ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭಾರತ್ ಗೋಲ್ಡ್ ಮೈನ್ಸ್‌ಗೆ ಹೊಳಪು ನೀಡಲು ಚಾಲನೆ

Vishwanath S
Updated On : 17 Jan 2014, 12:37 pm

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಒಂದೂವರೆ ದಶಕದಿಂದ ಸ್ಥಗಿತಗೊಂಡಿರುವ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಬಿಜಿಎಂಎಲ್) ಪುನಶ್ಚೇತನಕ್ಕೆ ಚಾಲನೆ ದೊರೆತಿದೆ. ಮೊದಲ ಹಂತವಾಗಿ ಮಿನರಲ್ ಎಕ್ಸ್‌ಪ್ಲೋರೆಷನ್ ಕಾರ್ಪೊರೇಷನ್ ಲಿಮಿಟೆಡ್ (ಎಂಇಸಿಎಲ್), ಬಿಜಿಎಂಎಲ್ ಹಾಗೂ ಮೆಕಾನ್ ಲಿಮಿಟೆಡ್ ನಡುವೆ ಗುರುವಾರ ಒಡಂಬಡಿಕೆ ಆಗಿದೆ.
ಗಣಿ ಸಚಿವ ದಿನ್‌ಷಾ ಜೆ. ಪಟೇಲ್ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಎಚ್ ಮುನಿಯಪ್ಪ ಸಮ್ಮುಖದಲ್ಲಿ ಬಿಜಿಎಂಎಲ್ ಮತ್ತು ಎಂಸಿಇಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲ್ ಧವನ್, ಮೆಕಾನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ತ್ಯಾಗಿ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಮೆಕಾನ್ ಸಂಸ್ಥೆಯು ಬಿಜಿಎಂಎಲ್ ಪುನಶ್ಚೇತನಕ್ಕೆ ಜಾಗತಿಕ ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಾರಂಭಿಸಲು ಸಲಹಾ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ. ಪುನಶ್ಚೇತನಕ್ಕೆ ಜಾಗತಿಕ ಟೆಂಡರ್ ಕರೆಯುವುದು ಸೇರಿದಂತೆ ಇನ್ನಿತರ ಕೆಲಸ ನಿರ್ವಹಿಸಲು ಮೆಕಾನ್ ಸಲಹೆ ನೀಡಲಿದೆ. 2001ರಿಂದ ಸ್ಥಗಿತಗೊಂಡಿರುವ ಬಿಜಿಎಂಎಲ್ ಸಂಸ್ಥೆ ಪುನಶ್ಚೇತನಕ್ಕೆ ಹಲವು ವರ್ಷಗಳಿಂದ ಪ್ರಯತ್ನ ಸಾಗಿತ್ತು. ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ಇದ್ದ ವಿವಾದವೂ ಇತ್ಯರ್ಥವಾಗಿದ್ದು, ಪುನಶ್ಚೇತನಕ್ಕೆ ಚಾಲನೆ ದೊರೆತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement