ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಭಾರತದ ಸಶಸ್ತ್ರ ಯುದ್ಧ ವಿಮಾನಗಳ ಸಂಖ್ಯೆ ಪಾಕಿಸ್ತಾನಕ್ಕಿಂತಲು ಕಡಿಮೆ

ಭಾರತೀಯ ವಾಯುಪಡೆಯ ಸಶಸ್ತ್ರ ಯುದ್ಧ ವಿಮಾನಗಳ ಸಂಖ್ಯೆ ೨೫ಕ್ಕೆ

ನವದೆಹಲಿ: ಭಾರತೀಯ ವಾಯುಪಡೆಯ ಸಶಸ್ತ್ರ ಯುದ್ಧ ವಿಮಾನಗಳ ಸಂಖ್ಯೆ ೨೫ಕ್ಕೆ ಇಳಿದಿದ್ದು ಪಾಕಿಸ್ತಾನದ ವಿರುದ್ಧ ಇದ್ದ ತಾಂತ್ರಿಕ ಕೌಶಲ್ಯದ ಮುಂಚೂಣಿಯನ್ನು  ಕಳೆದುಕೊಂಡಿದೆ ಎಂದು ಸಂಸದೀಯ ಸಮಿತಿ ಗಮನಿಸಿದೆ.

"ಸದ್ಯಕ್ಕೆ ನಮ್ಮಲ್ಲಿ ೨೫ ಸಶಸ್ತ್ರ ಯುದ್ಧ ವಿಮಾನಗಳಿವೆ. ಆದರೆ ನಮಗೆ ೪೨ ಸಶಸ್ತ್ರ ಯುದ್ಧ ವಿಮಾನಗಳನ್ನು ಹೊಂದಲು ಅಧಿಕಾರ ಇದೆ. ಆಶ್ಚರ್ಯಕರವಾಗಿ ಪಾಕಿಸ್ತಾನ ವಾಯುಪಡೆ ೨೬ ಸಶಸ್ತ್ರ ಯುದ್ಧ ವಿಮಾನಗಳನ್ನು ಹೊಂದಿದೆ. ಆದುದರಿಂದ ನಮ್ಮ ಶಕ್ತಿ ಈಗಾಗಲೇ ಕುಂದಿದೆ" ಎಂದು ಸಮಿತಿ ಗುರುತಿಸಿದೆ.

ಸೋಮವಾರ ಲೋಕಸಭೆಯಲ್ಲಿ ವರದಿಯನ್ನು ಒಪ್ಪಿಸಿದ ಭದ್ರತಾ ಉಸ್ತುವಾರಿ ಸಮಿತಿ, ನೆರೆಹೊರೆಯ ದೇಶಗಳಿಗೆ ಹೋಲಿಸಿದಾಗ ಕಡಿಮೆಯಾಗುತ್ತಿರುವ ಸಶಸ್ತ್ರ ಯುದ್ಧ ವಿಮಾಗಳಿಂದ ರಾಷ್ಟ್ರೀಯ ಭದ್ರತೆಯ ಜೊತೆ ರಾಜಿ ಮಾಡಿಕೊಂಡಿರುವುದು ಕರಾಳ ಸ್ಥಿತಿಯತ್ತ ಕೊಂಡೊಯ್ದಿದೆ ಎಂದು ತಿಳಿಸಿದೆ.

ಹಲವಾರು ವೇದಿಕೆಗಳಿಂದ ಯುದ್ಧ ವಿಮಾನಗಳನ್ನು ಪಡೆಯುವುದನ್ನು ಭಾರತ ನಿಧಾನಿಸಿರುವುದು ಇದಕ್ಕೆ ಒಂದು ಕಾರಣ ಎಂದು ಸಮಿತಿ ತನ್ನ ಅಭಿಪ್ರಾಯ ತಿಳಿಸಿದೆ.

ಈ ೨೫ ಸಕ್ರಿಯ ಯುದ್ಧ ವಿಮಾನಗಳಲ್ಲಿ ೧೪ ಮಿಗ್ ೨೧ ವಿಮಾನಗಳು ಮತ್ತು ಮಿಗ್ ೨೭ ವಿಮಾನಗಳು ೨೦೧೫ ಮತ್ತು ೨೦೨೪ ರೊಳಗೆ ನಿವೃತ್ತಿ ಪಡೆಯಲಿದ್ದು, ೨೦೨೪ ರ ವೇಳಗೆ ಈ ಸಂಖ್ಯೆ ೧೧ ಕ್ಕೆ ಕುಸಿಯಲಿದೆ ಎಂದು ಬಿಜೆಪಿ ಲೋಕಸಭಾ ಸದ್ಯ ಬಿ ಸಿ ಖಂಡೂರಿ ಮುಖಂಡತ್ವದ ೩೩ ಸದಸ್ಯರ ಸಮಿತಿ ಆತಂಕ ವ್ಯಕ್ತ ಪಡಿಸಿದೆ.

ಭಾರತೀಯ ವಾಯುಪಡೆ '೨೭೨ ಸುಖೋಯ್'- ೩೦ ಎಂ ಕೆ ಐ ಯುದ್ಧ ವಿಮಾನಗಳಿಗೆ ಗುತಿಗೆ ನೀಡಿದ್ದರೂ ಕೂಡ ಅವುಗಳು ಸಂದಾಯವಾಗುವುದು ೨೦೨೦ ರ ವೇಳೆಗೆ. ಅಂದರೆ ಆ ವರ್ಷ ವಾಯುಪಡೆಗೆ ೧೩ ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ ಎಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!