ಪ್ರಧಾನ ಸುದ್ದಿ

ಜಾರ್ಖಂಡ್: ರಘುಬರ್ ದಾಸ್‌ಗೆ ಸಿಎಂ ಪಟ್ಟ ಸಾಧ್ಯತೆ

Rashmi Kasaragodu

ರಾಂಚಿ: ಬಿಜೆಪಿ ಉಪಾಧ್ಯಕ್ಷ ರಘುಬರ್ ದಾಸ್ ಅವರಿಗೆ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನ ಒಲಿಯುವ ಸಾಧ್ಯತೆಗಳು ಹೆಚ್ಚಿವೆ.

ಬುಧವಾರ ದೆಹಲಿಯಲ್ಲಿ ನಡೆಯುವ ಬಿಜೆಪಿ ಸಂಸದೀಯ ಮಂಡಳಿ ಸಭೆಯ ನಂತರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.

ಒಂದು ವೇಳೆ ರಘುಬರ್ ದಾಸ್ ಜಾರ್ಖಂಡ್ ಮುಖ್ಯಮಂತ್ರಿ ಪಟ್ಟಕ್ಕೇರಿದರೆ, ಬುಡಕಟ್ಟು ಜನಾಂಗಕ್ಕೆ ಸೇರದೇ ಇರುವ ವ್ಯಕ್ತಿಯೊಬ್ಬರು ಇದೇ ಮೊದಲ ಬಾರಿಗೆ ಸಿಎಂ ಸ್ಥಾನವನ್ನಲಂಕರಿಸಿದಂತಾಗುತ್ತದೆ.

81 ಸದಸ್ಯರಿರುವ ಜಾರ್ಖಂಡ್ ವಿಧಾನಸಭೆಯಲ್ಲಿ 28 ಬುಡಕಟ್ಟು ಜನಾಂಗಕ್ಕೆ ಸೇರಿದ ಸದಸ್ಯರಿದ್ದಾರೆ. ಇವರಲ್ಲಿ ಹೆಚ್ಚಿನವರು ಜಾರ್ಖಂಜ್ ಮುಕ್ತಿ ಮೋರ್ಚಾ ಅಥವಾ ಜಾರ್ಖಂಡ್ ವಿಕಾಸ್ ಮೋರ್ಚಾ ಪಾರ್ಟಿಗೆ ಸೇರಿದವರಾಗಿದ್ದಾರೆ.

ಎಬಿವಿಪಿ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿರುವ ದಾಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಬೆಂಬಲವಿದೆ. ಆದ್ದರಿಂದ ದಾಸ್ ಅವರೇ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೇರುವುದು ಬಹುತೇಕ ಖಚಿತವಾಗಿದೆ.

SCROLL FOR NEXT