ಶ್ರೀಪತಿ ಆಚಾರ್ಯ, ಕೃಷ್ಣಪ್ರಸಾದ್, ವಿಶ್ವೇಶ್ವರ ಭಟ್ ಸೇರಿ 15 ಸಾಧಕರಿಗೆ ಪರ್ಯಾಯ ದರ್ಬಾರು ಗೌರವ
ಕನ್ನಡಪ್ರಭ ವಾರ್ತೆ , ಉಡುಪಿ , ಜ.11
ಪ್ರತಿಬಾರಿಯಂತೆ ಈ ಸಲವೂ ಕಾಣಿಯೂರು ಮಠದ ಪರ್ಯಾಯೋತ್ಸವದಲ್ಲಿ ಈ ಬಾರಿಯೂ ಸಮಾಜದ ಗಣ್ಯ ಸಾಧಕ ವ್ಯಕ್ತಿಗಳಿಗೆ ಪರ್ಯಾಯ ದರ್ಬಾರು ಗೌರವ ನೀಡಲಾಗುತ್ತಿದೆ. ಜ.18ರಂದು ನಡೆಯಲಿರುವ ಉತ್ಸವದಲ್ಲಿ ಈ ಬಾರಿ ಒಟ್ಟು 15 ಸಾಧಕರನ್ನು ವೈವಿಧ್ಯಮಯ ಕ್ಷೇತ್ರಗಳಿಂದ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಯಾರ್ಯಾರಿಗೆ ಗೌರವ?: ನ್ಯಾಯವಾದಿ ಎ.ಶ್ರೀಪತಿ ಆಚಾರ್ಯ, ನೇತ್ರತಜ್ಞ ಡಾ. ಕೃಷ್ಣಪ್ರಸಾದ್ ಕೆ. ಉಡುಪಿ, ಕನ್ನಡಪ್ರಭ ಹಾಗೂ ಸುವರ್ಣ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಅಕಾಡೆಮಿ ಆಫ್ ಆರ್ಕಿಯೋಲೊಜಿಯ ಅಧ್ಯಕ್ಷ ರವಿ ಶಾಮ್ ಕೊಯಮತ್ತೂರು, ಬೆಂಗಳೂರಿನ ಸೆಂಚುರಿ ಗ್ರೂಪ್‌ನ ಆಡಳಿತ ನಿರ್ದೇಶಕ ಡಾ.ಪಿ.ದಯಾನಂದ, ಸಂಸ್ಕೃತ ಭಾಷಾ ವಿದ್ವಾಂಸ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ, ಖ್ಯಾತ ಚಿತ್ರಕಲಾ ಶಿಕ್ಷಕ ರಾಧಾಕೃಷ್ಣ ಉಪಾಧ್ಯಾಯ ಮೂಡು ಬೆಳ್ಳೆ, ಮಣಿಪಾಲ ವಿವಿ ಸಹಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಪ್ರೊ. ಕಿನ್ನಿಕಂಬ್ಳ ಪದ್ಮನಾಭ ರಾವ್, ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್, ಮುಂಬೈನ ಹೊಟೇಲ್ ಉದ್ಯಮಿ ಜಯ ಸಿ. ಸುವರ್ಣ, ಖ್ಯಾತ ವೈದ್ಯ ಡಾ.ಶ್ರೀಧರ ಹೊಳ್ಳ, ಹೈದರಾಬಾದ್‌ನ ಹೊಟೇಲ್ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್, ವೇದಾಂತ ಪ್ರಾಧ್ಯಾಪಕ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಪಿ. ಎಸ್. ಬಾಗಿಲ್ತಾಯ.