ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತಾದ ಜನಾಭಿಪ್ರಾಯ

Vishwanath S
Updated On : 8 Jan 2014, 12:44 pm

ಮಡಿಕೇರಿಯಲ್ಲಿ ಆಯೋಜಿಸಿದ್ದು ಒಳ್ಳೆಯದಾಯ್ತು. ನಾಡಿನ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಕ್ಕೆ ಒತ್ತು ಸಿಕ್ಕಿದೆ. ಕನ್ನಡದ ಬಗ್ಗೆ ಜನರಿಗೆ ಮನವರಿಕೆ ಮಾಡಲು ಸಾಧ್ಯವಾಗಿದೆ. ಬೇರೆ ಬೇರೆ ಕಡೆಗಳಿಂದ ಸಾಕಷ್ಟು ಮಂದಿ ಬಂದಿದ್ದಾರೆ. ಇಲ್ಲಿನ ಜನರ ಆಚಾರ, ವಿಚಾರ ವೀಕ್ಷಣೆಗೆ ಅವಕಾಶ ಕಲ್ಪಿಸಿದಂತಾಗಿದೆ.
- ಕುಶಾಲಪ್ಪ ಬಾಚಿನಾಡಂಡ, ಕಾಫಿ ಬೆಳೆಗಾರರು, ಮಡಿಕೇರಿ


ಇಲ್ಲಿ ಒಳ್ಳೊಳ್ಳೆಯ ಪುಸ್ತಕ ಸಿಗುತ್ತವೆ. ಮನೆ ಮಂದಿಯೂ ಬರುತ್ತಾರೆ. ಕನ್ನಡ ಬಗ್ಗೆ ಜಾಗೃತಿ ಮೂಡಿಸಲು ಈ ಸಮ್ಮೇಳನ ಸಹಕಾರಿ. ಮಕ್ಕಳಿಗೂ ಕನ್ನಡ ಪ್ರೀತಿ ಬೆಳೆಸಲು ಸಮ್ಮೇಳನ ಅವಶ್ಯಕ. ಬಹಳ ವರ್ಷಗಳ ಬಳಿಕ ಕನ್ನಡ ಸಮ್ಮೇಳನ ಇಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ.  
- ಧನುಷ್, ವಿದ್ಯಾರ್ಥಿ, ಜ್ಞಾನಗಂಗಾ, ಕುಶಾಲನಗರ

ಈ ಸಮ್ಮೇಳನ ನಮ್ಮ ಕಾಲೇಜಿನಲ್ಲಿ ನಡೆಯುತ್ತಿದೆ. ಇದರಿಂದ ಕಾಲೇಜಿಗೆ ಉತ್ತಮ ಹೆಸರು ಬರುತ್ತದೆ. ಅತಿಥಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮಗೆ. ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ. ಮಡಿಕೇರಿಗೆ ಒಳ್ಳೆಯ ಹೆಸರಿದೆ. ಇಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಕನ್ನಡಕ್ಕೆ ಇನ್ನಷ್ಟು ಒತ್ತು ಸಿಗುವ ನಿರೀಕ್ಷೆ ಇದೆ.
- ದೀಕ್ಷಾ ಚಿನ್ನಪ್ಪ, ವಿದ್ಯಾರ್ಥಿನಿ, ಮಡಿಕೇರಿ

ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿ ನಡೆದಿರುವುದು ಒಳ್ಳೆಯದೇ ಆಯ್ತು. ತುಂಬಾ ವರ್ಷ ನಂತರ ಆಗುತ್ತಿದೆ. ಕನ್ನಡ ಬಗ್ಗೆ ಹೆಚ್ಚಿನ ಕಳಕಳಿ ವ್ಯಕ್ತಗೊಳ್ಳಬೇಕು. ತಾನು ಪ್ರಥಮ ಬಾರಿಗೆ ಕನ್ನಡ ಸಮ್ಮೇಳನಕ್ಕೆ ಬರುತ್ತಿದ್ದೇನೆ. ಎಲ್ಲೆಲ್ಲೂ ಕನ್ನಡದ ಮಾತು ಕೇಳಿಬರುತ್ತಿದೆ. ಉತ್ತಮ ವ್ಯವಸ್ಥೆ ಮಾಡಲಾಗಿದೆ.
- ಎಚ್.ಜಿ. ಕುಟ್ಟಪ್ಪ, ನಿವೃತ್ತ ಅಧಿಕಾರಿ, ಸೋಮವಾರಪೇಟೆ

ಕನ್ನಡದ ಕಾಳಜಿ ವ್ಯಕ್ತವಾಗುತ್ತಿದೆ. ಸಾಹಿತ್ಯ, ಸಂಸ್ಕೃತಿ ಹೀಗೆ ಯಾವುದೇ ವಿಚಾರ ಇರಬಹುದು. ಅದರ ತಿರುಳು ಗೊತ್ತಾಗುತ್ತದೆ. ಯುವ ಪೀಳಿಗೆಗೆ ಈ ಸಮ್ಮೇಳನ ಉಪಯೋಗ. ಕೊಡಗಿನಲ್ಲಿ ಸಮ್ಮೇಳನ ನಡೆದದ್ದು ಒಳ್ಳೆಯದು. ಇದರಿಂದ ಕನ್ನಡ ಬಗ್ಗೆ ಪ್ರೇರಣೆ, ಆಸಕ್ತಿ ಮೂಡಲು ಸಾಧ್ಯ.  
- ಪುಷ್ಪಾವತಿ, ಗೃಹಿಣಿ, ಸೋಮವಾರಪೇಟೆ

ಕೊಡಗಿನಲ್ಲಿ ಸಮ್ಮೇಳನ ನಡೆಸಿರುವುದು ಉತ್ತಮ. ಸಮ್ಮೇಳನ ಹೆಸರಲ್ಲಿ ಪ್ರವಾಸೋದ್ಯಮಕ್ಕೂ ಅವಕಾಶ ಸಿಕ್ಕಿದಂತಾಗಿದೆ. ಮಡಿಕೇರಿ ಈಗ ಬದಲಾಗುತ್ತಿದೆ. ಕನ್ನಡವೂ ಇಲ್ಲಿ ಉತ್ತಮವಾಗಿದೆ. ಕನ್ನಡ ಇನ್ನಷ್ಟು ಬೆಳೆಯುವ ದೃಷ್ಟಿಯಿಂದ ಸಾಹಿತ್ಯ ಸಮ್ಮೇಳನ ನಡೆಸಿರುವುದು ಸಮಂಜಸ.  
- ಶಾರದಾ, ನಿವೃತ್ತ ಉದ್ಯೋಗಿ, ಮಡಿಕೇರಿ

ಸಾಹಿತ್ಯ ಸಮ್ಮೇಳನ ಗೌಜಿ ನೋಡಲು ಎರಡು ಕಣ್ಣು ಸಾಲದು. ಪುಸ್ತಕ ಪ್ರದರ್ಶನ ಸಕತ್ತಾಗಿದೆ. ವಿಚಾರಗೋಷ್ಠಿಗಳು ಪರವಾಗಿಲ್ಲ. ನಾವು ಎರಡು ಬಸ್‌ನಲ್ಲಿ ಬಂದಿದ್ದೇವೆ. ಕನ್ನಡ ನೆಲ, ಜಲ ಉಳಿವಿಗೆ ಸಮ್ಮೇಳನ ಜಾಗೃತಿ ಮೂಡಿಸಬೇಕು. ಇಂಥ ಸಮ್ಮೇಳನಗಳು ಆಗಾಗ ನಡೆಯಬೇಕು.  
- ಭಾಗ್ಯಮ್ಮ, ಗೃಹಿಣಿ, ಕೆ.ಆರ್. ಪುರಂ, ಬೆಂಗಳೂರು

ಕೊಡಗಿನಲ್ಲಿ ಸಮ್ಮೇಳನ ನಡೆಯುವುದು ಸಂತಸ ತಂದಿದೆ. ಸಮ್ಮೇಳನ ನೆಪದಲ್ಲಾದರೂ ಬೇರೆ ಜಿಲ್ಲೆಯವರು ಇಲ್ಲಿಗೆ ಬರುತ್ತಾರೆ. ಸಮ್ಮೇಳನಕ್ಕೆ ಆಗಮಿಸುವವರಿಗೆ ಪ್ರತಿಯೊಂದು ಸೌಕರ್ಯ ಒದಗಿಸಲಾಗಿದೆ. ಪ್ರತಿಯೊಬ್ಬರೂ ಕನ್ನಡ ಮಾತನಾಡಬೇಕು. ಇದರಿಂದ ಇನ್ನಷ್ಟು ಕನ್ನಡ ಭಾಷೆಗೆ ಪುಷ್ಠಿ ಸಿಗಬಹುದು.  
- ಪಾಂಡನ ಪುಷ್ಪವೇಣಿ, ಸಮಾಜಸೇವಕಿ, ಮರಗೋಡು

ಮಡಿಕೇರಿಯಲ್ಲಿ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆ ಆಗುತ್ತಿದೆ. ಇಲ್ಲಿ ಎಲ್ಲ ವ್ಯವಸ್ಥೆಯೂ ಚೆನ್ನಾಗಿದೆ. ಕನ್ನಡ ನಾಡು, ನುಡಿಯ ಚರ್ಚೆ, ಕನ್ನಡದತನದ ಬಗ್ಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ. ಸಾಕಷ್ಟು ಪುಸ್ತಕ ಮಳಿಗೆ ಬಂದಿರುವುದು ಗಮನಾರ್ಹ. ಪ್ರತ್ಯೇಕ ರಾಜ್ಯದ ಕೂಗು ಅನವಶ್ಯಕ.
- ರಜನಿ, ಖಾಸಗಿ ಉದ್ಯೋಗಿ, ಮಡಿಕೇರಿ

ಈಗಾಗಲೇ ಎಲ್ಲ ಕಡೆ ಸಾಹಿತ್ಯ ಸಮ್ಮೇಳನ ನಡೆಯುವಲ್ಲಿಗೆ ಹೋಗುತ್ತಿದ್ದೆ. ಈಗ ಇಲ್ಲಿಗೂ ಮೂರು ಮಂದಿ ಬಂದಿದ್ದೇವೆ. ಇಲ್ಲಿ ಎಲ್ಲ ವ್ಯವಸ್ಥೆಯೂ ಚೆನ್ನಾಗಿದೆ. ಯಾವುದೇ ಕೊರತೆ ಇಲ್ಲ. ಕನ್ನಡ ಕುರಿತ ಚರ್ಚೆ, ಗೋಷ್ಠಿಗಳು ಉತ್ತಮವಾಗಿ ನಡೆಯುತ್ತಿದೆ. ಮೂರು ದಿನ ಕೂಡ ಭಾಗವಹಿಸುತ್ತೇವೆ.
-  ನೀಲಕಂಠಪ್ಪ, ಜಮಖಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement