ಇಸ್ಲಮಾಬಾದ್: ಪಾಕಿಸ್ತಾನದ ಖೈಬರ್ ಏಜೆನ್ಸಿಯ ತಿರಾಹ್ ಕಣಿವೆಯಲ್ಲಿ, ಪಾಕಿಸ್ತಾನದ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ ೫೭ ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಯಲಾಗಿದೆ.
ಮಂಗಳವಾರ ಪೇಶಾವರದ ಸೇನಾ ಶಾಲೆಯ ಮೇಲೆ ತಾಲಿಬಾನ್ ಉಗ್ರಗಾಮಿಗಳು ದಾಳಿ ನಡೆಸಿ ೧೩೨ ವಿದ್ಯಾರ್ಥಿಗಳನ್ನು ಕೊಂದ ನಂತರ ಪಾಕಿಸ್ತಾನದ ಸೇನೆ ಉಗ್ರಗಾಮಿಗಳ ಮೇಲೆ ಈ ದಾಳಿ ನಡೆಸಿದೆ ಎನ್ನಲಾಗಿದೆ.
ಸುಮಾರು ೨೦ ಕಡೆ ಪಾಕಿಸ್ತಾನ ಸೇನೆ ವೈಮಾನಿಕ ದಾಳಿ ನಡೆಸಿದೆ ಎನ್ನಲಾಗಿದೆ.