ಸಂಸದರ ನಿಧಿ ಬಳಕೆ: ಜೋಶಿ ಫಸ್ಟ್
ಕೊಪ್ಪಳ: ಲೋಕಸಭಾ ಚುನಾವಣೆ ದಿನಾಂಕ ನಿಗದಿ ಮಾತ್ರ ಬಾಕಿ ಇದೆ. ವಿವಿಧ ಪಕ್ಷಗಳು ಚುನಾವಣೆಗೆ ಭರ್ಜರಿ ತಯಾರಿ ನಡೆಸಿವೆ. ಹಾಲಿ ಸಂಸದರಿಗೆ ಟಿಕೆಟ್ ನೀಡಬೇಕೋ ಬೇಡವೋ ಎನ್ನುವ ಚರ್ಚೆಯಾಗುತ್ತಿದೆ. ಪಕ್ಷ ಹಾಗೂ ತಮ್ಮ ವರ್ಚಸ್ಸು ಉಳಿಸಿಕೊಂಡವರ ಪರಾಮರ್ಶೆ ನಡೆದಿದೆ. ಈ ವೇಳೆ ತಮಗೆ ಬಂದಿರುವ ಅನುದಾನವನ್ನು ಹಾಲಿ ಸಂಸದರು ಎಷ್ಟರ ಮಟ್ಟಿಗೆ ಬಳಕೆ ಮಾಡಿಕೊಂಡಿದ್ದಾರೆ ಎಂಬುದೂ ಕುತೂಹಲದ ಅಂಶ.
ರಾಜ್ಯದ 28 ಸಂಸದರು ಬಳಕೆ ಮಾಡಿರುವ ಅನುದಾನದ ಮಾಹಿತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ಗರಿಷ್ಠ ಅನುದಾನ ಬಳಸಿದ ಸಂಸದರಲ್ಲಿ ಧಾರವಾಡ ಕ್ಷೇತ್ರದ ಪ್ರಹ್ಲಾಧಅ್ ಜೋಶಿ ಮೊದಲಿಗರಾಗಿದ್ದರೆ. ಮಂಡ್ಯ ಸಂಸದೆ ರಮ್ಯಾ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು ಇತ್ತೀಚೆಗಷ್ಟೇ ಆಯ್ಕೆಯಾಗಿರುವುದರಿಂದ ಅವರ ಸಂಸದ ನಿಧಿ ಬಳಕೆ ಲೆಕ್ಕಾಚಾರವನ್ನು ಇಲ್ಲಿ ಪರಿಗಣಿಸಿಲ್ಲ.
ಎಲ್ಲ ಸಂಸದರಿಗೆ ಐದು ವರ್ಷಗಳಲ್ಲಿ 19 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಕೆಲವರಿಗೆ ಪೂರ್ಣ ಅನುದಾನ ಇನ್ನೂ ಬಂದಿಲ್ಲ. ಆದರೂ ಸರಾಸರಿ 17 ಕೋಟಿ ಅನುದಾನ ಬಂದಿದೆ. ಬಳಕೆ ನಿಧಾನವಾಗಿರುವ ಸಂಸದರಿಗೆ ಅನುದಾನವೂ ಕಡಿಮೆ ಬಂದಿದೆ. ಶೇಕಡಾವಾರು ಅನುದಾನ ಬಳಕೆಯಲ್ಲಿ ಮುಂದಿರುವ ಪ್ರಹ್ಲಾದ್ ಜೋಶಿಯವರಿಗೆ ಕೇವಲ 12.11 ಕೋಟಿ ಸಂಸದರ ನಿಧಿ ಬಿಡುಗಡೆಯಾಗಿದ್ದು ಮಾತ್ರ ಅಚ್ಚರಿ. ಆದರೆ, ಇನ್ನೂ ಕೆಲವು ಬಿಜೆಪಿ ಸಂಸದರಿಗೆ ಕಾಂಗ್ರೆಸ್ ಸದಸ್ಯರಿಗಿಂತಲೂ ಹೆಚ್ಚು ಅನುದಾನ ಬಂದಿರುವ ಕಾರಣ ಪಕ್ಷದ ಆಧಾರದಲ್ಲಿ ವಿಶ್ಲೇಷಣೆ ಮಾಡಲಾಗದು. ಹೀಗಿದ್ದರೂ ಪ್ರಹ್ಲಾದ್ ಜೋಶಿ 12.61 ಕೋಟಿ ವೆಚ್ಚ ಮಾಡಿದ್ದಾರೆ. ಹೀಗಾಗಿ ಅವರು ಶೇ.104ರಷ್ಟು ಅನುದಾನ ಬಳಸಿದಂತಾಗಿದೆ.
1. ಧಾರವಾಡ- ಪ್ರಹ್ಲಾದ ಜೋಶಿ 12.11 12.61 104.15
2. ಕೋಲಾರ- ಕೆ.ಎಚ್. ಮುನಿಯಪ್ಪ 12.11 11.56 95.48
3. ದ.ಕನ್ನಡ- ನಳೀನಕುಮಾರ ಕಟೀಲ್ 17.11 15.96 93.29
4. ರಾಯಚೂರು- ಎಸ್. ಫಕೀರಪ್ಪ 12.11 10.74 88.71
5. ಚಾಮರಾಜನಗರ- ರಂಗಸ್ವಾಮಿ 17.11 15.08 88.15
6. ಬೆಂ. ಉತ್ತರ- ಡಿ.ಬಿ. ಚಂದ್ರೇಗೌಡ 17.11 14.84 86.75
7. ಬೀದರ್- ಎನ್. ಧರ್ಮಸಿಂಗ್ 14.61 12.53 85.78
8. ದಾವಣಗೆರೆ- ಜಿ.ಎಂ. ಸಿದ್ದೇಶ್ವರ 17.11 14.67 85.75
9. ಹಾವೇರಿ- ಶಿವಕುಮಾರ ಉದಾಸಿ 14.61 12.41 84.96
10. ಶಿವಮೊಗ್ಗ- ರಾಘವೇಂದ್ರ 14.61 12.37 84.68
11. ಚಿತ್ರದುರ್ಗ- ಜನಾರ್ದನಸ್ವಾಮಿ 14.61 12.37 84.68
12. ಬೆಂ. ದಕ್ಷಿಣ- ಅನಂತಕುಮಾರ 14.61 11.91 81.54
13. ಗುಲ್ಬರ್ಗ- ಮಲ್ಲಿಕಾರ್ಜುನ ಖರ್ಗೆ 17.11 13.60 79.50
14. ತುಮಕೂರು- ಜಿ.ಎಸ್. ಬಸವರಾಜ 14.61 11.51 76.33
15. ಕೊಪ್ಪಳ- ಶಿವರಾಮಗೌಡ 14.61 11.10 75.99
16. ಬಾಗಲಕೋಟೆ- ಪಿ.ಸಿ. ಗದ್ದಿಗೌಡರ 17.11 12.71 74.30
17. ಹಾಸನ- ಎಚ್.ಡಿ. ದೇವೇಗೌಡ 14.61 10.71 73.32
18. ಮೈಸೂರು- ಎ.ಎಚ್.ವಿಶ್ವನಾಥ 14.61 10.48 71.75
19. ಚಿಕ್ಕಬಳ್ಳಾಪುರ- ಎಂ.ವೀರಪ್ಪ ಮೊಯ್ಲಿ 14.61 10.19 69.76
20. ಚಿಕ್ಕೋಡಿ- ರಮೇಶ ವಿಶ್ವನಾಥ ಕತ್ತಿ 14.61 10.8 69.1
21. ಬೆಳಗಾವಿ- ಸುರೇಶ ಅಂಗಡಿ 14.61 10.5 68.80
22. ಉಡುಪಿ- ಜಯಪ್ರಕಾಶ ಹೆಗ್ಡೆ 17.11 11.2 64.42
23. ಬಿಜಾಪುರ- ರಮೇಶ ಜಿಗಜಿಣಗಿ 12.11 7.5 58.23
24. ಉ.ಕನ್ನಡ- ಅನಂತಕುಮಾರ ಹೆಗಡೆ 12.11 6.80 56.17
25. ಬಳ್ಳಾರಿ- ಜೆ. ಶಾಂತಾ 12.11 5.89 48.65
26. ಬೆಂ. ಕೇಂದ್ರ- ಪಿ.ಸಿ. ಮೋಹನ್ 12.11 5.30 43.78
ಸೋಮರಡ್ಡಿ ಅಳವಂಡಿ