ಡ್ಯೂಟಿಯಲ್ಲಿರುವಾಗಲೇ ಮಹಿಳೆಯೊಂದಿಗೆ ಕುಣಿಯುತ್ತಿರುವ ಸಬ್ ಇನ್ಸ್‌ಪೆಕ್ಟರ್ (ವೀಡಿಯೊ ದೃಶ್ಯ) 
ಪ್ರಧಾನ ಸುದ್ದಿ

ಡ್ಯೂಟಿಯಲ್ಲಿರುವಾಗಲೇ ಬಾರ್ ಡ್ಯಾನ್ಸರ್ ಜತೆ ಕುಣಿದ ಸಬ್‌ಇನ್ಸ್‌ಪೆಕ್ಟರ್!

ಗುಜರಾತ್ ನ ಸೂರತ್‌ನಲ್ಲಿ ಸಬ್ ಇನ್ಸ್‌...

ಸೂರತ್: ಗುಜರಾತ್ ನ ಸೂರತ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಡ್ಯೂಟಿಯಲ್ಲಿರುವಾಗಲೇ ಮಹಿಳೆಯೊಂದಿಗೆ ಕುಣಿಯುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡಿ ಸುದ್ದಿಯಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಸೂರತ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾರ್ ಡ್ಯಾನ್ಸರ್ ಕುಣಿಯುತ್ತಿದ್ದಾಗ ಸಬ್ ಇನ್ಸ್‌ಪೆಕ್ಟರ್ ಡಿಸಿ ಸೋಲಂಕಿ ಅವರು ಡ್ಯಾನ್ಸರ್‌ಗೆ ನೋಟಿನ ಮಳೆ ಸುರಿಸಿದ್ದಾರೆ. ತದನಂತರ ಆಕೆಯೊಂದಿಗೆ ಕುಣಿಯುತ್ತಿರುವ ವೀಡಿಯೋ ಮೊಬೈಲ್ ಫೋನ್ ನಲ್ಲಿ ರೆಕಾರ್ಡ್ ಆಗಿದ್ದು ಇದು ವಾಟ್ಸಾಪ್ ಮೂಲಕ ಹರಿದಾಡಿದೆ.

ಸೂರತ್‌ನ ದಿಂಡೋಲಿ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ  ಕಾರ್ಯ ನಿರತ ರಾಗಿರುವಾಗಲೇ ಸೋಲಂಕಿ ಅವರು ಬಾರ್ ಡ್ಯಾನ್ಸರ್ ಜತೆ ಕುಣಿದಿದ್ದಾರೆ. ಈ ವೀಡಿಯೋವನ್ನು ನಾವು ಕೂಡಾ ನೋಡಿದ್ದೇವೆ. ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಜೆಎಂ ಬಲೋಚ್ ಹೇಳಿದ್ದಾರೆ.

ಸೆಪ್ಟೆಂಬರ್ 19ರಂದು ಸೋಲಂಕಿ ಅವರು 'ವಿಶ್ವಕರ್ಮ ಪೂಜನ್‌' ಗೆ ಹೋಗಿದ್ದರೆನ್ನಲಾಗುತ್ತಿದೆ. ಅಲ್ಲಿ ಅವರು ಮಹಿಳೆಯೊಂದಿಗೆ ಡ್ಯಾನ್ಸ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಸೂರತ್ ಪೊಲೀಸರು ಸಿಟಿ ಪೊಲೀಸ್ ಮುಖ್ಯಸ್ಥ ರಾಕೇಶ್ ಆಸ್ತಾನಾ ಅವರಿಗೆ ವರದಿ ಸಲ್ಲಿಸಿದ್ದಾರೆ. ಇದೀಗ ಸೋಲಂಕಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ವಿಡಿಯೊಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT