ಎಟಿಎಂ ವಹಿವಾಟಿಗೂ ಶುಲ್ಕ ಜಾರಿ ಸಾಧ್ಯತೆ
ಮುಂಬೈ: ಇನ್ನು ಮುಂದೆ ಎಟಿಎಂಗಳಲ್ಲಿ ಹಣ ವಿಥ್ಡ್ರಾ ಮಾಡಿಕೊಳ್ಳುವುದಕ್ಕೆ ಶುಲ್ಕ ನೀಡಬೇಕಾಗಿ ಬರಬಹುದು. ಆಯಾ ಬ್ಯಾಂಕ್ಗಳೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಆರ್ಬಿಐ ಶುಕ್ರವಾರ ತಿಳಿಸಿದೆ. ಆದರೆ ಅದು ಗ್ರಾಹಕರಿಗೆ ಹೊರೆಯಾಗುವ ರೀತಿಯಲ್ಲಿ ಇರಬಾರದು ಎಂದು ಆರ್ಬಿಐ ಡೆಪ್ಯುಟಿ ಗವರ್ನರ್ ಕೆ.ಸಿ.ಚಕ್ರಬರ್ತಿ ತಿಳಿಸಿದ್ದಾರೆ. ಇತರ ಬ್ಯಾಂಕ್ಗಳ ಎಟಿಎಂನಲ್ಲಿ 5 ಟ್ರಾನ್ಸಾಕ್ಷನ್ ವರೆಗೆ ಶುಲ್ಕವಿನಾಯಿತಿ ನೀಡಲಾಗಿದೆ. ನಂತರದ್ದಕ್ಕೆ ನಿಗದಿತ ಶುಲ್ಕ ವಿಧಿಸಲಾಗುತ್ತಿದೆ. ವರಿಷ್ಠ ಬ್ಯಾಂಕ್ನ ಆದೇಶವನ್ನು ಅನುಸರಿಸಿ ಬ್ಯಾಂಕ್ಗಳು ಎಟಿಎಂ ವಹಿವಾಟಿಗೆ ಶುಲ್ಕ ವಿಧಿಸಲು ಮುಂದಾರೆ ಸದ್ಯ ಇರುವ ಸೌಲಭ್ಯಕ್ಕೂ ಕೂಡ ಕತ್ತರಿ ಬೀಳಲಿದೆ.