ಈಗಿದು ಹಿಮರಿಕ
ಕುದಿಯುವ ನೀರನ್ನು ತಂದು ಹೊರಕ್ಕೆ ಚೆಲ್ಲಿದರೆ ಅದು ನೆಲಕ್ಕೆ ಬೀಳುವ ಮೊದಲೇ ಮಂಜಿನ ಗಡ್ಡೆಯಾಗುತ್ತದೆ, ವಿಮಾನಕ್ಕೆ ಇಂಧನ ಹಾಕುವ...
ಷಿಕಾಗೋ: ಕುದಿಯುವ ನೀರನ್ನು ತಂದು ಹೊರಕ್ಕೆ ಚೆಲ್ಲಿದರೆ ಅದು ನೆಲಕ್ಕೆ ಬೀಳುವ ಮೊದಲೇ ಮಂಜಿನ ಗಡ್ಡೆಯಾಗುತ್ತದೆ, ವಿಮಾನಕ್ಕೆ ಇಂಧನ ಹಾಕುವ ಎಂದರೆ ಇಂಧನವೂ ಗಟ್ಟಿಯಾಗಿಬಿಟ್ಟಿದೆ, ಮನೆಯಲ್ಲಿರುವ ನೀರಿನ ಪೈಪ್‌ಗಳೆಲ್ಲ ಹೆಪ್ಪುಗಟ್ಟಿವೆ! ಹೌದು. ಹಿಂದೆಂದೂ ಕಾಣದಂತಹ ಬಿಕ್ಕಟ್ಟಿನ ಪರಿಸ್ಥಿತಿಗೆ ಅಮೆರಿಕ ತಲುಪಿದೆ. ಉತ್ತರ ಧ್ರುವದಿಂದ ಬೀಸುತ್ತಿರುವ ಸುಳಿಗಾಳಿಯು ಇಡೀ ಅಮೆರಿಕಕ್ಕೆ ಅಮೆರಿಕವನ್ನೇ ಹೆಪ್ಪುಗಟ್ಟಿಸಿದೆ. ಹಿಮದಲ್ಲೇ ವಾಸಿಸುವ ಹಿಮಕರಡಿಗಳು ಕೂಡ ಈ ತಾಪಮಾನಕ್ಕೆ ಬೆಚ್ಚಿಬಿದ್ದಿವೆ. ಎಂದಿನಂತೆ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಬಂದರೆ ಕ್ಷಣದಲ್ಲೇ ಮನುಷ್ಯರೂ ಕಲ್ಲಾಗಿಬಿಡುವಷ್ಟು ಕನಿಷ್ಠ ತಾಪಮಾನ ಇಡೀ ದೇಶವನ್ನೇ ಆವರಿಸಿದೆ. 5-10 ನಿಮಿಷಗಳಲ್ಲಿ ಮನುಷ್ಯ ಮಂಜುಗಡ್ಡೆಯಂತಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಮಂಗಳನಿಗೇ ಸವಾಲು
ಅಮೆರಿಕದಲ್ಲಿ ತಾಪಮಾನ ಮಂಗಳ ಗ್ರಹವನ್ನೇ ಮೀರಿಸುವಷ್ಟು ಕನಿಷ್ಠ ಮಟ್ಟಕ್ಕಿಳಿದಿದೆ. ಕ್ಯೂರಿಯಾಸಿಟಿ ರೋವರ್ ಮಂಗಳನಲ್ಲಿ ಪ್ರತಿ ದಿನ ದಾಖಲಾಗುವ ತಾಪಮಾನದ ವಿವರ ಕಳುಹಿಸುತ್ತದೆ. ಬುಧವಾರ ಅಂಗಾರಕನ ತಾಪಮಾನ -25ರಿಂದ -31 ಡಿ.ಸೆ. (ಅಂದರೆ -13ರಿಂದ -24 ಡಿಗ್ರಿ ಫ್ಯಾರನ್‌ಹೀಟ್) ಎಂದು ಕಳುಹಿಸಿದೆ. ಆದರೆ ಅಮೆರಿಕದ ಮೋಂಟಾನಾದಲ್ಲಿ -52 ಸೆ. ತಾಪಮಾನ ದಾಖಲಾಗಿದೆ. ಇಲಿನಾಯ್ಸ್, ಲೋವಾ, ವರ್ಜೀನಿಯಾ, ವಿಸ್ಕನ್ಸಿನ್ ಸೇರಿದಂತೆ ಇತರೆಡೆಗಳಲ್ಲಿ ತಾಪಮಾನ -40ರಿಂದ -50 ಸೆ.ವರೆಗೆ ದಾಖಲಾಗಿದೆ.
ಅಮೆರಿಕದ ಅಪಾಯಕಾರಿ ಪರಿಸ್ಥಿತಿ ವಿವರಿಸಲು ಇದೊಂದೇ ಸಾಕು.
21 ಮಂದಿ ಸಾವು
1896ರ ನಂತರ ಇದೇ ಮೊದಲು ನ್ಯೂಯಾರ್ಕ್‌ನಲ್ಲಿ - 15 ಡಿ.ಸೆ. ತಾಪಮಾನ ದಾಖಲಾಗಿದೆ. ಚಳಿಯಿಂದಾಗಿ ಬುಧವಾರದವರೆಗೆ 21 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸ್ಥಗಿತಗೊಂಡ ವಿಮಾನಗಳ ಸಂಖ್ಯೆ 18 ಸಾವಿರ. ಕನಿಷ್ಠ 500 ಪ್ರಯಾಣಿಕರು ಅತಂತ್ರರಾಗಿದ್ದಾರೆ. ಸುಮಾರು 19 ಕೋಟಿ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಇಂಡಿಯಾನಾದಲ್ಲಿ 15 ಸಾವಿರ ಕುಟುಂಬಗಳು ವಿದ್ಯುತ್ ಕೊರತೆ ಎದುರಿಸುತ್ತಿವೆ. ಮಿನ್ನೆಸೋಟಾದಲ್ಲಿ ಕಳೆದ 17 ವರ್ಷಗಳಲ್ಲೇ ಪ್ರಥಮ ಬಾರಿಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರವಾಸಿಗರು, ಮಳಿಗೆಗಳು, ಜನರಿಂದ ಗಿಜಿಗುಡುತ್ತಿದ್ದ ರಸ್ತೆಗಳೆಲ್ಲ ಮರುಭೂಮಿಯಂತಾಗಿವೆ.
ಭಾರತಕ್ಕೂ ಪರಿಣಾಮ
ಅಮೆರಿಕದಲ್ಲಿ ಬೀಸುತ್ತಿರುವ ಧ್ರುವೀಯ ಸುಳಿಗಾಳಿಯ ಪ್ರಭಾವ ಭಾರತದ ಮೇಲೂ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬುಧವಾರದಿಂದ 3 ದಿನಗಳವೆರೆಗೆ ಕಾಶ್ಮೀರ ಕಣಿವೆಯಲ್ಲಿ ಹಿಮವರ್ಷದ ಪ್ರಮಾಣ ಜೋರಾಗಲಿದೆ ಎಂದಿದೆ. ಇದೇ ವೇಳೆ ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಹೆಚ್ಚಿದ್ದು, ರಾಜಸ್ಥಾನದ ಚುರುವಿನಲ್ಲಿ 1.7 ಡಿ.ಸೆ. ತಾಪಮಾನ ದಾಖಲಾಗಿದೆ. ಪಂಜಾಬ್ ಮತ್ತು ಹರ್ಯಾಣದಲ್ಲಿ ಪರಿಸ್ಥಿತಿ ತಿಳಿಗೊಂಡಿದ್ದು, ಜನರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕನಿಷ್ಠ ತಾಪಮಾನ
-15 ಸೆ.
ನ್ಯೂಯಾರ್ಕ್
-52 ಸೆ.
ಮೋಂಟಾನಾ
-8 ಸೆ.
ಹವಾಯಿ
-14 ಸೆ.
ಬರ್ಮಿಂಗ್‌ಹ್ಯಾಂ
-10 ಸೆ.
ಇಂಡಿಯಾನಾ
-35 ಸೆ.
ಮಿನ್ನೆಸೋಟಾ
-14.5 ಸೆ.
ಅಟ್ಲಾಂಟಾ
-17 ಸೆ.
ವಾಷಿಂಗ್ಟನ್
ಶೀತ ಸಂಖ್ಯೆ....
18000
3 ದಿನಗಳಲ್ಲಿ ಸ್ಥಗಿತಗೊಂಡ
ವಿಮಾನಗಳು
500
ಪ್ರಯಾಣಿಕರು ಅತಂತ್ರ
500
ಮಂದಿ
ರೈಲೊಂದರಲ್ಲಿ
ಸಿಲುಕಿಕೊಂಡಿರುವ ಪ್ರಯಾಣಿಕರ
ಸಂಖ್ಯೆ
21
ಮೃತರ
ಸಂಖ್ಯೆ
2
ದಿನಗಳಲ್ಲಿ ಪರಿಸ್ಥಿತಿ ತಿಳಿಯಾಗುವ ಸಾಧ್ಯತೆ
19
ಕೋಟಿಗೂ ಅಧಿಕ ಮಂದಿ ಸಂಕಷ್ಟದಲ್ಲಿ
15
ಸಾವಿರ ಕುಟುಂಬಗಳು ಕತ್ತಲಲ್ಲಿ