ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಕ್ಷ ಬಿಟ್ಟು ಮತ್ತೆ ವಾಪಸ್ ಆದ ಆರ್‌ಜೆಡಿ ಶಾಸಕರು

ಮೊದಲು 13, ಬಳಿಕ 7, ಈಗ 4... ಇದು ಆರ್‌ಜೆಡಿ ಶಾಸಕರ ಪಕ್ಷಾಂತರ ಸಾಧನೆ. ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿ ಬಿಡಲು...

Rashmi Kasaragodu
Updated On : 26 Feb 2014, 12:58 pm

ಪಟನಾ: ಮೊದಲು 13, ಬಳಿಕ 7, ಈಗ 4... ಇದು ಆರ್‌ಜೆಡಿ ಶಾಸಕರ ಪಕ್ಷಾಂತರ ಸಾಧನೆ. ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿ ಬಿಡಲು ತಯಾರಾಗಿದ್ದ 13 ಶಾಸಕರಲ್ಲಿ ಇದೀಗ 9 ಮಂದಿ ವಾಪಸ್ ಬಂದಿದ್ದಾರೆ. ಇನ್ನುಳಿದ ನಾಲ್ವರಲ್ಲಿ ಕೆಲವರು ವಾಪಸ್ ಬರಲಿದ್ದಾರೆ ಎಂದು ಲಾಲು ಪ್ರಸಾದ್ ಹೇಳಿದ್ದಾರೆ. ಬಿಜೆಪಿ ಸಖ್ಯ ಮುರಿದುಕೊಂಡಿರುವ ನಿತೀಶ್ ಆರ್‌ಜೆಡಿ ಒಡೆಯುವ ಸಂಚು ರೂಪಿಸಿದ್ದಾರೆ ಎಂಬುದು ಲಾಲು ಆರೋಪ. ಇದೇ ವೇಳೆ ಎನ್‌ಡಿಎನತ್ತ ಮುಖ ಮಾಡಿರುವ ರಾಂ ವಿಲಾಸ್ ಪಾಸ್ವಾನ್ ಅವರ ಮನೆ ಮೇಲೆ ಸಿಬಿಐ ದಾಳಿ ನಡೆದಿದೆ. ಬೊಕಾರೋ ಹಗರಣದ ಸಂಬಂಧ ಈ ದಾಳಿ ನಡೆದಿದೆ ಎಂದು ಹೇಳಲಾಗಿದ್ದರೂ, ಎನ್‌ಡಿಎ ಜೊತೆ ಮೈತ್ರಿಗೆ ಮುಂದಾದ ಮೇಲೆ ದಾಳಿ ನಡೆದಿರುವ ರಾಜಕೀಯ ಅನುಮಾನಗಳಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಮತ್ತೆ ಸಿಬಿಐ ಅನ್ನು ಪಂಜರದ ಗಿಳಿಯಾಗಿ ಮಾರ್ಪಡಿಸಿಕೊಂಡಿತೇ ಎಂಬ ಪ್ರಶ್ನೆಗಳೂ ಎದ್ದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement