ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಳಗಿರಿ ಅಮಾನತು

ಕೇಂದ್ರದ ಮಾಜಿ ಸಚಿವ, ಡಿಎಂಕೆ ನಾಯಕ ಎಂ.ಕೆ. ಅಳಗಿರಿ ಅವರನ್ನು ಪಕ್ಷ ಅಮಾನತು ಮಾಡಿದೆ. ಹಿರಿಯ ಪುತ್ರ ಅಳಗಿರಿ ವರ್ತನೆಯಿಂದ...

Rashmi Kasaragodu
Updated On : 25 Jan 2014, 1:08 am

ಚೆನ್ನೈ: ಕೇಂದ್ರದ ಮಾಜಿ ಸಚಿವ, ಡಿಎಂಕೆ ನಾಯಕ ಎಂ.ಕೆ. ಅಳಗಿರಿ ಅವರನ್ನು ಪಕ್ಷ ಅಮಾನತು ಮಾಡಿದೆ. ಹಿರಿಯ ಪುತ್ರ ಅಳಗಿರಿ ವರ್ತನೆಯಿಂದ ಬೇಸತ್ತಿದ್ದ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರು ಶುಕ್ರವಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
 ಪಕ್ಷದ ನಿಲುವಿಗೆ ವಿರುದ್ಧವಾಗಿ ಮಾತನಾಡುವ ಮೂಲಕ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಅಳಗಿರಿ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವ ರದ್ದು ಮಾಡಲಾಗಿದ್ದು, ಪಕ್ಷಕ್ಕೆ ಸಂಬಂಧಪಟ್ಟ ಎಲ್ಲ ಹುದ್ದೆಗಳಿಂದ ತಾತ್ಕಾಲಿಕವಾಗಿ ವಜಾ ಮಾಡಿರುವುದಾಗಿ ಕರುಣಾ ಘೋಷಿಸಿದ್ದಾರೆ.
ಮೈತ್ರಿಗೆ ವಿರೋಧ: ತಮಿಳುನಾಡಿನಲ್ಲಿ ನಟ ವಿಜಯಕಾಂತ್ ನೇತೃತ್ವದ ಡಿಎಂಡಿಕೆ ಪಕ್ಷದೊಂದಿಗೆ ಡಿಎಂಕೆ ಮೈತ್ರಿ ಮಾಡಿಕೊಳ್ಳುತ್ತಿರುವುದು ಅಳಗಿರಿಗೆ ಇಷ್ಟವಿಲ್ಲ. ಹಾಗಾಗಿ ಅವರು ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಜತೆಗೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಳಗಿರಿ ಅವರು ವಿಜಯಕಾಂತ್ ಅವರನ್ನು ದೂಷಿಸಿ ಮಾತನಾಡಿದ್ದರು. ಇದು ಕರುಣಾರ ಕೋಪಕ್ಕೆ ಕಾರಣವಾಗಿತ್ತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement