ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾರ್ಡ್ ಮಾಹಿತಿ ಕಳವಾದೀತು...

Vishwanath S
Updated On : 20 Jan 2014, 1:12 am

ಮಾಲ್‌ಗಳಿಗೆ ಹೋಗಿ ಶಾಪಿಂಗ್ ಮಾಡುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸುತ್ತೀರಾ? ಹಾಗಾದ್ರೆ ಒಂದು ಕ್ಷಣ ಇಲ್ಲಿ ಕೇಳಿ, ನಿಮ್ಮ ಅಕೌಂಟ್‌ನ ಸೀಕ್ರೆಟ್ ಮಾಹಿತಿ ಕದಿಯಲಿಕ್ಕೆ ಅಂತಾನೇ ಒಂದು ವೈರಸ್ ಹುಟ್ಟಿಕೊಂಡಿದೆ. ಭಾರತದಲ್ಲಿ ಇದರ ಹಾವಳಿ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.

ವೈರಸ್ ಹೆಸರೇನು?
‘Dexter, bla‌c‌k POS,​​ me​m‌o‌ry d‌ump and ‌g‌rab​be‌r’ (ಡೆಕ್ಸ್‌ಟರ್, ಬ್ಲಾಕ್ ಪಿಓಎಸ್, ಮೆಮೋರಿ ಡಂಪ್ ಆ್ಯಂಡ್ ಗ್ರಾಬರ್)

ಗಂಭೀರತೆ ಏನು?
ಇದು ಡೆಡ್ಲಿ ವೈರಸ್. ಇದರ ಗಂಭೀರತೆ ಅಪಾರ. ಇದು ಟ್ರೋಜನ್ ಕುಟುಂಬದಿಂದ ಬಂದ ವೈರಸ್.

ಏನು ಮಾಡುತ್ತೆ?
ಬ್ಯಾಂಕಿಂಗ್ ಮಾಹಿತಿ ಕದಿಯುತ್ತೆ. ಪಾಯಿಂಟ್ ಆಫ್ ಸೇಲ್(ಪಿಓಎಫ್)ನಲ್ಲೇ ಇದರ ಕಾರ್ಯಾಚರಣೆ. ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಉಜ್ಜಿದೊಡೆ, ಆ ಯಂತ್ರದಿಂದಲೇ ನಿಮ್ಮ ಕಾರ್ಡ್‌ನ ಎಲ್ಲಾ ಮಾಹಿತಿ ಕದಿಯುತ್ತೆ.

ನೀವು ಏನು ಮಾಡಬೇಕು?
ಪಾಯಿಂಟ್ ಆಫ್ ಸೇಲ್ ಅಂದರೆ, ಶಾಪ್‌ಗಳಲ್ಲಿನ ಬಿಲ್ ಕೇಂದ್ರದಲ್ಲಿ ಈ ವೈರಸ್ ಅಟ್ಯಾಕ್ ಆಗುವುದರಿಂದ ಕಾರ್ಡ್ ಉಜ್ಜುವಾಗ ಎಚ್ಚರವಿರಲಿ. ಪಿನ್ ಇಲ್ಲದ ಕಾರ್ಡ್ ಬಳಸಲೇಬೇಡಿ.

ಅಪಾಯವೇನು?
ಕಾರ್ಡ್‌ನ ಮಾಹಿತಿ ಎಂದರೆ ಕಾರ್ಡ್‌ದಾರರ ಹೆಸರು, ಅಕೌಂಟ್ ನಂಬರ್, ಕಾರ್ಡ್ ಮುಗಿಯುವ ಅವಧಿ, ಸಿವಿವಿ ಕೋಡ್ ಮತ್ತು ಇತರೆ ರಹಸ್ಯ ಮಾಹಿತಿ. ಇದರಿಂದ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣ ಕಳ್ಳರ ಜೇಬು ಸೇರಿಕೊಳ್ಳಬಹುದು.

ಆರ್‌ಬಿಐ ಎಚ್ಚರಿಕೆ ಏನು?
ಆರ್‌ಬಿಐ ಪಿನ್ ಇಲ್ಲದ ಕಾರ್ಡ್‌ಗಳನ್ನು ಬಳಕೆ ಮಾಡುವುದು ಬೇಡ ಎಂದು ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಇದು ಕಳೆದ ಡಿಸೆಂಬರ್‌ನಿಂದಲೇ ಜಾರಿಗೆ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement