ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶೀಲಾ ವಿರುದ್ಧ ತನಿಖೆ

Vishwanath S
Updated On : 7 Feb 2014, 12:44 pm

ನವದೆಹಲಿ:  ಕಾಮನ್ವೆಲ್ತ್ ಹಗರಣ ಮತ್ತೆ ಸುದ್ದಿಗೆ ಬಂದಿದೆ. ಕೇಂದ್ರ  ನೇಮಕ ಮಾಡಿದ್ದ ಸಮಿತಿ ವರದಿ ಅನ್ವಯ ತಪ್ಪಿತಸ್ಥರ ವಿರುದ್ಧ ತನಿಖೆಗೆ ಅರವಿಂದ್ ಕೇಜ್ರಿವಾಲ್  ಸರ್ಕಾರ ಆದೇಶಿಸಿದೆ.
ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಮನೀಷ್ ಸಿಸೋಡಿಯಾ ಹೇಳಿದ್ದಾರೆ.  ಹೀಗಾಗಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಮಾಜಿ ಲೆ. ಗವರ್ನರ್ ತೇಜಿಂದರ್ ಖನ್ನಾಗೆ ಸಂಕಷ್ಟದ ದಿನಬರುವ ಅಪಾಯ ಎದುರಾಗಿದೆ. ಇದೇ ವೇಳೆ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ ಶೀಲಾ ಹೆಸರು ನಾಪತ್ತೆಯಾಗಿದೆ.

ಕಲಾಪಕ್ಕೆ ಹಲವು ಅಡ್ಡಿ
ನವದೆಹಲಿ:
ತೆಲಂಗಾಣ ಸೇರಿದಂತೆ ಹಲವಾರು ವಿಷಯಗಳ ಸಂಬಂಧ ಗುರುವಾರ ಕೂಡ ಸಂಸತ್‌ನ ಉಭಯ ಸದನಗಳಲ್ಲಿ ಕಲಾಪ ನಡೆಯಲಿಲ್ಲ.
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಕಾಂಗ್ರೆಸ್ ಮತ್ತು ಟಿಡಿಪಿ ಸಂಸದರು ಗದ್ದಲ ಆರಂಭಿಸಿದರು. ಇದಕ್ಕೆ ವೈಎಸ್‌ಆರ್ ಕಾಂಗ್ರೆಸ್ ಸಂಸದರೂ ದನಿಗೂಡಿಸಿದರು. ಟಿಆರ್‌ಎಸ್ ಪಕ್ಷದ ಸಂಸದರು ತೆಲಂಗಾಣ ರಾಜ್ಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಹೀಗಾಗಿ ಸದನ ಸಂಪೂರ್ಣ ಗದ್ದಲಮಯವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement