ಪುರುಷ ಬೆಂಬಲ ಇಲ್ಲದೆ ಗೆದ್ದ ಮಹಿಳೆಯರ ಕಥೆ ಹೇಳಿ?
ನೀವು ಕಂಡ ಛಲಗಾತಿ ಮಹಿಳೆಯರ...
ಕೆಲವೊಮ್ಮೆ ಪುರುಷನ ಬೆಂಬಲ ಅಥವಾ ಕಿಂಚಿತ್ತು ಸಹಾಯವೂ ಪುರುಷನಿಂದ ದೊರೆಯದಿದ್ದರೂ ಮಹಿಳೆ ಜೀವನವನ್ನು ನಿಭಾಯಿಸುತ್ತಾರೆ. ಅದೇನೂ ಅಸಹಾಯಕತೆ ಅಲ್ಲವಾದರೂ ಅಲ್ಲಿ ಎದುರಿಸಬೇಕಾದ ಸವಾಲುಗಳು ಬೆಟ್ಟದಷ್ಟು. ಅಂಥ ಇಡೀ ಜಗತ್ತೇ ತಬ್ಬಲಿ ಮಾಡಿ ಹೋದ ಕ್ಷಣದಲ್ಲಿ ಮಹಿಳೆಯೊಬ್ಬಳು ಯಶಸ್ವಿಯಾಗಿ ಬದುಕು ನಡೆಸುವುದಿದೆಯಲ್ಲ, ಅದಕ್ಕೆ ನಮ್ಮ ಸಲಾಂ! ಅಂಥಹ ಬದುಕಿನ ಕೆಲವು ಪುಟಗಳನ್ನು, ಅವರ ಸಾಧನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ. ಅದು ನೀವು ಕಂಡ ಛಲಗಾತಿ ಮಹಿಳೆಯರ ಅಥವಾ ನಿಮ್ಮ ಅನುಭವದ ಕಥನವಾಗಿರಲಿ. ಈ ಲೇಖನಗಳನ್ನು ಅಂತರಾಷ್ಟ್ರೀಯ ಮಹಿಳಾ ದಿನದಂದು ಕನ್ನಡಪ್ರಭ.ಕಾಮ್ ನಲ್ಲಿ ಬಳಸಲಾಗುವುದು.
ಇಲ್ಲಿ ಪದಗಳ ಮಿತಿ ಇಲ್ಲ. ನಿಮ್ಮ ಬರಹದೊಂದಿಗೆ ಸಂಬಂಧಿಸಿದ ಫೋಟೋ ಕಳುಹಿಸಿ. email-kponline@kannadaprabha.com