ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜಾಮೀನು ಸಿಗದಂತೆ ಅರ್ಜಿ

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯದಲ್ಲಿ ಜಿಂಕೆ ಕೊಂದ ಆರೋಪ ಹೊತ್ತ ಮೈಸೂರಿನ ಸಿಐಡಿ ...

Rashmi Kasaragodu
Updated On : 3 Feb 2014, 12:35 pm

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯದಲ್ಲಿ ಜಿಂಕೆ ಕೊಂದ ಆರೋಪ ಹೊತ್ತ ಮೈಸೂರಿನ ಸಿಐಡಿ ಡಿವೈಎಸ್ಪಿ ಟಿ.ಕೆ.ಧರ್ಮೇಶ್ ಸೇರಿದಂತೆ 6 ಮಂದಿ ಜಿಂಕೆ ಹಂತಕರಿಗೆ ಜಾಮೀನು ಸಿಗದಂತೆ ಫೆ.3ರಂದು ನಂಜನಗೂಡಿನ ನ್ಯಾಯಾಲಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಕರಾರು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಓಂಕಾರ ಅರಣ್ಯದಲ್ಲಿ ಜಿಂಕೆ ಕೊಂದವರಲ್ಲಿ ಪ್ರಮುಖ ಆರೋಪಿ ಎಂದು ಹೇಳಲಾದ ಡಿವೈಎಸ್ಪಿ ಟಿ.ಕೆ.ಧರ್ಮೇಶ್ ಜಾಮೀನು ಪಡೆಯಬಾರದು ಎಂದು ಅರಣ್ಯ ಅಧಿಕಾರಿಗಳು ತಂತ್ರ ರೂಪಿಸಿದ್ದಾರೆ. ಜಾಮೀನು ಸಿಕ್ಕರೆ ಪ್ರಭಾವಿ ಅಧಿಕಾರಿಯಾಗಿರುವ ಜತೆಗೆ ಪ್ರಭಾವಿ ರಾಜಕಾರಣಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಹಾಯದಿಂದ ಕೇಸ್ ತಿರುವು ಮಾಡುವ ಸಾಧ್ಯತೆ ಇರುವ ಕಾರಣ ಫೆ.3ರಂದು ನಂಜನಗೂಡಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹೆಡಿಯಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಕರಾರು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement