ತಿರುಪತಿ ಬಾಲಾಜಿಗೆ ಪಲಾವ್ ನಾಣ್ಯ ಗೌರವ
ತಿರುಪತಿ ತಿಮ್ಮಪ್ಪ ಸರ್ವಾಂತರ್ಯಾಮಿ. ಇಡೀ ದೇಶದಲ್ಲಿ ಈತನ ಭಕ್ತರಿಲ್ಲದ ಜಾಗವಿಲ್ಲ. ಹಣದ ವಿಚಾರದಲ್ಲೂ ಅಷ್ಟೇ, ಈತನೇ ...
ಕೋಲ್ಕತಾ: ತಿರುಪತಿ ತಿಮ್ಮಪ್ಪ ಸರ್ವಾಂತರ್ಯಾಮಿ. ಇಡೀ ದೇಶದಲ್ಲಿ ಈತನ ಭಕ್ತರಿಲ್ಲದ ಜಾಗವಿಲ್ಲ. ಹಣದ ವಿಚಾರದಲ್ಲೂ ಅಷ್ಟೇ, ಈತನೇ ಕುಬೇರ...
ಇಂಥ ತಿಮ್ಮಪ್ಪ ಸದ್ಯದಲ್ಲೇ ನಾಣ್ಯಗಳಲ್ಲೂ ರಾರಾಜಿಸಲಿದ್ದಾನೆ. ಅದು ಸ್ವದೇಶಿ ಭಕ್ತರಿಂದಲ್ಲ, ವಿ'ದೇಶಿ' ಭಕ್ತರಿಂದ.
ಪಲಾವು ಎಂಬ ದೇಶ ತಿರುಪತಿ ತಿಮ್ಮಪ್ಪನ ಚಿತ್ರವಿರುವ ನಾಣ್ಯವನ್ನು ಮುದ್ರಿಸಲು ಹೊರಟಿದೆ. ಈಗಾಗಲೇ ಟಂಕಿಸಲಾಗಿದ್ದು, ಬುಧವಾರ ಇದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ದೇಶಾದ್ಯಂತ ತಿಮ್ಮಪ್ಪನಿಗಾಗಿ ಹಣ, ಬಂಗಾರ ಸುರಿಯುತ್ತಿದ್ದರೂ, ಯಾರೊಬ್ಬರೂ ನಾಣ್ಯ ಮುದ್ರಿಸುವ ಕೆಲಸ ಮಾಡಿರಲಿಲ್ಲ. ಆದರೆ ವಿದೇಶವೊಂದು ಇಂಥ ಕಾರ್ಯಕ್ಕೆ ಮುಂದಾಗಿರುವುದು ತಿಮ್ಮಪ್ಪನ ವೈಶಿಷ್ಟ್ಯ. ಶಾಂತ ಸಾಗರದಲ್ಲಿರುವ ದ್ವೀಪರಾಷ್ಟ್ರ ಪಲಾವು ಈ ಕೈಂಕರ್ಯ ಆರಂಭಿಸಿದ್ದು, ನಾಣ್ಯಶಾಸ್ತ್ರ ಪರಿಣತ ಅಲೋಕ್ ಕೆ ಗೋಯಲ್ ಎಂಬುವರು ವಿನ್ಯಾಸ ಮಾಡಿ, ಇವುಗಳ ಅಧಿಕೃತ ಮಾರಾಟಗಾರರೂ ಆಗಿದ್ದಾರೆ.
ಎಲ್ಲಿದೆ ಪಲಾವು?
ಶಾಂತ ಸಾಗರದಲ್ಲಿರುವ ದ್ವೀಪರಾಷ್ಟ್ರ ಇದು. 21 ಸಾವಿರ ಜನಸಂಖ್ಯೆ ಇರುವ ಈ ದೇಶ 250 ದ್ವೀಪಗಳಲ್ಲಿ ಹಂಚಿಹೋಗಿದೆ. ಕರೋರ್ ಎಂಬ ದ್ವೀಪ ಬಹಳ ಪ್ರಸಿದ್ಧಿಯಾಗಿದೆ. ಇಂಡೋನೇಷ್ಯಾ ಮತ್ತು ಫಿಲಿಪ್ಪಿನ್ಸ್ ಈ ದೇಶದ ಅಕ್ಕಪಕ್ಕದಲ್ಲಿವೆ. ಈ ದೇಶಕ್ಕೆ ಆದಾಯ ಬರುವುದು ಪ್ರವಾಸ, ಮೀನುಗಾರಿಕೆ ಮತ್ತು ಕೃಷಿಯಿಂದ. ಇಲ್ಲಿನ ಅಧಿಕೃತ ಭಾಷೆ ಇಂಗ್ಲಿಷ್.
ಹೇಗಿರುತ್ತೆ ನಾಣ್ಯ?
ವಜ್ರ ಖಚಿತ ಬೆಳ್ಳಿ ನಾಣ್ಯ. ಅದರಲ್ಲಿ ಸ್ವರೋಸ್ಕಿ ಎಂಬ ಸ್ಫಟಿಕವಿದೆ
11,111
ಮೊದಲ ಮುದ್ರಣವಾಗುವ ನಾಣ್ಯಗಳು
1,111
ಕೋಲ್ಕತಾದಲ್ಲಿ ಬುಧವಾರದಿಂದ ಮಾರಾಟ. ತಿರುಪತಿ ದೇಗುಲದ ಪ್ರತಿರೂಪ ಜತೆಗೆ ಚಿಕ್ಕ ಬಾಕ್ಸ್‌ನಲ್ಲಿ ದೊರೆಯುತ್ತದೆ.
ಮಾರಾಟ ಶುರುಏ.16 ರಿಂದ
ಎರಡು ರೀತಿಯ ನಾಣ್ಯಗಳು
1 ಔನ್ಸ್ ಮತ್ತು 3 ಔನ್ಸ್