ಮಾಧ್ಯಮ ಪ್ರಶಸ್ತಿಯಲ್ಲಿ 'ಕನ್ನಡಪ್ರಭ'ದ ಮೂವರು
ಕ.ಪ್ರ.ವಾರ್ತೆ , ಬೆಂಗಳೂರು , ಫೆ. 6
ಕರ್ನಾಟಕ ಮಾಧ್ಯಮ ಅಕಾಡೆಮಿ 2012 ಮತ್ತು 2013ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಅಂಕಣಕಾರ ಎಚ್.ಎಸ್. ಬಲರಾಂ, 'ಕನ್ನಡಪ್ರಭ'ದ ರಾಘವೇಂದ್ರಭಟ್, ದಯಾಶಂಕರ ಮೈಲಿ, ಉಗಮ ಶ್ರೀನಿವಾಸ್, ಸುವರ್ಣ ವಾಹಿನಿ ಸಂಪಾದಕ ಅನಂತ ಚಿನಿವಾರ್ ಸೇರಿದಂತೆ ಒಟ್ಟು 57 ಮಂದಿಗೆ ಮತ್ತು ಎರಡು ಮಾಧ್ಯಮ ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆ ಮಾಡಿದೆ.
ಬಲರಾಂ ಅವರಿಗೆ 2012ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. 'ಕನ್ನಡಪ್ರಭ'ದ ಬೆಂಗಳೂರು ಪ್ರಧಾನ ವರದಿಗಾರ ರಾಘವೇಂದ್ರಭಟ್, ಹಾಸನ ಜಿಲ್ಲಾ ವರದಿಗಾರ ದಯಾಶಂಕರ ಮೈಲಿ ಅವರಿಗೆ 2013ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಬಂದಿದ್ದರೆ, ತುಮಕೂರು ಜಿಲ್ಲಾ ವರದಿಗಾರ ಉಗಮ ಶ್ರೀನಿವಾಸ್ ಅವರ 'ಬತ್ತಿದ ಅಂತರ್ಜಲ- ಎದೆಹಾಲು ಹಾಲಾಹಲ' ವರದಿಗೆ 2012ನೇ ಸಾಲಿನ ಅಭಿಮಾನಿ ಪ್ರಶಸ್ತಿ ಬಂದಿದೆ.
ಜ.23ರಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಶಸ್ತಿ ಪುರಷ್ಕೃತರನ್ನು ಆಯ್ಕೆ ಮಾಡಲಾಗಿದೆ. 2012ನೇ ಸಾಲಿನಲ್ಲಿ ಒಬ್ಬರಿಗೆ ಜೀವಮಾನ ಸಾಧನೆ ಮತ್ತು 20 ಮಂದಿಗೆ ವಾರ್ಷಿಕ ಪ್ರಶಸ್ತಿ ನೀಡಲಾಗಿದೆ. ಅದೇ ರೀತಿ 2013ನೇ ಸಾಲಿನಲ್ಲಿ ಇಬ್ಬರಿಗೆ ಜೀವಮಾನ ಸಾಧನೆ ಮತ್ತು 30 ಮಂದಿಗೆ ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ. ಇದಲ್ಲದೆ, ಎರಡೂ ವರ್ಷಗಳಲ್ಲಿ ತಲಾ ಒಬ್ಬರಿಗೆ ಆಂದೋಲನ, ಅಭಿಮಾನಿ ಹಾಗೂ ಮೈಸೂರು ದಿಗಂತ ಪ್ರಶಸ್ತಿ ನೀಡಲಾಗಿದೆ.
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ಅದೇ ರೀತಿ ಆಂದೋಲನ, ಅಭಿಮಾನಿ ಮತ್ತು ಮೈಸೂರು ದಿಗಂತ ಪ್ರಶಸ್ತಿ ವಿಜೇತರಿಗೆ ತಲಾ 10 ಸಾವಿರ ನಗದು ಪುರಸ್ಕಾರ ನೀಡಲಾಗುವುದು. ಇದೇ ತಿಂಗಳ 2 ಅಥವಾ 3ನೇ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಆರ್. ರೋಷನ್ ಬೇಗ್, ರಾಮಲಿಂಗಾರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ತಿಳಿಸಿದ್ದಾರೆ.
ಅಂಕಣಕಾರ ಎಚ್.ಎಸ್. ಬಲರಾಂಗೆ ಜೀವಮಾನ ಸಾಧನೆ ಪ್ರಶಸ್ತಿ
ಆಂದೋಲನ ಪ್ರಶಸ್ತಿ (ಜಿಲ್ಲಾ ಪತ್ರಿಕೆ)
- 2012- ನಮ್ಮ ನಾಡು, ಶಿವಮೊಗ್ಗ
- 2013- ಕಿತ್ತೂರು ಕರ್ನಾಟಕ, ಗದಗ
ಮೈಸೂರು ದಿಗಂತ ಪ್ರಶಸ್ತಿ (ಮಾನವೀಯ ಸಮಸ್ಯೆ ಲೇಖನ)
- 2012- ಚೇತನ್ ಪಡುಬಿದ್ರೆ, ಉದಯವಾಣಿ- ಅಂಗವೈಕಲ್ಯ ಅಡ್ಡಿಯಾಯಿತೇ?
- 2013- ರಾಜ ಮನ್ನಾರ್, ಈ ಸಂಜೆ- ಸರ್ಕಾರಗಳನ್ನು ಗಡಗಡ ನಡುಗಿಸುವ ಈರುಳ್ಳಿ ಕಣ್ಣೀರಿನಿಂದಲೇ ಕೋಟ್ಯಧಿಪತಿಗಳು.
ಪ್ರಶಸ್ತಿ ವಿಜೇತರ ಪಟ್ಟಿ -2012
ಜೀವಮಾನದ ಸಾಧನೆ ವಿಶೇಷ ಪ್ರಶಸ್ತಿ: ಎಚ್.ಎಸ್. ಬಲರಾಂ (ಅಂಕಣಕಾರರು)
ವಾರ್ಷಿಕ ಪ್ರಶಸ್ತಿ: ತಿಮ್ಮಪ್ಪ ಭಟ್ (ವಿಜಯವಾಣಿ ಸಂಪಾದಕ), ಇ.ವಿ. ಸತ್ಯನಾರಾಯಣ (ಪ್ರಜಾವಾಣಿ ನಿವೃತ್ತ ಸುದ್ದಿ ಸಂಪಾದಕ), ಯಗಟಿ ಕೃಷ್ಣಮೂರ್ತಿ (ಬೆಂಗಳೂರು), ಅನಂತ ಚಿನಿವಾರ್ (ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ), ಬಿ.ಎಂ. ಹನೀಫ್ (ದಕ್ಷಿಣ ಕನ್ನಡ), ಕೆ.ಎಸ್. ಶಾಂತಾರಾಮ್ (ಹಿರಿಯ ಛಾಯಾಚಿತ್ರಕಾರ- ಬೆಂಗಳೂರು), ಮು. ಷಣ್ಮುಗಂ (ತುಮಕೂರು), ಖಾದ್ರಿ ಎಸ್. ಅಚ್ಯುತನ್ (ದೂರದರ್ಶನ ನಿವೃತ್ತ ನಿರ್ದೇಶಕ), ಜಿ.ಎನ್. ಮೋಹನ್ (ತುಮಕೂರು), ಬಿ.ಆರ್. ಶ್ರೀಕಾಂತ್ (ಕೋಲಾರ), ರೂಪಾ ರಾಜೀವ್ ರಾವ್ (ಬೆಂಗಳೂರು), ಜಿ.ಎಸ್. ನಾರಾಯಣರಾವ್ (ಕೋಲಾರ), ಜಿ.ವಿ. ಚೂಡಾನಾಥ ಅಯ್ಯರ್ (ಚಿಕ್ಕಮಗಳೂರು), ಸುರೇಂದ್ರ ಎಸ್. ವಾಗ್ಲೆ (ವಿಜಯವಾಣಿ, ದಕ್ಷಿಣ ಕನ್ನಡ), ಮಲ್ಲಿಕಾರ್ಜುನ ಸಿದ್ದಣ್ಣವರ್ (ಬಾಗಲಕೋಟೆ), ರೌಫ್ ಅಹಮದ್ ಎ. ಹಳ್ಳೂರ್ (ಬಾಗಲಕೋಟೆ ಈ ಟಿವಿ ಉರ್ದು), ಬಿ. ವೆಂಕಟಸಿಂಗ್ (ರಾಯಚೂರು ಸುದ್ದಿಮೂಲ ಮುಖ್ಯ ವರದಿಗಾರ), ಚೆಲುವರಾಜು (ರಾಮನಗರ), ಎಚ್.ಎಸ್. ವೃಷಭರಾಜ್ (ತುಮಕೂರು), ಬಿ.ಎಂ. ಪದಕಿ (ಹುಬ್ಬಳ್ಳಿ).
ಪ್ರಶಸ್ತಿ ವಿಜೇತರ ಪಟ್ಟಿ -2013
ಜೀವಮಾನದ ಸಾಧನೆ ವಿಶೇಷ ಪ್ರಶಸ್ತಿ: ಟಿ. ಸತೀಶ್ ಯು. ಪೈ (ಮಣಿಪಾಲ ಮೀಡಿಯಾ ನೆಟ್ವರ್ಕ್ ಮುಖ್ಯಸ್ಥ), ಪ್ರೊ.ಎಚ್.ಎಸ್. ಈಶ್ವರ್ (ನಿವೃತ್ತ ಪ್ರಾಧ್ಯಾಪಕರು, ಶಿವಮೊಗ್ಗ).
ವಾರ್ಷಿಕ ಪ್ರಶಸ್ತಿ: ರವಿ ಹೆಗಡೆ (ಸಮೂಹ ಸಂಪಾದಕರು, ಉದಯವಾಣಿ, ಬೆಂಗಳೂರು), ಸುಗತ ಶ್ರೀನಿವಾಸರಾಜು (ಸಂಪಾದಕರು, ವಿಜಯ ಕರ್ನಾಟಕ, ಬೆಂಗಳೂರು), ಪಿ.ಎಸ್. ಚಂದ್ರಶೇಖರ್ (ಉಡುಪಿ), ಬಿ.ವಿ. ನಾಗರಾಜು (ಬೆಂಗಳೂರು), ಆಶಾ ಕೃಷ್ಣಸ್ವಾಮಿ (ಡೆಕ್ಕನ್ ಹೆರಾಲ್ಡ್, ಬೆಂಗಳೂರು), ಎಸ್. ರವಿಕುಮಾರ್ (ಟಿವಿ9 ಪ್ರಧಾನ ನಿರ್ಮಾಪಕ), ಬಿ.ಎನ್. ಗುರುಮೂರ್ತಿ (ನಿವೃತ್ತ ಜಂಟಿ ನಿರ್ದೇಶಕ, ದೂರದರ್ಶನ), ಮಲ್ಲಿಕಾರ್ಜುನ ಬಿರಾದಾರ್ (ಬೀದರ್), ವಿಜಯ್ ಗ್ರೋವರ್ (ಬೆಂಗಳೂರು), ಸದಾಶಿವ ಶೆಣೈ (ದಕ್ಷಿಣ ಕನ್ನಡ), ಎಸ್.ಕೆ. ಶ್ಯಾಮಸುಂದರ್ (ವನ್ ಇಂಡಿಯಾ ಡಾಟ್ ಕಾಂ), ಎಂ.ಎನ್. ಗುರುಮೂರ್ತಿ (ಸಂಯುಕ್ತ ಕರ್ನಾಟಕ ಹಿರಿಯ ವರದಿಗಾರ), ದಯಾಶಂಕರ ಮೈಲಿ (ಕನ್ನಡಪ್ರಭ, ಹಿರಿಯ ವರದಿಗಾರ, ಹಾಸನ), ಕೆ. ಶಿವಕುಮಾರ್ (ಇಂಡಿಯನ್ ಎಕ್ಸ್ಪ್ರೆಸ್ ಹಿರಿಯ ವರದಿಗಾರ, ಮೈಸೂರು), ಕೂಡ್ಲಿ ಗುರುರಾಜ (ವಿಜಯ ನೆಕ್ಸ್ಟ್), ಬಿ.ಜಿ. ಗುಜ್ಜಾರಪ್ಪ (ವ್ಯಂಗ್ಯ ಚಿತ್ರಕಾರ, ತುಮಕೂರು), ಜಿ.ಎನ್. ಹನುಮಂತರಾಯಪ್ಪ (ಪಾವಗಡ), ಎಂ.ಎಸ್. ಮಣಿ (ಬೆಂಗಳೂರು), ಅಫ್ಸಾನ್ ಯಾಸ್ಮೀನ್ (ಹಿರಿಯ ವರದಿಗಾರರು, ದಿ ಹಿಂದೂ), ಎನ್. ನಾಗರಾಜ್ (ಸಂಪಾದಕ, ಈಶಾನ್ಯ ಟೈಮ್ಸ್, ರಾಯಚೂರು), ಕೆ.ಎಸ್. ಗಣೇಶ್ (ಕೋಲಾರ), ವಿ. ಮಹೇಶ್ ಕುಮಾರ್ (ಸಂಪಾದಕ, ಜಸ್ಟ್ ಕನ್ನಡ ಡಾಟ್ ಕಾಂ), ಪ್ರಗತಿ ಗೋಪಾಲಕೃಷ್ಣ (ಹಿರಿಯ ಛಾಯಾಚಿತ್ರಕಾರ, ಮೈಸೂರು), ಎನ್. ಮಂಜುನಾಥ್ (ಸಂಪಾದಕ, ಕ್ರಾಂತಿದೀಪ, ಶಿವಮೊಗ್ಗ), ರಾಜಶೇಖರ ಹತಗುಂದಿ (ಗುಲ್ಬರ್ಗಾ), ಸೈಯದ್ ಫೂರ್ ಪಾಷಾ ಖಾದ್ರಿ (ಡೈಲಿ ಸಾಲಾರ್, ಬೆಂಗಳೂರು), ಎಂ.ಎಸ್. ರಾಜೇಂದ್ರ ಕುಮಾರ್ (ಹಿರಿಯ ವರದಿಗಾರ, ಪ್ರಜಾವಾಣಿ, ಮೈಸೂರು), ತಿಪ್ಪಣ್ಣ ಬೋಸ್ಲೆ (ಸಂಪಾದಕ, ಕಾರಂಜ ಎಕ್ಸ್ಪ್ರೆಸ್, ಬೀದರ್), ಎಚ್.ಎಸ್. ರಾಮಣ್ಣ (ತುಮಕೂರು), ರಾಘವೇಂದ್ರಭಟ್ (ಪ್ರಧಾನ ವರದಿಗಾರ, ಕನ್ನಡಪ್ರಭ).
ಅಭಿಮಾನ ಪ್ರಶಸ್ತಿ (ಸಾಮಾಜಿಕ ಸಮಸ್ಯೆ ಲೇಖನ)
2012- ಉಗಮ ಶ್ರೀನಿವಾಸ್, ಕನ್ನಡಪ್ರಭ, ತುಮಕೂರು- ಬತ್ತಿದ ಅಂತರ್ಜಲ, ಎದೆಹಾಲು ಹಾಲಾಹಲ.
2013- ಸಚ್ಚಿದಾನಂದ ಕುರಗುಂದ, ಪ್ರಜಾವಾಣಿ- ಬಾರದ ಮಳೆ, ಎಳೆದಿದೆ ಬರೆ