ಖ್ಯಾತ ಗಾಯಕ ಎಸ್ಪಿಬಿ ಅಸ್ವಸ್ಥ
ಜೊಹಾನ್ಸ್ಬರ್ಗ್: ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಸ್ವಸ್ಥರಾಗಿದ್ದಾರೆ. ಜೊಹಾನ್ಸ್ಬರ್ಗ್ನಲ್ಲಿ ನಡೆದ ಚಲನಚಿತ್ರೋತ್ಸವ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಸ್ವಲ್ಪ ಹೊತ್ತಿನಲ್ಲೇ ಅಸ್ವಸ್ಥರಾದರು. ಅನಾರೋಗ್ಯಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಭಾರತಕ್ಕೆ ಕಳುಹಿಸುವ ಸಿದ್ಧತೆ ನಡೆಸಲಾಗಿದೆ. ಎಸ್ಪಿಬಿ ಪ್ರಶಸ್ತಿ ಸ್ವೀಕರಿಸುತ್ತಲೇ 15 ಭಾಷೆಗಳ ಒಂದೊಂದು ಸಾಲನ್ನು ಹಾಡಿದ್ದರು.