ಜೈಎಸ್ಎಲ್ವಿ ಉಡ್ಡಯನ ಯಶಸ್ವಿ
ಚಂದ್ರಯಾನ, ಮಂಗಳಯಾನ ಬಳಿಕ ಇಸ್ರೋಗೆ ಮತ್ತೊಂದು ಯಶಸ್ಸು. ಸ್ವದೇಶಿ ನಿರ್ಮಿತ...
ಚಂದ್ರಯಾನ, ಮಂಗಳಯಾನ ಬಳಿಕ ಇಸ್ರೋಗೆ ಮತ್ತೊಂದು ಯಶಸ್ಸು. ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ ಹೊಂದಿರುವ ಜಿಎಸ್ಎಲ್ವಿ ಡಿ- 5 ನಭಕ್ಕೆ ನೆಗೆದಿದೆ.
6ನೇ ರಾಷ್ಟ್ರ
ಜಿಎಸ್ಎಲ್ವಿ- ಡಿ5ರ ಯಶಸ್ವಿ ಪ್ರಯೋಗದೊಂದಿಗೆ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ ರಾಕೆಟ್ನ ಯಶಸ್ವಿ ಪ್ರಯೋಗ ನಡೆಸಿದ ವಿಶ್ವದ ಆರನೇ ರಾಷ್ಟ್ರ ಎನ್ನುವ ಗೌರವಕ್ಕೆ ಭಾರತ ಪಾತ್ರವಾಗಿದೆ. ಈಗಾಗಲೇ ಅಮೆರಿಕ, ರಷ್ಯಾ, ಜಪಾನ್, ಚೀನಾ ಮತ್ತು ಫ್ರಾನ್ಸ್ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ನ ಯಶಸ್ವಿ ಪ್ರಯೋಗ ನಡೆಸಿವೆ.
4 ಬಾರಿ ಯಶಸ್ವಿ!
ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ ಭಾರತದ ಪಾಲಿಗೆ ಸವಾಲಾಗಿತ್ತು. 2001ರಿಂದ ಈ ನಿಟ್ಟಿನಲ್ಲಿ ಇಸ್ರೋ ನಡೆಸಿದ ಏಳು ಉಡ್ಡಯನದಲ್ಲಿ ನಾಲ್ಕರಲ್ಲಿ ಮಾತ್ರ ಇಸ್ರೋಗೆ ಯಶಸ್ಸು ಸಿಕ್ಕಿತ್ತು.
8ನೇ ಉಡ್ಡಯನ
ಭಾನುವಾರದ್ದು ಜಿಎಸ್ಎಲ್ವಿ ರಾಕೆಟ್ನ 8ನೇ ಉಡ್ಡಯನ. 2010ರಲ್ಲಿ ಒಂದೇ ವರ್ಷ ಜಿಎಸ್ಎಲ್ವಿ ಪ್ರಯೋಗ ಸತತ ಎರಡು ಬಾರಿ ವೈಫಲ್ಯ ಕಂಡಿತ್ತು.
ಲಾಭ ಏನು?
- ಮಂಗಳಯಾನ ಹಾಗೂ ಚಂದ್ರಯಾನ-2ರಂತಹ ಮಹತ್ವದ ಯೋಜನೆಗಳಿಗೆ ಅನುಕೂಲವಾಗಲಿದೆ.
- ಬಹುಕೋಟಿ ಮೊತ್ತದ ವಾಣಿಜ್ಯ ಉಪಗ್ರಹಗಳ ಉಡ್ಡಯನ ಮಾರುಕಟ್ಟೆಯನ್ನು ಪ್ರವೇಶಿಸುವ ನಿಟ್ಟಿನಲ್ಲಿ ಹಾಗೂ 4 ಟನ್ಗಳಷ್ಟು ಭಾರದ ಉಪಗ್ರಹಗಳನ್ನು ಉಡ್ಡಯನ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.
- ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ನಿಂದಾಗಿ ನಮ್ಮದೇ ರಾಕೆಟ್ಗಳ ಮೂಲಕವೇ ಸಂವಹನ ಉಪಗ್ರಹಗಳನ್ನು ಉಡ್ಡಯನ ಮಾಡಬಹುದಾಗಿದೆ. ಇದರಿಂದ ದೇಶದಿಂದ ಹೊರಹೋಗುತ್ತಿದ್ದ ದೊಡ್ಡ ಪ್ರಮಾಣದ ವಿದೇಶಿ ವಿನಿಮಯವನ್ನು ಉಳಿಸಿದಂತಾಗುತ್ತದೆ.
ಯಾವಾಗ ಉಡ್ಡಯನ?
ಸಂಜೆ 4.18
ರಾಕೆಟ್ನ ತೂಕ
415 ಟನ್
ಎತ್ತರ 50 ಮೀ. 17 ಮಹಡಿ ಕಟ್ಟಡದಷ್ಟು ಎತ್ತರ
ತಗುಲಿದ ವೆಚ್ಚ
350ಕೋಟಿ
ಜಿಸ್ಯಾಟ್- 14ರ ತೂಕ
1982ಕೆಜಿ.
ಟೀಂ ಇಸ್ರೋ ಇಂಥದ್ದೊಂದು ಸಾಧನೆ ಮಾಡಿದೆ ಎನ್ನುವುದನ್ನು ಹೇಳಲು ಸಂತೋಷ ಹಾಗೂ ಹೆಮ್ಮೆ ಎನಿಸುತ್ತಿದೆ. ಭಾರತೀಯ ಕ್ರಯೋಜನಿಕ್ ಎಂಜಿನ್ ನಿರೀಕ್ಷಿತ ಸಾಧನೆ ತೋರಿದೆ. ಜಿಸ್ಯಾಟ್-14 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಕೂರಿಸಿದೆ.
- ಕೆ. ರಾಧಾಕೃಷ್ಣನ್,
ಇಸ್ರೋ ಅಧ್ಯಕ್ಷ