ಆಶ್ವಾಸನೆಗೆ ಅಂಕುಶ
ಇನ್ನು ಮುಂದೆ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ತಮಗೆ ಬೇಕಾದಂತೆ ಕೊಡುಗೆಗಳನ್ನು ಘೋಷಿಸುವಂತಿಲ್ಲ...
ನವದೆಹಲಿ: ಇನ್ನು ಮುಂದೆ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ತಮಗೆ ಬೇಕಾದಂತೆ ಕೊಡುಗೆಗಳನ್ನು ಘೋಷಿಸುವಂತಿಲ್ಲ.
ಹೌದು. ಇಂತಹ ಬೇಕಾಬಿಟ್ಟಿ ಕೊಡುಗೆಗಳನ್ನು ಘೋಷಿಸುವುದಕ್ಕೆ ಕೇಂದ್ರ ಚುನಾವಣಾ ಆಯೋಗ ಕಡಿವಾಣ ಹಾಕಿದೆ. ಇಂತಹ ಆಶ್ವಾಸನೆ ನೀಡಬೇಕೆಂದರೆ ಅದಕ್ಕೆ ನ್ಯಾಯಸಮ್ಮತ ಕಾರಣವೇನು ಹಾಗೂ ಅದರ ಈಡೇರಿಕೆಗೆ ಹಣ ಒದಗಿಸುವ ಮಾರ್ಗೋಪಾಯಗಳೇನು ಎಂಬ ವಿವರಣೆಯನ್ನೂ ಪಕ್ಷಗಳು ನೀಡಬೇಕಾಗುತ್ತದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಇಂತಹ ನಿಯಮಗಳನ್ನು ರೂಪಿಸಿದೆ. ಮತದಾರರಿಗೆ ದೊಡ್ಡ ದೊಡ್ಡ ಆಶ್ವಾಸನೆಗಳನ್ನು ನೀಡಿ ಅವರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಪಕ್ಷಗಳು ಮಾಡುತ್ತವೆ. ಜತೆಗೆ ಇಂತಹ ಕೊಡುಗೆಗಳು ಅನೇಕ ಮತದಾರರ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಯಾವ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವೋ ಅವುಗಳನ್ನಷ್ಟೇ ನೀಡಬೇಕು ಎಂಬಿತ್ಯಾದಿ ಹೊಸ ಮಾರ್ಗಸೂಚಿಗಳನ್ನು ಆಯೋಗವು ಪಕ್ಷಗಳಿಗೆ ರವಾನಿಸಿದೆ.