ಪ್ರತಿಭೆಗಳಿಗೆ ವೇದಿಕೆಯಾದ ಭಾವ ಸಂಕ್ರಾಂತಿ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಜ. 15
ಜಾಗತೀಕರಣದ ಹಾವಳಿಯಿಂದ ಎಲ್ಲರೂ ಆಂಗ್ಲ ಭಾಷಾ ವ್ಯಾಮೋಹಕ್ಕೆ ಒಳಗಾಗುತ್ತಿರುವ ಇಂದಿನ ದಿನಗಳಲ್ಲಿ ಕನ್ನಡ ಉಳಿಸಿ ಬೆಳೆಸುವಂತಹ ಜವಾಬ್ದಾರಿಯುತ ಕೆಲಸ ಮಾಡುತ್ತಿರುವ ಸಾಹಿತ್ಯ ಪರಿಷತ್ ಸೇವೆ ಶ್ಲಾಘನೀಯ ಎಂದು ಕವಿ ಮಂಜುನಾಥ್ ಹೇಳಿದರು.
ಪಟ್ಟಣದ ಕೃಷ್ಣ ಮಂದಿರದಲ್ಲಿ ತಾಲೂಕು ಕಸಾಪ ವತಿಯಿಂದ ನಡೆದ ಬಾವ ಬೆಳದಿಂಗಳ ಸಂಕ್ರಾಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಯಕರು ಮತ್ತು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ತಾಲೂಕು ಘಟಕ ಆಯೋಜಿಸಿರುವ ಕಾರ್ಯಕ್ರಮ ಉತ್ತಮ ಪ್ರಯತ್ನ ಎಂದು ತಿಳಿಸಿದರು.
ಸಾಹಿತ್ಯ ಪರಿಷತ್ ತಾ. ಅಧ್ಯಕ್ಷ ಜಿ.ಕೆ. ರಾಜು ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಪ್ರಬಂಧ ಸ್ಪರ್ಧೆ, ಸಂವಾದ ಹಾಗೂ ಶೈಕ್ಷಣಿಕ ಪ್ರಗತಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ನಾಡಿನ ಪ್ರಖ್ಯಾತ ಸಾಹಿತ್ಯಗಳ ವಿರಚಿತ ಭಾವಗೀತೆಗಳನ್ನು 25 ಮಂದಿ ಗಾಯಕರು ಹಾಡಿ ನೆರೆದಿದ್ದ ಪ್ರೇಕ್ಷಕರ ಮನಗೆದ್ದರು. ಕುವೆಂಪು ಅವರ ಹಚ್ಚೇವು ಕನ್ನಡದ ದೀಪ ಸಾಮೂಹಿಕ ಗೀತ ಗಾಯನದ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪೆ ಮಹದೇವಸ್ವಾಮಿ, ಪರಿಷತ್ ಗೌರವ ಕಾರ್ಯದರ್ಶಿ ರಿಜ್ವಾನ್, ಸಂಚಾಲಕರಾದ ರಾಜಯ್ಯ, ಸುರೇಶ್ರಾವ್ ಚವಾಣ್, ಕೋಶಾಧ್ಯಕ್ಷ ಕೃ.ಪಾ. ಮಂಜುನಾಥ್, ಮಾಲತಿ ವಿಶ್ವನಾಥ್, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಛಲವಾಧಿ ಮಹಾಸಭಾ ಮಹಿಳಾ ಘಟಕದ ತಾ. ಅಧ್ಯಕ್ಷೆ ಶಾಂತಿರಾಜ್, ಜನವೇದಿಕೆಯ ರಾವಂದೂರು ಪ್ರಕಾಶ್, ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಜಶೇಖರ್, ಅಹಿಂದ ಸಂಚಾಲಕ ಪ್ರಕಾಶ್ ಇದ್ದರು.