ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಸ್ಫೋಟದ ನಂತರದ ದೃಶ್ಯ 
ಪ್ರಧಾನ ಸುದ್ದಿ

ಬೆಂಗಳೂರು ಬ್ಲಾಸ್ಟ್ ಮಾಡಿದ್ದಾಗಿ ಟ್ವೀಟ್ ಮಾಡಿದವನು ಮಾನಸಿಕ ರೋಗಿ

ಬೆಂಗಳೂರು ಬ್ಲಾಸ್ಟ್ ಮಾಡಿದ್ದು ನಾನೇ. ಮತ್ತೆ ಎರಡು ದಿನದ ನಂತರ ...

ಬೆಂಗಳೂರು: ಬೆಂಗಳೂರು ಬ್ಲಾಸ್ಟ್ ಮಾಡಿದ್ದು ನಾನೇ. ಮತ್ತೆ ಎರಡು ದಿನದ ನಂತರ ಮತ್ತೊಂದು ಸ್ಫೋಟ ನಡೆಸುವೆ. ಬರೀ ಮಾತನ್ನಾಡುತ್ತೀರ. ನೀವು ಏನೂ ಕೆಲಸ ಮಾಡುವುದಿಲ್ಲ. ಮೆಹ್ದಿಯನ್ನು ಬಿಡದೆ ಹೋದರೆ ಇಂತಹ ಸ್ಫೋಟಗಳು ನಡೆಯುತ್ತಲೇ ಇರುತ್ತವೆ ಎಂದು ಅಬ್ದುಲ್ ಖಾನ್ ಹೆಸರಿನಲ್ಲಿ ಟ್ವೀಟ್ ಮಾಡಿದ್ದ ಯುವಕನನ್ನು ಬೆಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತ ಯುವಕ ೧೭ ವರ್ಷದ ಹಿಂದೂ ಧರ್ಮದ, ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಎಂದು ತಿಳಿದು ಬಂದಿದ್ದು, ಇವನು ಅಬ್ದುಲ್ ಖಾನ್ ಎಂಬುವವನ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದು, ಬೆಂಗಳೂರು ಬಾಂಬ್ ಬ್ಲಾಸ್ಟ್ ತಾನೇ ಮಾಡಿದ್ದು ಎಂದು ಹೊಣೆ ಹೊತ್ತಿದ್ದ. ಅಲ್ಲದೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಬೆಂಗಳೂರು ಪೊಲೀಸರಿಗೂ ಬೆದರಿಕೆ ಹಾಕಿದ್ದ.

ಈ ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಮೊದಲ ಹಂತದ ತನಿಖೆಯಲ್ಲಿ ತಿಳಿದಿರುವಂತೆ ಇವನು ಮಾನಸಿಕ ರೋಗಿ. ಪೊಲೀಸ್ ಠಾಣೆಗೆ ಭೇಟಿ ಕೊಟ್ಟ ಈ ಯುವಕನ ಪೋಷಕರು, ಅವರ ಮಗ ಚಿಕಿತ್ಸೆ ಪಡೆಯುತ್ತಿರುವುದಕ್ಕೆ ದಾಖಲೆಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್- ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ!

'ನಾನು ನೆಹರು, ರಾಜೀವ್ ವಾದಿ' ಆದ್ರೆ ರಾಹುಲ್ ವಾದಿಯಲ್ಲ- ಮಣಿಶಂಕರ್ ಅಯ್ಯರ್

T20 World Cup 2026: ಸತತ 3ನೇ ಪಂದ್ಯದಲ್ಲೂ ಡಕೌಟ್, ಕೋಚ್ ಗಂಭೀರ್ ದಾಖಲೆ ಸೇರಿ ಹಲವು ಹೀನಾಯ ದಾಖಲೆ ಬರೆದ Abhishek Sharma!

T20 ವಿಶ್ವಕಪ್ 2026: 'ಮಾಡು ಇಲ್ಲವೇ ಮಡಿ', ನಮೀಬಿಯಾ ವಿರುದ್ಧ ಪಾಕಿಸ್ತಾನಕ್ಕೆ ದಾಖಲೆಯ ಜಯ, ಸೂಪರ್ 8ಗೆ ಲಗ್ಗೆ!

ಭಾರತದ ಜೊತೆಗೆ ಮಧ್ಯಂತರ ವ್ಯಾಪಾರ ಒಪ್ಪಂದ ಬೆನ್ನಲ್ಲೇ ಅಮೆರಿಕ, ಚೀನಾ ವಿರುದ್ಧ ಮೋಹನ್ ಭಾಗವತ್ ವಾಗ್ದಾಳಿ! ಯಾಕೆ ಗೊತ್ತಾ?

SCROLL FOR NEXT