ಪ್ರಧಾನ ಸುದ್ದಿ

ತಮಿಳು ಕಾದಂಬರಿಯ ಮೇಲೆ ಆರ್ ಎಸ್ ಎಸ್ ಕೆಂಗಣ್ಣು

Guruprasad Narayana

ಚೆನ್ನೈ: ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ಕಾದಂಬರಿ 'ಮಾಧುರ್ ಬಾಹನ್' (ಅರ್ಧ ನಾರೀಶ್ವರ), ತಿರುಚನ್ ಗೋಡಿನ 'ಕೈಲಾಸನಾಥರ್' ದೇವಸ್ಥಾನ ಮತ್ತು ಮಹಿಳಾ ಭಕ್ತಾದಿಗಳನ್ನು ಕೆಟ್ಟ ಬೆಳಕಿನಲ್ಲಿ ಚಿತ್ರಿಸುತ್ತದೆ ಎಂದು ಬಿಜೆಪಿ, ಆರ್ ಎಸ್ ಎಸ್ ಮತ್ತು ಇತರ ಹಿಂದುತ್ವವಾದದ ಸಂಸ್ಥೆಗಳು ಪುಸ್ತಕವನ್ನು ನಿಷೇಧಿಸಿ ಲೇಖಕ ಮತ್ತು ಪ್ರಕಾಶಕನನ್ನು ಬಂಧಿಸುವಂತೆ ಆಗ್ರಹಿಸಿದೆ ಎಂದು ತಿಳಿದು ಬಂದಿದೆ. ತಿರುಚನ್ ಗೋಡ್ ನಲ್ಲಿ ಪುಸ್ತಕಗಳ ಪ್ರತಿಗಳನ್ನು ಶುಕ್ರವಾರ ಸುಟ್ಟು ಹಾಕಿರುವ ಈ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಈ ಪುಸ್ತಕ "ಒನ್ ಪಾರ್ಟ್ ವುಮೆನ್" ಎಂದು ಪೆಂಗ್ವಿನ್ ನಿಂದ ಇಂಗ್ಲಿಶ್ ಭಾಷೆಯಲ್ಲಿ ಈಗಾಗಲೇ ಎರಡು ಮುದ್ರಣಗಳನ್ನು ಕಂಡಿದೆ.

ಪ್ರಕಾಶಕ ಕಣ್ಣನ್ ಮತ್ತು ಲೇಖಕರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮೂಲಗಳಿಂದ ತಿಳಿದಿದೆ. ಪ್ರಕಾಶನಾಗಿ ನಾನು ಲೇಖಕನ ಜೊತೆಗೆ ನಿಲ್ಲುತ್ತೇನೆ ಮತ್ತು ಪ್ರಕಟನೆಯನ್ನು ಸಮರ್ಥಿಸಿಕೊಳ್ಳುತ್ತೇನೆ. ಇತಿಹಾಸದ ಕೆಲವು ಭಾಗಗಳು ಕೆಲವು ವರ್ಗದ ಜನರಿಗೆ ಕಹಿಯಾಗಿರುತ್ತವೆ. ಇಂತಹ ಬೆದರಿಕೆಗಳನ್ನು ಮೆಟ್ಟಿ ನಿಲ್ಲಲು ಪ್ರಗತಿಪರರೆಲ್ಲ ಒಂದಾಗಬೇಕು ಎಂದು ಪ್ರಕಾಶಕ ಕಣ್ಣನ್ ಕರೆ ಕೊಟ್ಟಿದ್ದಾರೆ.

SCROLL FOR NEXT