ದ್ರಾವಿಡ್, ಮುನಿಯಪ್ಪ, ಖಮರುಲ್ ಸೇರಿ 12 ಗಣ್ಯರಿಗೆ ಗುಲ್ಬರ್ಗ ವಿವಿ ಗೌಡಾ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.19
ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ರಾಜ್ಯ ವಕ್ಫ್ ಸಚಿವ ಖಮರುಲ್ ಇಸ್ಲಾಂ ಸೇರಿದಂತೆ ಒಟ್ಟು 12 ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಕಟಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗುಲ್ಬಗ ವಿವಿ ಕುಲಪತಿ ಡಾ. ಪುಟ್ಟಯ್ಯ, 'ಫೆ.20ರಂದು ನಡೆಯುವ ಗುಲ್ಬರ್ಗ ವಿವಿಯ 32ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು' ಎಂದರು.
ಗೌರವ ಡಾಕ್ಟರೇಟ್ ಬಗೆಗಿನ ಆಯ್ಕೆ ವಿಚಾರ, ಮಾನದಂಡಗಳು, ಸಂಖ್ಯಾಬಲದ ಬಗ್ಗೆ ಸುದ್ದಿಗಾರರು ಹತ್ತು ಹಲವು ಪ್ರಶ್ನೆಗಳನ್ನು ಕೇಳಿದರಾದರೂ ಕುಪಲತಿ ಡಾ. ಪುಟ್ಟಯ್ಯ, ಸಾಧಕರು ಇದ್ದಾರೆ. ಅವರಿಗೆ ಗೌಡಾ ನೀಡಲಾಗುತ್ತಿದೆ. ಈ ವಿಚಾರದಲ್ಲಿ ಚರ್ಚೆ ಬೇಡ ಎಂದಷ್ಟೆ ಹೇಳಿ ಸುಮ್ಮನಾದರು.
ಗೌಡಾ ಪಡೆದವರು: ರಾಹುಲ್ ದ್ರಾವಿಡ್, ಕೇಂದ್ರ ಸಚಿವ ಮುನಿಯಪ್ಪ, ರಾಜ್ಯ ವಕ್ಫ್ ಸಚಿವ ಖಮರುಲ್ ಇಸ್ಲಾಂ, ಮೌಂಟ್ ಅಬುವಿನ ರಾಜಯೋಗಿನಿ ದಾದಿ ರತನ್ ಮೋಹಿನಿ, ಹಾರಕೂಡವಿನ ಚೆನ್ನವೀರ ಶಿವಾಚಾರ್ಯರು, ಸೊನ್ನದ ಶಿವಾನಂದ ಸ್ವಾಮಿಗಳು, ಶಿವರಾಂ ಮೋಘಾ, ಧರೆಪ್ಪ ವೈ. ಉಪ್ಪಾರ್, ಬೆಂಗಳೂರಿನ ಮೋಹನ್ ಮಂಗ್ನಾನಿ, ಪತ್ರಕರ್ತ ರಾಜಶೇಖರ್ ಹತಗುಂದಿ, ಕೃಷ್ಣಾಜಿ ಕುಲಕರ್ಣಿ, ಶರದ್ ರಾಂಪೊರೆ.