ಜಿಎಸ್ಎಲ್ವಿಡಿ5 ಇಂದು ಉಡಾವಣೆ
ಚೆನ್ನೈ: ಇಸ್ರೋದ ಜಿಯೋಸಿಂಕ್ರೊನಸ್ ಸೆಟಲೈಟ್ ಲಾಂಚ್ ವೆಹಿಕಲ್(ಜಿಎಸ್ಎಲ್ವಿ-ಡಿ5) ಉಡ್ಡಯನವು ಭಾನುವಾರ ಸಂಜೆ 4.18 ಗಂಟೆಗೆ ನಡೆಯಲಿದೆ. ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಜಿಎಸ್ಎಲ್ವಿ- ಡಿ5 ರಾಕೆಟ್ ಜಿಸ್ಯಾಟ್-14 ಸಂವಹನ ಉಪಗ್ರಹವನ್ನು ಹೊತ್ತುಕೊಂಡು ನಭಕ್ಕೆ ಜಿಗಿಯಲಿದೆ. ದೇಶೀ ನಿರ್ಮಿತ ಕ್ರಯೋಜನಿಕ್ ಎಂಜಿನ್ ಹೊಂದಿರುವ ಜಿಎಸ್ಎಲ್ವಿ-ಡಿ5 ಉಡ್ಡಯನ ಕಳೆದ ವರ್ಷ ಆ.19ರಂದೇ ನಡೆಯಬೇಕಿತ್ತು. ಆದರೆ, ಇಂಧನ ಟ್ಯಾಂಕ್ನಲ್ಲಿ ಸೋರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಈ ರಾಕೆಟ್ ಉಡ್ಡಯನವನ್ನು ಮುಂದೂಡಲಾಗಿತ್ತು. ಶನಿವಾರ ಬೆಳಗ್ಗೆ 11.18 ಗಂಟೆಯಿಂದ ಜಿಎಸ್ಎಲ್ವಿ ರಾಕೆಟ್ನ ಉಡ್ಡಯನಕ್ಕೆ 29 ಗಂಟೆಗಳ ಕ್ಷಣಗಣನೆ ಆರಂಭವಾಗಿದೆ.