ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಓಪಿಯಮ್, ಕೊಕೈನ್ ದುಶ್ಚಟಕ್ಕೆ ಬೀಳುತ್ತಿರುವ ಯುವಕರ ಸಂಖ್ಯೆ ಹೆಚ್ಚಳ

ಹೈದರಾಬಾದ್ ನಲ್ಲಿ ಹೆಚ್ಚಚ್ಚು ಯುವಕರು ಓಪಿಯಮ್ ಅಥವಾ ಕೊಕೈನ್...

ಹೈದರಾಬಾದ್: ಹೈದರಾಬಾದ್ ನಲ್ಲಿ ಹೆಚ್ಚಚ್ಚು ಯುವಕರು ಓಪಿಯಮ್ ಅಥವಾ ಕೊಕೈನ್ ದುಶ್ಚಟಕ್ಕೆ ಬೀಳುತ್ತಿರುವುದು ಈಗ ಅಧಿಕೃತ.

೨೦೧೪ರಲ್ಲಿ ಓಪಿಯಮ್ ಸೇವನೆ ಅಥವಾ ಮಾರಾಟದ ೫೯೦೦ ಪ್ರಕರಣಗಳು ದಾಖಲಾಗಿದ್ದಾರೆ, ಕೊಕೈನ್ ನ ೧೬೬ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ೨೦೧೩ರಲ್ಲಿ ೧೭೪ ಕೊಕೈನ್ ಪ್ರಕರಣಗಳು ಹಾಗೂ ಓಪಿಯಮ್ ನ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ. ಹಲವಾರು ವಿದೇಶಿಯರು, ಅದರಲ್ಲೂ ನೈಜೀರಿಯಾ ನಾಗರಿಕರು ವಿವಿಧ ದೇಶಗಳಿಂದ ಖಾಟ್ ಎಲೆಗಳನ್ನು ಕಳ್ಳ ಸಾಗಾಣೆ ಮಾಡುತ್ತಿರುವ ಹಿನ್ನಲೆಯಲ್ಲಿ ೨೦೦ ಪ್ರಕರಣಗಳು ದಾಖಲಾಗಿವೆ.

ಈ ವರ್ಷ ಡ್ರಗ್ ಸಾಗಾಣೆಯಲ್ಲಿ ಹೈದರಾಬಾದ್ ಪೊಲೀಸರು ೬೦ ಜನರನ್ನು ಬಂಧಿಸಿದ್ದು, ಅದರಲ್ಲಿ ೪೦ ಜನ ಭಾರತೀಯರು ಮತ್ತು ೨೦ ಜನ ವಿದೇಶಿಯರು. "ಓಪಿಯಮ್ ನಗರದ ಮೂಲೆ ಮೂಲೆಗಳಲ್ಲಿ ಲಭ್ಯವಿದ್ದು, ವಿವಿಧ ಜಿಲ್ಲೆಗಳಿಂದ ಇದನ್ನು ಸಾಗಾಣೆ ಮಾಡಲು ಹಲವಾರು ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಇದಲ್ಲದೆ ನಗರದ ಹುಕ್ಕ ಕೇಂದ್ರಗಳಲ್ಲಿ ಯುವಕರನ್ನು ಸೆಳೆಯಲು ಓಪಿಯಮ್ ಬಳಸಿ ವಿವಿಧ ಪರಿಮಳಗಳಲ್ಲಿ ಹುಕ್ಕ ಸೇವನೆಗೆ ಅವಕಾಶ ನೀಡಿದ್ದಾರೆ" ಎಂದು ಡ್ರಗ್ಸ್ ನಿಯಂತ್ರಣ ದಳದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹಲವಾರು ಪಾನ್ ಅಂಗಡಿಗಳೂ ಕೂಡ ಓಪಿಯಮ್ ಅನ್ನು ಕಡಿಮೆ ಬೆಲೆಯಲ್ಲಿ ಮಾರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ