ಇಸಿಸ್ ಸಂಘಟನೆ 
ಪ್ರಧಾನ ಸುದ್ದಿ

ಭಾರತದಲ್ಲಿ ಇಸಿಸ್ ಸಂಘಟನೆಗಳಿಗೆ ನಿಷೇಧ

ಇಸಿಸ್ ಸಂಘಟನೆಗೆ ಸೇರಿದ @ShamiWitness ಟ್ವಿಟರ್ ಖಾತೆಯ ನಿರ್ವಾಹಕ ಶಂಕಿತ ಉಗ್ರ ಮೆಹ್ದಿ ಬಂಧನದ ನಂತರ ಇಸಿಸ್...

ನವದೆಹಲಿ: ಇಸಿಸ್ ಸಂಘಟನೆಗೆ ಸೇರಿದ @ShamiWitness ಟ್ವಿಟರ್ ಖಾತೆಯ ನಿರ್ವಾಹಕ ಶಂಕಿತ ಉಗ್ರ ಮೆಹ್ದಿ ಬಂಧನದ ನಂತರ ಇಸಿಸ್ ಸಂಘಟನೆಯನ್ನೇ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.

ಮಂಗಳವಾರ ಸಂಸತ್‌ನಲ್ಲಿ ಮಾತನಾಡಿದ ಗೃಹ ಸಚಿವ ರಾಜ್‌ನಾಥ್ ಸಿಂಗ್, ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇರಾಕ್ ಮತ್ತು ಸಿರಿಯಾದಲ್ಲಿನ ಉಗ್ರ ಸಂಘಟನೆಗಳಿಗೆ ಇಲ್ಲಿ ಕಡಿವಾಣ ಹಾಕಬೇಕಾಗಿದೆ ಎಂದಿದ್ದಾರೆ.

ಇನ್ನಿತರ ರಾಷ್ಟ್ರಗಳ ಉಗ್ರ ಸಂಘಟನೆಗಳ ಬಗ್ಗೆ ನಾವು ನಿಗಾ ವಹಿಸಿದ್ದೇವೆ ಎಂದು ಹೇಳಿದ ಸಿಂಗ್ ಇದಕ್ಕೆ ಮುನ್ನುಡಿಯಾಗಿ  ನಾವು ಈ ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಿದ್ದೇವೆ ಎಂದಿದ್ದಾರೆ.

ಇಂಥಾ ಕೃತ್ಯಗಳಲ್ಲಿ ಹಾಗೂ ಇಂಥಾ ಸಂಘಟನೆಗಳಲ್ಲಿ ಭಾಗಿಯಾಗಿರುವ ಭಾರತೀಯರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟೇ ಇದೆ. ಆದರೆ ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಸಂಘಟನೆಗಳನ್ನು ನಿಷೇಧಿಸುವ ಮೂಲಕ ಶಂಕಿತರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸುಲಭವಾಗುತ್ತದೆ ಎಂದು ಸಿಂಗ್ ಮಾತನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ದಿಢೀರ್ ಪ್ರವಾಹ: ಬಲಿಯಾದವರ ಸಂಖ್ಯೆ 538ಕ್ಕೆ ಏರಿಕೆ; 320 ಭಾರತೀಯ ಪ್ರವಾಸಿಗರು ನಾಪತ್ತೆ!

ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!

ಅಂಡರ್-19 ತಂಡದಲ್ಲಿ ದ್ರಾವಿಡ್, ಸೆಹ್ವಾಗ್ ಮಕ್ಕಳಿಗೆ ಚಾನ್ಸ್; ಸ್ಫೋಟಕ ಪ್ರದರ್ಶನ ನೀಡಿದ್ರೂ ವೈಭವ್ ಸೂರ್ಯವಂಶಿ ಕೈಬಿಟ್ಟ BCCI; ಇಲ್ಲಿದೆ ಕಾರಣ...

ಸಿನಿಮಾ ಇಷ್ಟವಾಗಲಿಲ್ಲ ಅಂದ್ರೆ ನಾನು ನಡು ರಸ್ತೆಯಲ್ಲೇ ತಲೆ ಬೋಳಿಸಿಕೊಳ್ಳುತ್ತೇನೆ: ಪ್ರೇಕ್ಷಕರಿಗೆ ನಟಿ ಶ್ವೇತಾ ಚಾಲೆಂಜ್; ವಿಡಿಯೋ ವೈರಲ್!

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ; ಮೂರೂ ವಿಭಾಗಗಳಲ್ಲಿ ಆಯ್ಕೆಯಾದ ಏಕೈಕ ವ್ಯಕ್ತಿ!