ಪ್ರಧಾನ ಸುದ್ದಿ

ಕ್ರಿಸ್ಮಸ್ ರಜೆ, ಮಕ್ಕಳಿಗೆ ಪ್ರಬಂಧದ ಸಜೆ

Guruprasad Narayana

ನವದೆಹಲಿ: ಡಿಸೆಂಬರ್ ೨೫ ರಂದು "ಉತ್ತಮ ಆಡಳಿತ ದಿನ" ಎಂದು ಆಚರಿಸಲಿದ್ದರೂ, ಸಿ ಬಿ ಎಸ್ ಸಿ ಶಾಲೆಗಳಿಗೆ ರಜೆ ಇರುತ್ತದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದು ಮೇಲ್ಮೈನಲ್ಲಿ ವಿವಾದಕ್ಕೆ ತೆರೆ ಎಳೆದಂತೆ ಕಂಡರೂ, ಮಕ್ಕಳಿಗೆ ಸ್ಪರ್ಧೆ ಮತ್ತು ಬಹುಮಾನದ ಆಸೆ ತೋರಿಸಿ ಮಕ್ಕಳ ರಜೆಯನ್ನು ಸಜೆಯಾಗಿ ಪರಿವರ್ತಿಸಲು ಸರ್ಕಾರ ಸನ್ನದ್ಧವಾಗಿದೆ.

"ಉತ್ತಮ ಆಡಳಿತದ"ದ ಬಗ್ಗೆ ಮಕ್ಕಳು ಪ್ರಬಂಧ ಬರೆದು ಡಿಸೆಂಬರ್ ೨೫ ರಂದು ಸಲ್ಲಿಸಿದರೆ ೨೦೦೦ ರೂ ಬಹುಮಾನವನ್ನು ಗೆಲ್ಲಬಹುದು ಎಂದು ಸೋಮವಾರ ಹೊಸ ಸುತ್ತೋಲೆಯನ್ನು ಸರ್ಕಾರ ಹೊರಡಿಸಿದೆ. ಉತ್ತಮ ಆಡಳಿತದ ಬಗ್ಗೆ ವಿವಿಧ ವಿಷಯಗಳ ಬಗ್ಗೆ ಈ ಪ್ರಬಂಧ ಸ್ಪರ್ಧೆ ನಡೆಯಲಿದ್ದು, ಆ ವಿಷಯಗಳನ್ನು ಡಿಸೆಂಬರ್ ೨೪ ರಂದು ಘೋಷಿಸಲಾಗುತ್ತದೆ. ಪ್ರಬಂಧವನ್ನು ವಾಟ್ಸ್ ಆಪ್ ಮೂಲಕ ಸಲ್ಲಿಸಲು ಡೆಸೆಂಬರ್ ೨೫ ರಂದು ಮಾತ್ರ ಸಮಯವಿರುತ್ತದೆ. ಒಟ್ಟು ೩೬ ಅತ್ಯುತ್ತಮ ಪ್ರಬಂಧಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ಸುತ್ತೋಲೆ ತಿಳಿಸದೆ.

ಈ ಸ್ಪರ್ಧೆ ಸ್ವಯಂಪ್ರೇರಿತವಾಗಿದ್ದರೂ, ಬಹುಮಾನದ ಆಸೆಗೆ ಮಕ್ಕಳ ರಜಾ ದಿನ ವ್ಯರ್ಥವಾಗಾಬಹುದು ಎಂಬ ಅಭಿಪ್ರಾಯ ದಟ್ಟವಾಗಿ ಕೇಳಿಬರುತ್ತಿದೆ.

SCROLL FOR NEXT