ಪ್ರಧಾನ ಸುದ್ದಿ

ಕೂಡಂಕುಳಂ ಅಣು ಸ್ಥಾವರ: ವಿದ್ಯುಚ್ಚಕ್ತಿ ಉತ್ಪಾದನೆ ಪುನರಾರಂಭ

Guruprasad Narayana

ನವದೆಹಲಿ: ಮಂಗಳವಾರ ಮಧ್ಯರಾತ್ರಿಯ ನಂತರ ಭಾರತದ ಅತಿ ದೊಡ್ಡ ಕೂಡಂಕುಳಂ ಅಣು ಸ್ಥಾವರ ವಿದ್ಯುಚ್ಛಕ್ತಿ ಉತ್ಪಾದನೆ ಪುನರಾರಂಭಿಸಿದೆ. ರಷ್ಯಾ ಸಹಯೋಗದೊಂದಿಗೆ ಸ್ಥಾಪಿಸಿದ್ದ ೧೦೦೦ ಮೆಗಾ ವ್ಯಾಟ್ ಸ್ಥಾವರದ ಟರ್ಬೈನ್ ಹಾನಿಯಾಗಿದ್ದರಿಂದ ಕೆಲವು ತಿಂಗಳ ಹಿಂದೆ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ದುರಸ್ತಿಯ ನಂತರ ಪೂರ್ತಿ ೧೦೦೦ ಮೆಗಾ ವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತಿದೆ ಎಂದು ತಿಳಿದು ಬಂದಿದೆ.

ಇದರಿಂದ ಉತ್ಪಾದನೆಯಾಗುವ ವಿದ್ಯುಚ್ಚಕ್ತಿ, ತಮಿಳುನಾಡು, ಪುದುಚೆರಿ, ಕರ್ನಾಟಕ ಮತ್ತು ಕೇರಳದ ಹಲವು ಜಿಲ್ಲೆಗಳಿಗೆ ಪೂರೈಕೆಯಾಗಲಿದೆ. ೮೦೦೦ ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸ್ಥಾವರದ ಕೆಲಸ ಪ್ರಾರಂಭವಾಗಲು ತಡೆಯಾಗಿತ್ತು. ಅಣುಸ್ಥಾವರಗಳು ಸುರಕ್ಷಿತವಲ್ಲ ಎಂದು ಹಲವಾರು ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು.

ಇತ್ತೀಚೆಗೆ ಭಾರತ ಇನ್ನೂ ೧೪ ಸ್ಥಾವರಗಳನ್ನು ಆಮದು ಮಾಡಿಕೊಳ್ಳಲು ರಷ್ಯಾ ಜೊತೆ ಒಪ್ಪಂದ ಮಾಡಿಕೊಂಡಿದೆ. ೧೦೦೦ ಮೆಗಾ ವ್ಯಾಟ್ ಶಕ್ತಿಯ ಮತ್ತೊಂದು ಘಟಕ ೨೦೧೫ ರ ವೇಳೆಗೆ ಕೂಡಂಕುಳಂನಲ್ಲಿ ಕೆಲಸ ಪ್ರಾರಂಭಿಸಲಿದೆ.

SCROLL FOR NEXT