ಪೇಶಾವರ: ಪೇಶಾವರದ ಸೇನಾ ಶಾಲೆಯಲ್ಲಿ ಪಾಕಿಸ್ತಾನದ ತಾಲಿಬಾನಿ ಉಗ್ರಗಾಮಿ ಸಂಸ್ಥೆ ದಾಳಿ ನಡೆಸಿ ೧೩೪ ಮಕ್ಕಳೂ ಸೇರಿದಂತೆ ಸುಮಾರು ೧೫೦ ಕ್ಕೂ ಹೆಚ್ಚು ಜನರು ಮೃತ ಪಟ್ಟ ಮೇಲೆ, ಈಗ ನವೀಕರಣಗೊಂಡಿರುವ ಶಾಲೆ ಮುಂದಿನ ತಿಂಗಳ ಮೊದಲ ಭಾಗದಲ್ಲಿ ಮತ್ತೆ ಪ್ರಾರಂಭವಾಗಲಿದೆ.
ಬಲ್ಲ ಮೂಲಗಳ ಪ್ರಕಾರ, ಶಾಲೆಯ ದುರಸ್ತಿ ಭರದಿಂದ ಸಾಗುತ್ತಿದ್ದು ಜನವರಿ ೫ ರಂದು ಶಾಲೆ ಮತ್ತೆ ತೆರಯಲಿದೆ. ಸೇನೆಯ ಎಂಜಿನಿಯರ್ಸ್ ಭಾಗಿಯಾಗಿರುವ ಈ ದುರಸ್ತಿ ಕೆಲಸ ನಾಳೆಯ ಒಳಗೆ ಮುಗಿಯಲಿದೆ ಎನ್ನಲಾಗಿದೆ.
ಶಾಲೆಯ ಆಡಳಿತ ವಿಭಾಗ ಹಾಗು ಆಡಿಟೋರಿಯಮ್ ಗಳಿಗೆ ಡಿಸೆಂಬರ್ ೧೬ರ ಈ ಆತ್ಮಹತ್ಯಾ ದಾಳಿಯಿಂದ ವಿಪರೀತ ಹಾನಿಯುಂಟಾಗಿತ್ತು. ಶಾಲೆಯ ಸುತ್ತಲಿನ ಗೋಡೆಯ ಎತ್ತರವನ್ನು ೧೨ ಅಡಿಗೆ ಏರಿಸಿದ್ದು, ಅದರಲ್ಲಿ ಮೇಲಿನ ಎರಡು ಅಡಿ ಮುಳ್ಳಿನ ತಂತಿಯಿಂದ ಕೂಡಿದೆ.