ತೇಜ್ಪಾಲ್ ವಿರುದ್ಧ ಚಾರ್ಜ್ಶೀಟ್
ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ವಿರುದ್ಧ ಗೋವಾ ಪೊಲೀಸರು ಸೋಮವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಅತ್ಯಾಚಾರ...
ಪಣಜಿ: ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ವಿರುದ್ಧ ಗೋವಾ ಪೊಲೀಸರು ಸೋಮವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಅತ್ಯಾಚಾರ, ಲೈಂಗಿಕ ಕಿರುಕುಳ, ಮಹಿಳೆಯ ಗೌರವಕ್ಕೆ ಧಕ್ಕೆ ಆರೋಪಗಳನ್ನು ತೇಜ್ಪಾಲ್ ವಿರುದ್ಧ ಹೊರಿಸಲಾಗಿದೆ.
ಗೋವಾ ಪೊಲೀಸರು 2,684 ಪುಟಗಳ ಆರೋಪಪಟ್ಟಿಯನ್ನು ಚೀಫ್ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್ ಅನುಜಾ ಪ್ರಭುದೇಸಾಯಿ ಅವರಿಗೆ ಸಲ್ಲಿಸಿದ್ದಾರೆ.
ತೇಜ್ಪಾಲ್ ಅವರು ಅತ್ಯಾಚಾರ, ಲೈಂಗಿಕ ಕಿರುಕುಳ ನೀಡಿದ್ದನ್ನು ಒಪ್ಪಿಕೊಂಡಿದ್ದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ತೇಜ್ಪಾಲ್ ವಿರುದ್ಧದ ಆರೋಪ ಸಾಬೀತಾದರೆ ಅವರು 7 ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗಬಹುದು. ಸಹೋದ್ಯೋಗಿ ಪತ್ರಕರ್ತೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ತೇಜ್ಪಾಲ್ರನ್ನು ನ.30ರಂದು ಬಂಧಿಸಲಾಗಿತ್ತು. ಸದ್ಯ ಅವರನ್ನು ಗೋವಾದ ವಾಸ್ಕೋದಲ್ಲಿನ ಸಬ್ಜೈಲಿನಲ್ಲಿ ಇರಿಸಲಾಗಿದೆ.