ನಂಬರ್ ಗೇಮ್‌ನಲ್ಲಿ ಜಯಿಸಿದ ಕೇಜ್ರಿವಾಲ
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ದೆಹಲಿ...
ಪಿಟಐ, ನವದೆಹಲಿ, ಜ.2-
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ದೆಹಲಿ ವಿಧಾನಸಭೆಯಲ್ಲಿನ ನಂಬರ್ ಗೇಮ್‌ನಲ್ಲಿ ಜಯ ಗಳಿಸಿದೆ.
ಹೀಗಾಗಿ ಸದ್ಯಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಮೊತ್ತಮೊದಲ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಸರ್ಕಾರ ಮುಂದುವರಿಯುತ್ತದೆಯೋ ಇಲ್ಲವೋ ಎಂಬ ಸಂಶಯಗಳಿಗೆ ಸದ್ಯಕ್ಕೆ ತೆರೆ ಬಿದ್ದಿದೆ. ಲೆಫ್ಟಿನೆಂಟ್ ಗವರ್ನರ್ ನಜೀಬ್ ಜುಂಗ್ ಅವರ ಸೂಚನೆಯಂತೆ ಕೇಜ್ರಿವಾಲ್ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿದರು.
ನಿರ್ಣಯದ ಪರವಾಗಿ ಆಮ್ ಆದ್ಮಿ ಪಕ್ಷದ 28, ಕಾಂಗ್ರೆಸ್‌ನ ಏಳು, ಜೆಡಿಯುನ ಒಬ್ಬ ಹಾಗೂ ಸ್ವತಂತ್ರ ಅಭ್ಯರ್ಥಿ ಮತ ಹಾಕಿದರೆ, ಬಿಜೆಪಿಯ 31 ಮತ್ತು ಶಿರೋಮಣಿ ಅಕಾಲಿ ದಳದ ಒಬ್ಬ ಶಾಸಕ ವಿರೋಧವಾಗಿ ಮತ ಹಾಕಿದರು.
ಮೈತ್ರಿ ಪ್ರಶ್ನಾರ್ಹ: ಬಿಜೆಪಿ: ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಡಾ.ಹರ್ಷವರ್ಧನ್ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯ ಔಚಿತ್ಯವನ್ನು ಪ್ರಶ್ನಿಸಿದರು.
ನಿರ್ದಾಕ್ಷಿಣ್ಯ ಕ್ರಮ: ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕುವ ಮೂಲಕ ಜನರು ದಾಖಲೆ ನಿರ್ಮಿಸಿದ್ದಾರೆ. ಅದೇ ದಾಖಲೆಯನ್ನು ಮುಂದಿನ ಲೋಕಸಭೆಯಲ್ಲೂ ಮುಂದುವರಿಸಲಿದ್ದಾರೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದರು. ಭ್ರಷ್ಟಾಚಾರ ವಿರುದ್ಧದ ಸಮರ ನಿಲ್ಲುವುದಿಲ್ಲ ಎಂದು ಕೇಜ್ರಿವಾಲ್ ಇದೇ ಸಂದರ್ಭದಲ್ಲಿ ಸಾರಿದರು. ಭ್ರಷ್ಟ ಅಧಿಕಾರಿಗಳನ್ನು ಜೈಲಿಗಟ್ಟಿಯೇ ಸಿದ್ಧ ಎಂದರು.
ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ತಮ್ಮ ಸರ್ಕಾರದ ಜತೆ ಕೈಜೋಡಿಸಬೇಕು ಎಂದು ಅವರು ಭಾವುಕರಾಗಿ ಮನವಿ ಮಾಡಿದರು. ಸಾಮಾಜಿಕ ಹೋರಾಟಗಾರನಾಗಿದ್ದ ತಾನು ಯಾವುದೇ ಹಂತದಲ್ಲಿ ರಾಜಕೀಯ ಪಕ್ಷ ಸ್ಥಾಪಿಸುವ ಕನಸು ಕಂಡಿರಲಿಲ್ಲ ಎಂದು ಹೇಳಿದರು.
ಸರ್ಕಾರ ಉಳಿಸಬೇಕೆಂದಿಲ್ಲ: ಯಾವುದೇ ಕಾರಣಕ್ಕೂ ಪಕ್ಷದ ಸರ್ಕಾರವನ್ನು ಉಳಿಸಬೇಕು ಎಂಬ ಆಶಯ ತಮಗಿಲ್ಲ. ರಾಜಿ ಮಾಡಿಕೊಂಡು ಅಧಿಕಾರದಲ್ಲಿ ಮುಂದುವರಿಯುವುದಿಲ್ಲ. ದೇಶದ ರಾಜಕೀಯದಲ್ಲಿ ಭ್ರಷ್ಟಾಚಾರ ಮತ್ತು ಲಂಚಗುಳಿತನದಲ್ಲಿ ಮುಳುಗಿ ಹೋಗಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ ಎಂದರು ಕೇಜ್ರಿವಾಲ್. ಡಿಸೆಂಬರ್ 4ರಂದು ವಿಧಾನಸಭೆ ಫಲಿತಾಂಶ ಪ್ರಕಟಗೊಂಡಾದ ನಮಗೆ ಆಶ್ಚರ್ಯವಾಗಿತ್ತು. 70 ಸ್ಥಾನಗಳ ಪೈಕಿ ಆಮ್ ಆದ್ಮಿ ಪಕ್ಷಕ್ಕೆ 28 ಸ್ಥಾನಗಳು ಬಂದಿದೆ ಗೊತ್ತಾದಾಗ ಸಂತೋಷವಾಯಿತು ಎಂದರು ಕೇಜ್ರಿವಾಲ್.
ವಿವಿಐಪಿ ಸಂಸ್ಕತಿಗೆ ಮುಕ್ತಾಯ: ದೆಹಲಿಯಲ್ಲಿ ವಿವಿಐಪಿ ಸಂಸ್ಕೃತಿಗೆ ಮುಕ್ತಾಯ ಸೇರಿದಂತೆ 17 ವಿಚಾರಗಳ ತಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದರು. ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಸೇರಿದಂತೆ ಜನ ಸಾಮಾನ್ಯರ ರಕ್ಷಣೆ ಎಂದರು ಮುಖ್ಯಮಂತ್ರಿ ಕೇಜ್ರಿವಾಲ್.
ನಿರ್ಣಯ ಮಂಡಿಸಿದ ಸಿಸೋಡಿಯಾ: ದೆಹಲಿ ಸರ್ಕಾರದ ಲೋಕೋಪಯೋಗಿ ಸಚಿವ ಮನೀಶ್ ಸಿಸೋಡಿಯಾ ಮೊದಲು ಮಾತನಾಡಿ ವಿಶ್ವಾಸ ಮತದ ನಿರ್ಣಯ ಮಂಡಿಸಿದರು.