ಜೋರ್ಡಾನ್ ಜೇಮ್ಸ್ ಪಾರ್ಕ್ ಮತ್ತು ಕಿಮ್ ಕರ್ದಾಶಿಯಾನ್‌ 
ಪ್ರಧಾನ ಸುದ್ದಿ

ಕಿಮ್ ಕರ್ದಾಶಿಯಾನ್‌ನಂತೆ ಕಾಣಲು 94.5 ಲಕ್ಷ ರುಪಾಯಿ ವ್ಯಯಿಸಿದ ಭೂಪ!

ಇದಕ್ಕೆ ಅಭಿಮಾನದ ಅತಿರೇಕ ಎನ್ನಬೇಕೋ ಗೊತ್ತಿಲ್ಲ. ಜಗತ್ತಿನ ಅತೀ ಸುಂದರಿಗಳಲ್ಲಿ ಒಬ್ಬಳಾದ ಕಿಮ್ ಕರ್ದಾಶಿಯಾನ್‌ನಂತಾಗಲು...

ಮ್ಯಾಂಚೆಸ್ಟರ್: ಇದಕ್ಕೆ ಅಭಿಮಾನದ ಅತಿರೇಕ ಎನ್ನಬೇಕೋ ಗೊತ್ತಿಲ್ಲ. ಜಗತ್ತಿನ ಅತೀ ಸುಂದರಿಗಳಲ್ಲಿ ಒಬ್ಬಳಾದ ಕಿಮ್ ಕರ್ದಾಶಿಯಾನ್‌ನಂತಾಗಲು ಆಕೆಯ ಅಭಿಮಾನಿಯೊಬ್ಬ ವ್ಯಯಿಸಿದ್ದು 94.5 ಲಕ್ಷ ರು.! ಬ್ರಿಟಿಷ್ ಮೇಕಪ್ ಆರ್ಟಿಸ್ಟ್  ಜೋರ್ಡಾನ್ ಜೇಮ್ಸ್ ಪಾರ್ಕ್ ಎಂಬಾತ ಕಿಮ್ ಕರ್ದಾಶಿಯಾನ್ ಮೇಲಿನ ಅಭಿಮಾನದಿಂದ ಕಾಸ್ಮೆಟಿಕ್ ಸರ್ಜರಿ ಮಾಡಿ ಮುಖವನ್ನೇ ಬದಲಾಯಿಸಿಕೊಂಡಿದ್ದಾನೆ. ಈಗಾಗಲೇ 50 ಬಾರಿ ಕಾಸ್ಮೆಟಿಕ್ ಸರ್ಜರಿಗೊಳಗಾಗಿರುವ 23ರ ಹರೆಯದ ಪಾರ್ಕ್, ಇನ್ನಷ್ಟು ಖರ್ಚು ಮಾಡಿ ಕಿಮ್‌ನಂತಾಗಲು ಸಿದ್ಧ ಎಂದು ಹೇಳುತ್ತಿದ್ದಾನೆ.

ಕಿಮ್ ನಂತಾಗಲು ಈತ ಮಾಡಿರುವ ಕಾಸ್ಮೆಟಿಕ್ ಸರ್ಜರಿಗಳ ಬಗ್ಗೆ ಟೀಕೆಯೂ ವ್ಯಕ್ತವಾಗುತ್ತಿದೆ. ಆದರೆ ಜಗತ್ತಿನ ಸುಂದರಿಯಲ್ಲೊಬ್ಬಳಾದ ಕಿಮ್ ನಂತಾಗಲು ತಾನು ಯಾವುದೇ ತ್ಯಾಗ ಮಾಡಲು ಸಿದ್ಧ ಎಂಬುದು ಪಾರ್ಕ್ ದಿಟ್ಟ ನುಡಿ. ಇದೀಗ ತಕ್ಷಣ ನೋಡಿದರೆ ಈಗ ಪಾರ್ಕ್ ಕೂಡಾ ಕಿಮ್‌ನಂತೆ ಕಾಣುತ್ತಿದ್ದಾನೆ. ತ್ವಚೆಯಲ್ಲಿರುವ ನೆರಿಗೆಯನ್ನು ತೆಗೆಯುವ ಬೋಟೋಕ್ಸ್ ಪ್ರೊಸೀಜರ್‌ಗೊಳಗಾಗಿರುವ ಪಾರ್ಕ್ ಶಸ್ತ್ರಕ್ರಿಯೆ ಮೂಲಕ ಆತನ ತುಟಿಗಳನ್ನೂ ಬದಲಾಯಿಸಿಕೊಂಡಿದ್ದಾನೆ.

ಜನರು ನನ್ನನ್ನು ಗೇಲಿ ಮಾಡಿದರೂ ನಾನು ಅದನ್ನು ಕಿವಿಗೆ ಹಾಕುವುದಿಲ್ಲ. ಯಾಕೆಂದರೆ ಒಂದು ಸುಂದರ ರೂಪವನ್ನು ನನ್ನದಾಗಿಸಿಕೊಳ್ಳಲು ನಾನು ಚಿಕ್ಕ ಪ್ರಯತ್ನವನ್ನು ಮಾಡುತ್ತಿದ್ದೇನಷ್ಟೇ ಎಂದು ಪಾರ್ಕ್ ಹೇಳುತ್ತಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT