ಅಕ್ಕಿನೇನಿ ಇನ್ನಿಲ್ಲ
ಹೈದರಾಬಾದ್: ಖ್ಯಾತ ತೆಲುಗು ನಟ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅಕ್ಕಿನೇನಿ ನಾಗೇಶ್ವರ ರಾವ್(91) ಬುಧವಾರ ಕೊನೆಯುಸಿರೆಳೆದರು. ಎಎನ್ಆರ್ ಎಂದೇ ಖ್ಯಾತರಾಗಿರುವ ನಾಗೇಶ್ವರ ರಾವ್ ಕೆಲ ವರ್ಷಗಳಿಂದ ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರಿಗೆ ನಟ ನಾಗಾರ್ಜುನ ಸೇರಿ ಇಬ್ಬರು ಪುತ್ರರು, 3 ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಗುರುವಾರ ನಡೆಯಲಿದೆ.