ಪಿಕೆ ಪೋಸ್ಟರ್ 
ಪ್ರಧಾನ ಸುದ್ದಿ

ಪಿಕೆ ಸಿನಿಮಾ ತೆರಿಗೆ ಮುಕ್ತಗೊಳಿಸಿ: ಅಗ್ನಿವೇಶ್

ಅಮಿರ್ ಖಾನ್ ನಟನೆಯ ಪಿಕೆ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಎಂದು ಆರ್ಯ ಸಮಾಜದ ನಾಯಕ ಸ್ವಾಮಿ ಅಗ್ನಿವೇಶ್...

ನವದೆಹಲಿ:  ಅಮಿರ್ ಖಾನ್ ನಟನೆಯ ಪಿಕೆ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಎಂದು ಆರ್ಯ ಸಮಾಜದ ನಾಯಕ ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ.

ಪಿಕೆ ಚಿತ್ರದಲ್ಲಿ ಉತ್ತಮ ಸಂದೇಶವಿದ್ದು, ಇದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತದೆ. ಧರ್ಮದ ಹೆಸರಿನಲ್ಲಿ ಮೂಢನಂಬಿಕೆ ಮತ್ತು ದೇವಮಾನವರನ್ನು ಆರಾಧಿಸುವ ಜನರಿಗೆ ಪಿಕೆ ಕಣ್ಣುತೆರೆಸುವಂತೆ ಮಾಡಿದೆ ಎಂದು ಬಂಧುವಾ ಮುಕ್ತಿ ಮೋರ್ಚಾ ಸಂಘದ ಪ್ರಕಟಣೆಯಲ್ಲಿ ಅಗ್ನಿವೇಶ್ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ಸ್ವಾಮಿ ರಾಮ್‌ದೇವ್‌ನಂಥಾ ಧಾರ್ಮಿಕ ನಾಯಕ ಹಾಗೂ ಇತರ ಧಾರ್ಮಿಕ ಸಂಘಟನೆಗಳಾದ  ವಿಶ್ವ ಹಿಂದೂ ಪರಿಷತ್ ಅಥವಾ ಜಮಾತ್ ಇ  ಇಸ್ಲಾಮಿ ಹಿಂದ್ ಸಂಘಟನೆಗಳ ಬಣ್ಣದ ಮಾತುಗಳಿಗೆ ಮರುಳಾಗಬೇಡಿ ಎಂದು ಹೇಳಿದ ಅಗ್ನಿವೇಶ್, ಪಿಕೆ ಭಕ್ತಿಯ ಹೆಸರನ್ನು ಜನರನ್ನು ಶೋಷಣೆಗೊಳಪಡಿಸುವ ಪದ್ಧತಿಯ ಬಗ್ಗೆ ದನಿಯೆತ್ತಿದೆ ಎಂದಿದ್ದಾರೆ.

ಧಾರ್ಮಿಕ ನೇತಾರರು ಮತ್ತು ಸಂಘಟನೆಗಳು ಭಕ್ತರನ್ನು ಭಯಭೀತರನ್ನಾಗಿಸುವುದು ಸಹಜ. ಇಂಥಾ ಮೂಢನಂಬಿಕೆಗಳನ್ನು ಪಿಕೆ ಪ್ರಶ್ನಿಸಿದೆ.

ಆದಾಗ್ಯೂ, ಧಾರ್ಮಿಕ ಮುಖಂಡರು ಪ್ರಸ್ತುತ ಸಿನಿಮಾದ ಸ್ಕ್ರೀನಿಂಗ್ ಸರ್ಟಿಫಿಕೇಟ್‌ನ್ನು ಪುನವಿಮರ್ಶೆಗೊಳಪಡಿಸಬೇಕೆಂದು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದಕ್ಕಾಗಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ಸ್ ಮುಖ್ಯಸ್ಥೆ ಲೀಲಾ ಸಾಮ್‌ಸನ್ ಅವರನ್ನು ಅಗ್ನಿವೇಶ್ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT