ದಾಖಲೆ ಇಲ್ಲದ ರು. 54 ಲಕ್ಷ ನಗದು ವಶ, ಇಬ್ಬರ ಬಂಧನ
ಹೊಸಪೇಟೆ: ಸೂಕ್ತ ದಾಖಲೆಗಳಿಲ್ಲದೆ ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ 54 ಲಕ್ಷ ನಗದನ್ನು ವಶಪಡಿಸಿಕೊಂಡ ಹೊಸಪೇಟೆ ಪೊಲೀಸರು ಶನಿವಾರ ಬೆಳಗ್ಗೆ ಇಬ್ಬರನ್ನು ಬಂಧಿಸಿದ್ದಾರೆ.
ಹೈದರಾಬಾದ್‌ನಿಂದ ಶಿವಮೊಗ್ಗಕ್ಕೆ ಖಾಸಗಿ ಬಸ್‌ನಲ್ಲಿ ಹೊರಟಿದ್ದ ಉತ್ತರಪ್ರದೇಶ ಮೂಲದ ರಂಜನ್‌ಕುಮಾರ್ ಮತ್ತು ರಾಜಕುಮಾರ್ ಚಂದ್ರವಂಶಿ ಅವರು ಹಣ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಅವರಿಬ್ಬರನ್ನು ವಿಚಾರಿಸಿದಾಗ ಅದು ಅಕ್ರಮ ಹಣ ಎಂದು ತಿಳಿದಿದೆ. ರು. 54 ಲಕ್ಷ ವಶಪಡಿಸಿಕೊಂಡು, ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಅಷ್ಟೊಂದು ಹಣವನ್ನು ಯಾರಿಂದ ಯಾರಿಗೆ ಸಾಗಿಸುತ್ತಿದ್ದರು ಎಂಬ ಕುರಿತು ಸರಿಯಾದ ಮಾಹಿತಿ ಹೇಳದ ಕಾರಣ ಮತ್ತು ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲದ ಕಾರಣ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.