ರಾಮದಾಸ್ಗೆ ಜಾಮೀನು
ಮೈಸೂರು: ಮಾಜಿ ಸಚಿವ ರಾಮದಾಸ್ಗೆ ನಗರದ 3ನೇ ಜೆಎಂಎಫ್ಸಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ತಮ್ಮನ್ನು ಮದುವೆ ಆಗುವುದಾಗಿ ರಾಮದಾಸ್ ನಂಬಿಸಿ ಮೋಸ ಮಾಡಿದ್ದಾರೆ ಎಂದು ಪ್ರೇಮಕುಮಾರಿ ನೀಡಿರುವ ದೂರಿಗೆ ಸಂಬಂಧಿಸಿದಂತೆ ರಾಮದಾಸ್ ಅವರಿಗೆ 3ನೇ ಜೆಎಂಎಫ್ಸಿ ನ್ಯಾಯಾಲಯ ರಾಮದಾಸ್ ಮತ್ತು ಅವರ ಸಹೋದರ ಶ್ರೀಕಾಂತದಾಸ್ ಅವರು 10 ದಿನಗಳ ಒಳಗೆ ರು. 5 ಲಕ್ಷದ ಬಾಂಡ್ನ್ನು ಸಂಬಂಧಿಸಿದ ತನಿಖಾಧಿಕಾರಿಗಳಿಗೆ ನೀಡಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎಂಬ ಷರತ್ತು ವಿಧಿಸಿದೆ.