನು ಹತ್ಯೆಗೈದಿದ್ದಾರೆ.

ಪಾಕ್ ಸೇನಾಪಡೆ ನಡೆಸಿದ ಕಾರ್ಯಾಚರಣೆಯ ಕೊನೆಯ ಹಂತದಲ್ಲಿ 6ನೇ ಉಗ್ರನನ್ನು ಸೈನಿಕರು ಸದೆಬಡಿದಿದ್ದಾರೆ. ಓರ್ವ ಉಗ್ರ ತನ್ನನ್ನು ತಾನೇ ಸ್ಫೋಟಿಸಿಕೊಂಡು ಹತನಾಗಿದ್ದಾನೆ.

ಪೇಶಾವರದಲ್ಲಿ ನಡೆದ ಈ ಘಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ 3 ದಿನದ ಶೋಕಾಚರಣೆ ಆಚರಿಸಲಾಗುವುದು. ಅದೇ ವೇಳೆ ಪಾಕ್ ಪ್ರಧಾನಿ ನಾಳೆ ಬೆಳಗ್ಗೆ 11ಗಂಟೆಗೆ ಸಂಸದೀಯ ಪಕ್ಷಗಳ ಸಭೆ ಕರೆದಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video