ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಖುಷಿಗೊಂದು ನೆಪ ಸಿಕ್ಕಿದೆ, ಇನ್ನು ಯಾವ ಮಗುವಿಗೂ ಪೋಲಿಯೋ ಬಾಧಿಸಲ್ಲ..!

ಭಾರತವು ಈಗ ಪೋಲಿಯೋ ಮುಕ್ತ... ದೇಶಕ್ಕೆ ಹೆಮ್ಮೆ ತರುವ ಇಂತಹ ಘೋಷಣೆಯು ಸೋಮವಾರ ಅಧಿಕೃತವಾಗಿ ಹೊರಬೀಳಲಿದೆ...

Vishwanath S
Updated On : 13 Jan 2014, 1:43 am

ನವದೆಹಲಿ: ಭಾರತವು ಈಗ ಪೋಲಿಯೋ ಮುಕ್ತ... ದೇಶಕ್ಕೆ ಹೆಮ್ಮೆ ತರುವ ಇಂತಹ ಘೋಷಣೆಯು ಸೋಮವಾರ ಅಧಿಕೃತವಾಗಿ ಹೊರಬೀಳಲಿದೆ.
ಹೌದು. ಒಂದು ಕಾಲದಲ್ಲಿ ಪೋಲಿಯೋ ಪೀಡಿತರ ಸಂಖ್ಯೆಯಿಂದಾಗಿ ಮುಜುಗರ ಅನುಭವಿಸಿದ್ದ ಭಾರತವನ್ನು ವಿಶ್ವ ಆರೋಗ್ಯ ಸಂಸ್ಥೆಯು ಸೋಮವಾರ ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಲಿದೆ.
  ಕಳೆದ 3 ವರ್ಷಗಳಲ್ಲಿ ದೇಶದಲ್ಲಿ ಒಂದೇ ಒಂದು ಪೋಲಿಯೋ ಪ್ರಕರಣ ದಾಖಲಾಗಿಲ್ಲ. 2011ರ ಜ.13ರಂದು ಪಶ್ಚಿಮ ಬಂಗಾಳದ ಹೌರಾದ 2 ವರ್ಷದ ಬಾಲಕಿಗೆ ಪೋಲಿಯೋ ಇರುವುದು ಖಚಿತವಾಗಿತ್ತು. ಅದರ ನಂತರ ಯಾವುದೇ ಪೋಲಿಯೋ ಪ್ರಕರಣ ಕಂಡುಬಂದಿಲ್ಲ. ಹಾಗಾಗಿ ದೇಶಕ್ಕೆ ಈಗ ಪೋಲಿಯೋ ಮುಕ್ತ ಎಂಬ ಹೆಗ್ಗಳಿಕೆ ದೊರೆತಿದೆ. ಇಂತಹುದೊಂದು ಸಾಧನೆ ಮಾಡುವುದು ಭಾರತದಿಂದ ಕಷ್ಟಸಾಧ್ಯ ಎಂದೇ ನಂಬಲಾಗಿತ್ತು. ದೊಡ್ಡ ದೇಶ, ನೈರ್ಮಲ್ಯದ ಕೊರತೆ, ಭಾರಿ ಜನಸಂಖ್ಯೆ, ಜತೆಗೆ ಧಾರ್ಮಿಕ-ಸಾಮಾಜಿಕ ವಿರೋಧಗಳಿಂದಾಗಿ ಪೋಲಿಯೋ ನಿರ್ಮೂಲನೆಯ ಕನಸು ಕನಸಾಗಿಯೇ ಉಳಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅದೆಲ್ಲವನ್ನೂ ಮೀರಿ ದೇಶ ಪೋಲಿಯೋ ಮುಕ್ತ ಸಾಧನೆ ಮಾಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ ಎನ್ನುವುದು ಬಹುತೇಕರ ಅಭಿಪ್ರಾಯ.  ಸೊಮಾಲಿಯಾದಲ್ಲಿ ಹೆಚ್ಚು: 2013ರಲ್ಲಿ ವಿಶ್ವದಲ್ಲಿ ಒಟ್ಟು 372 ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 85 ಪಾಕಿಸ್ತಾನದ್ದಾದರೆ, 12 ಅಫ್ಘಾನಿಸ್ತಾನದ್ದು. ಸೊಮಾಲಿಯಾದಲ್ಲಿ ಅತಿ ಹೆಚ್ಚು ಅಂದರೆ 183 ಪ್ರಕರಣಗಳು ದಾಖಲಾಗಿವೆ. ಅಚ್ಚರಿಯೆಂದರೆ, ಸೊಮಾಲಿಯಾವು 2007ರಲ್ಲೇ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಹಣೆಪಟ್ಟಿ ಪಡೆದಿತ್ತು.
ಏನಿದು ಪೋಲಿಯೋ?: ದೇಹದ ತ್ಯಾಜ್ಯದ ಮೂಲಕ ಹರಡುವ ಪೋಲಿಯೋ ವೈರಸ್ ನೇರವಾಗಿ ಕೇಂದ್ರ ನರ ವ್ಯವಸ್ಥೆಯ ಮೇಲೆಯೇ ದಾಳಿ ನಡೆಸುತ್ತದೆ. ನಂತರ ಅದರ ಸಂಖ್ಯೆ ಹೆಚ್ಚುತ್ತಾ ಹೋಗಿ ನರಕೋಶಗಳನ್ನು ನಾಶ ಮಾಡುತ್ತಾ ಹೋಗುತ್ತದೆ. ಈ ಮೂಲಕ ಕೆಲವೇ ಗಂಟೆಗಳಲ್ಲಿ ಸರಿಪಡಿಸಲಾಗದಂತಹ ಅಂಗನ್ಯೂನತೆ ಉಂಟುಮಾಡುತ್ತದೆ. ಈ ರೀತಿಯಾದವರಲ್ಲಿ ಶೇ.5-10ರಷ್ಟು ಮಂದಿ ಉಸಿರಾಟಕ್ಕೆ ಸಂಬಂಧಿಸಿದ ಸ್ನಾಯುಗಳು ನಿಶ್ಚಲವಾಗಿ ಸಾವಿಗೀಡಾಗುತ್ತಾರೆ. ಸುರಕ್ಷಿತ, ಪರಿಣಾಮಕಾರಿ ಲಸಿಕೆಯನ್ನು ನಿಯಮಿತವಾಗಿ ನೀಡುವ ಮೂಲಕ ಮಕ್ಕಳ ಮೇಲೆ ಈ ವೈರಸ್ ದಾಳಿ ಆಗದಂತೆ ನೋಡಿಕೊಳ್ಳಬಹುದು.
ಭಾರತದಲ್ಲಿ ಪೋಲಿಯೋ ನಿರ್ಮೂಲನೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಆದರೂ ಆ ಕೆಲಸ ಯಶಸ್ವಿಯಾಗಿರುವುದು ನಿಜಕ್ಕೂ ಅದ್ಭುತವೇ ಸರಿ.
- ಬಿಲ್ ಗೇಟ್ಸ್, ಮೈಕ್ರೋಸಾಫ್ಟ್ ಸ್ಥಾಪಕ

ಪೋಲಿಯೋ ನಿರ್ಮೂಲನಾ ಆಂದೋಲನ
(ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ)
-    2011ರಲ್ಲಿ ಬಳಸಿದ ಓಪಿವಿ ಹನಿಗಳ ಪ್ರಮಾಣ- 90 ಕೋಟಿ
-    ಆಂದೋಲನಕ್ಕೆ ಬಳಸಿದ ಪೋಸ್ಟರ್‌ಗಳು- 9,56,000
-    ಟಿವಿ ಪಿಎಸ್‌ಎಗಳು- 840
-    ರೇಡಿಯೋ ಕಾರ್ಯಕ್ರಮ- 2,030
-   2011ರಲ್ಲಿ ಗಡಿ ಪ್ರದೇಶಗಳಲ್ಲಿ ಎಸ್‌ಎಂನೆಟ್(ಸೋಷಿಯಲ್ ಮೊಬಿಲೈಸೇಷನ್ ನೆಟ್‌ವರ್ಕ್) ಬರೋಬ್ಬರಿ 30 ಸಾವಿರ ವಲಸೆ ಕುಟುಂಬಗಳನ್ನು ಪತ್ತೆಹಚ್ಚಿ, ಅಲ್ಲಿನ 18,14,266 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವಲ್ಲಿ ಯಶಸ್ವಿಯಾಯಿತು.
ಗೇಟ್ಸ್ ನೆರವಿನ ಹಸ್ತ
ಪೋಲಿಯೋ ನಿರ್ಮೂಲನೆಯಲ್ಲಿ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಅವರು ವಹಿಸಿದ ಪಾತ್ರ ಮಾತ್ರ ಮಹತ್ತರವಾದುದು. 2009ರಿಂದ ಗೇಟ್ಸ್ ಫೌಂಡೇಷನ್ ಪೋಲಿಯೋ ನಿರ್ಮೂಲನೆಗೆಂದು 73 ಶತಕೋಟಿ (1.2 ಬಿಲಿಯನ್ ಡಾಲರ್) ನೀಡಿದೆ. ಜತೆಗೆ, 2018ರವರೆಗೆ ಇದೇ ಕಾರ್ಯಕ್ರಮಕ್ಕೆ ಮತ್ತೆ 110 ಶತಕೋಟಿ (1.8 ಬಿಲಿಯನ್ ಡಾಲರ್) ಒದಗಿಸಲು ಮುಂದೆ ಬಂದಿದೆ. ಒಟ್ಟಾರೆಯಾಗಿ ವಿವಿಧ ಸಂಸ್ಥೆಗಳು 4 ಶತಕೋಟಿ ಡಾಲರ್‌ನಷ್ಟು ಮೊತ್ತವನ್ನು ಪೋಲಿಯೋ ನಿರ್ಮೂಲನೆಗೆಂದು ನೀಡಿವೆ.
   ಹನಿ ನಿಲ್ಲಲ್ಲ
ದೇಶವು ಪೋಲಿಯೋ ಮುಕ್ತವಾದರೂ ಮತ್ತೆ ಪೋಲಿಯೋ ತಗಲುವ ಆತಂಕ ಇಲ್ಲದಿಲ್ಲ. ಮತ್ತೆ ದೇಶದಲ್ಲಿ ಯಾರಿಗೂ ಪೋಲಿಯೋ ತಗಲದಂತೆ ಮುಂಜಾಗ್ರತೆ ವಹಿಸುವುದು ಅಗತ್ಯ. ಭಾರತವು ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು
ಕೈಗೊಂಡಿದೆ. ಪೋಲಿಯೋ ಮುಕ್ತ ರಾಷ್ಟ್ರವೆಂಬ ಹೆಸರು ಪಡೆದರೂ ಪೋಲಿಯೋ ಹನಿ ನೀಡುವ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. 2011ರಿಂದಲೂ ಪಾಕಿಸ್ತಾನ, ನೇಪಾಳ, ಬಾಂಗ್ಲಾ, ಮ್ಯಾನ್ಮಾರ್ ಹಾಗೂ ಭೂತಾನ್ ಗಡಿ ದಾಟುವ 5 ವರ್ಷದೊಳಗಿನ
ಎಲ್ಲ ಮಕ್ಕಳಿಗೂ 102 ಗಡಿ
ಠಾಣೆಗಳಲ್ಲಿ ಪೋಲಿಯೋ ಹನಿ ನೀಡಲಾಗುತ್ತಿದೆ. ಕಳೆದ 2
ವರ್ಷಗಳಲ್ಲಿ 42 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ
ಹಾಕಲಾಗಿದೆ.
 ಮುಂದಿನ ಕ್ರಮಗಳೇನು?
ಇದೇ ಜ.30ರ ಬಳಿಕ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಎಲ್ಲರೂ (ವಯಸ್ಸಿನ ಮಿತಿಯಿಲ್ಲದೆ) ಪೋಲಿಯೋ ಲಸಿಕೆ ಹಾಕಿಸಿರುವ ಪ್ರಮಾಣೀಕರಣ ಪತ್ರ ತೋರಿಸುವುದು ಕಡ್ಡಾಯವಾಗಲಿದೆ
2014, 2015ರಲ್ಲಿ ಭಾರತದಲ್ಲಿ 2 ರಾಷ್ಟ್ರೀಯ ಹಾಗೂ 4 ವಿಭಾಗ ಮಟ್ಟದ ಪೋಲಿಯೋ ಹನಿ ಹಾಕುವ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ. 2013ರಲ್ಲಿ 2 ರಾಷ್ಟ್ರೀಯ ಹಾಗೂ 6 ವಿಭಾಗ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿತ್ತು.
 ಒಳಚರಂಡಿ ಸೇರಿದಂತೆ ವಿವಿಧೆಡೆ ಪೋಲಿಯೋ ವೈರಸ್ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಪ್ರಯೋಗಾಲಯದ ನೆರವಿನ ನಿಗಾ ವ್ಯವಸ್ಥೆ ಆರಂಭಿಸಲಾಗಿದೆ. ರಾಜ್ಯಗಳಿಗೆ ವಿಸ್ತರಣೆಗೆ ಚಿಂತನೆ.
1988ರಲ್ಲಿ ವಿಶ್ವಸಂಸ್ಥೆಯ ಬೆಂಬಲದಿಂದ ಪೋಲಿಯೋ ನಿರ್ಮೂಲನಾ ಯೋಜನೆ ಜಾರಿಗೆ ಬಂದ ಬಳಿಕ ವಿಶ್ವದಲ್ಲಿ ಪೋಲಿಯೋ ಪ್ರಕರಣಗಳಲ್ಲಿ ಆದ ಇಳಿಕೆ
99ರ್
1988ರಲ್ಲಿ ಪೋಲಿಯೋದಿಂದ ಮೃತಪಟ್ಟ ಹಾಗೂ ಅಂಗವೈಕಲ್ಯಕ್ಕೆ ಒಳಗಾದ ಮಕ್ಕಳ ಸಂಖ್ಯೆ
3.5 ಲಕ್ಷ
ಪ್ರತಿ ವಿಭಾಗ ಮಟ್ಟದ ಅಭಿಯಾನದಲ್ಲಿ 5 ಲಕ್ಷಕ್ಕೂ ಅಧಿಕ ಸಿಬ್ಬಂದಿ ಹನಿ ಹಾಕುವುದು
4.5 ಕೋಟಿ ಮಕ್ಕಳಿಗೆ

ಜ.13, 2011ರ ನಂತರ ದಾಖಲಾದ ಪ್ರಕರಣಗಳು
ಭಾರತ
0
ನೈಜೀರಿಯಾ
51
ಪಾಕಿಸ್ತಾನ
83
ಅಫ್ಘಾನಿಸ್ತಾನ
11
1985ರಲ್ಲಿ ಭಾರತದಲ್ಲಿ ದಾಖಲಾಗಿದ್ದ ಪ್ರಕರಣ
1,50,000
2013ರಲ್ಲಿ ಇಡೀ ವಿಶ್ವದಲ್ಲಿ ದಾಖಲಾಗಿದ್ದು
372

ವಿಶ್ವ ಪೋಲಿಯೋಗೆ ಭಾರತದ ಕೊಡುಗೆ
2010ರಲ್ಲಿ  
3ರ್
2009ರಲ್ಲಿ  
46ರ್
2007ರಲ್ಲಿ  
66ರ್
2011ರಲ್ಲಿ  
1ರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement