ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸುವರ್ಣಾ ಮರ್ಯಾದೆ ಹತ್ಯೆ: ಆರೋಪಿಗಳ ಅರ್ಜಿ ವಜಾ

Mainashree
Updated On : 3 Jan 2014, 10:28 am

ಕ.ಪ್ರ.ವಾರ್ತೆ  ಮಂಡ್ಯ  ಜ.3
ಆಬಲವಾಡಿ ಗ್ರಾಮದ 'ಸುವರ್ಣಾಳ ಮರ್ಯಾದಾ ಹತ್ಯೆ' ಪ್ರಕರಣದಿಂದ ಆರೋಪ ಮುಕ್ತಗೊಳಿಸುವಂತೆ ಕೋರಿ ಮೂವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.
ಪ್ರಕರಣದ ಆರೋಪಿಗಳಾದ ದವಲನ ರಾಮಣ್ಣ, ಪುಟ್ಟತಾಯಮ್ಮ ಅವರ ಪುತ್ರ ಸಿ. ತಿಮ್ಮೇಶ ಹಾಗೂ ಬಡೇರ ಕೃಷ್ಣ ಆರೋಪ ಮುಕ್ತಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ವಾದ, ಪ್ರತಿವಾದವನ್ನು ಆಲಿಸಿ ಈ ಅರ್ಜಿಯನ್ನು ತಿರಸ್ಕರಿಸಿದೆ. ಪ್ರಕರಣದಲ್ಲಿ ತಾವು ಭಾಗಿಯಾಗದ ಕಾರಣ ಆರೋಪ ಮುಕ್ತಗೊಳಿಸುವಂತೆ ಒಂದನೇ ಅಪರ ಜಿಲ್ಲಾ ನ್ಯಾಯಾಲಯದಲ್ಲಿ 8ನೇ ಆರೋಪಿ ದವಲನ ರಾಮಣ್ಣ, 9ನೇ ಆರೋಪಿ ಸಿ. ತಿಮ್ಮೇಶ ಹಾಗೂ 10ನೇ ಆರೋಪಿ ಬಡೇರ ಕೃಷ್ಣ ಅರ್ಜಿ ಸಲ್ಲಿಸಿದ್ದರು. 1ನೇ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಬೆಳ್ಳುಂಕೆ ಅವರು ವರ್ಗಾವಣೆಯಾದ ಹಿನ್ನಲೆಯಲ್ಲಿ 2ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ಎದುರು ಅರ್ಜಿ ವಿಚಾರಣೆಗೆ ಬಂದಿತ್ತು. ನ್ಯಾಯಾಧೀಶ ನಾಯಕ್ ಅವರು ಗುರುವಾರ ಅರ್ಜಿಯನ್ನು ಗುರುವಾರ ವಿಚಾರಣೆಗೆ ಎತ್ತಿಕೊಂಡಿದ್ದರು. ಫೆ.3ರಂದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಲಿದೆ.
ಈ ಮೂವರು ಆರೋಪಿಗಳ ಮೇಲೆ ಸುವರ್ಣಾಳ ಹತ್ಯೆಯಲ್ಲಿ ಭಾಗಿಯಾದ ಹಾಗೂ ಸುವರ್ಣಾಳ ಪ್ರಿಯಕರ ಗೋವಿಂದರಾಜು ಮನೆಗೆ ಸೇರಿದ ಎತ್ತಿನಗಾಡಿಗಳನ್ನು ಸಾಗಿಸಿದ ಆರೋಪಗಳಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement