ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತೀರ್ಪು ರದ್ದು ಮಾಡಿ

ಕೃಷ್ಣಾ ನ್ಯಾಯಾಧಿಕರಣದ ಎರಡನೇ ತೀರ್ಪು ರದ್ದು ಮಾಡುವಂತೆ ಕೋರಿ ಆಂಧ್ರ ಪ್ರದೇಶ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ....

Rashmi Kasaragodu
Updated On : 25 Jan 2014, 1:08 am

 ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕೃಷ್ಣಾ ನ್ಯಾಯಾಧಿಕರಣದ ಎರಡನೇ ತೀರ್ಪು ರದ್ದು ಮಾಡುವಂತೆ ಕೋರಿ ಆಂಧ್ರ ಪ್ರದೇಶ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಕೃಷ್ಣಾ ನ್ಯಾಯಾಧಿಕರಣದ ಎರಡನೇ ತೀರ್ಪಿನಲ್ಲಿ ತನಗೆ ಅನ್ಯಾಯವಾಗಿದೆ ಎಂಬುದು ಆಂಧ್ರಪ್ರದೇಶದ ಪ್ರಮುಖ ದೂರು. ಆಲಮಟ್ಟಿ ಅಣೆಕಟ್ಟೆಯನ್ನು ಎತ್ತರಿಸಲು ಅವಕಾಶ ನೀಡಿರುವುದಕ್ಕೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಒಪ್ಪಿಕೊಂಡರೆ ದೀರ್ಘಕಾಲದಲ್ಲಿ ಅನ್ಯಾಯವಾಗುತ್ತದೆ. ಅದನ್ನು ತಪ್ಪಿಸಬೇಕು ಎಂದು ಕೋರಲಾಗಿದೆ. ಕೃಷ್ಣಾ ನ್ಯಾಯಾಧಿಕರಣದ ಎರಡನೇ ತೀರ್ಪು ಹೊರ ಬಿದ್ದಾಗಿನಿಂದಲೂ ಆಂಧ್ರಪ್ರದೇಶ ವಿರೋಧಿಸುತ್ತಲೇ ಇದೆ. ಆಂಧ್ರಪ್ರದೇಶದ ಸಂಸದರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ತೀರ್ಪಿನಿಂದಾಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement