ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರೋಚಕ ಟೈ

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ, ಬೌಲರ್‌ಗಳ ದುಬಾರಿ ಪ್ರದರ್ಶನ ಮತ್ತೆ ಮುಂದುವರಿದ ಪರಿಣಾಮ ಟೀಂ ಇಂಡಿಯಾ...

Rashmi Kasaragodu
Updated On : 26 Jan 2014, 1:30 am

ಆಕ್ಲಂಡ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದಿದೆ. ಈ ಮೂಲಕ ಸರಣಿ  ಜೀವಂತವಾಗಿರಿಸಿಕೊಂಡಿದೆ. ರವೀಂದ್ರ ಜಡೇಜಾಗೆ ಪಂದ್ಯಶ್ರೇಷ್ಠ ಗೌರವ

ಆಕ್ಲೆಂಡ್: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ, ಬೌಲರ್‌ಗಳ ದುಬಾರಿ ಪ್ರದರ್ಶನ ಮತ್ತೆ  ಮುಂದುವರಿದ ಪರಿಣಾಮ ಟೀಂ ಇಂಡಿಯಾ ಮೂರನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ವಿರುದ್ಧ ಸೋಲಿನ ಅಂಚಿಗೆ ಬಂದು ನಿಂತಿತ್ತು.  ಆದರೆ  ಭಾರತ ತಂಡದ ಅದೃಷ್ಟವೇನೋ ಅಂತಿಮ ಗಳಿಗೆಯಲ್ಲಿ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಸ್ಫೋಟಿಸಿದ ಪರಿಣಾಮ ಅಂತಿಮವಾಗಿ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿತು. ಇದರೊಂದಿಗೆ ಏಕದಿನ ಸರಣಿ ಕಳೆದುಕೊಳ್ಳುವುದರಿಂದ ಟೀಂ ಇಂಡಿಯಾ ಬಚಾವ್ ಆಗಿದೆ.
ಈಡನ್ ಪಾರ್ಕ್‌ನಲ್ಲಿ ಶನಿವಾರ ನಡೆದ ಮೂರನೇ ಏಕದಿನ ಪಂದ್ಯ, ಕೊನೆ ಓವರ್‌ನ ಕೊನೆ ಎಸೆತದವರೆಗೂ ಕುತೂಹಲ ಕೆರಳಿಸಿತ್ತು.  ಅಂತಿಮವಾಗಿ ಪಂದ್ಯ ಟೈನಲ್ಲಿ ಅಂತ್ಯಗೊಂಡ ಪರಿಣಾಮ ಗೆಲವಿನ ಹಾರ ಯಾರ ಕೊರಳಿಗೂ ಬೀಳಲಿಲ್ಲ.
ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಯ್ಕೆ ಮಾಡಿಕೊಂಡಿತು. ಮೊದಲ ಬ್ಯಾಟಿಂಗ್‌ನ ಅವಕಾಶ ಪಡೆದ  ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 314 ರನ್‌ಗಳಿಗೆ ಆಲೌಟ್ ಆಯಿತು. ಕಠಿಣ ಗುರಿ ಬೆಂಬತ್ತಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 314ರನ್‌ಗಳಿಸಿ ಸಮಬಲ ಸಾಧಿಸಿತು.
ಮತ್ತೆ ದುಬಾರಿಯಾದ ಬೌಲರ್‌ಗಳು: ಸತತವಾಗಿ ವೈಫಲ್ಯ ಕಾಣುತ್ತಿರುವ ಭಾರತ ತಂಡದ ಬೌಲಿಂಗ್ ವಿಭಾಗ, ಈ ಪಂದ್ಯದಲ್ಲೂ ದುಬಾರಿಯಾಯಿತು. ಶುರುವಿನಲ್ಲಿ ಕೇವಲ 36 ರನ್‌ಗಳಾಗುವಷ್ಟರಲ್ಲಿ ನ್ಯೂಜಿಲೆಂಡ್‌ನ ಆರಂಭಿಕ ಜೋಡಿಯನ್ನು ಬೇರ್ಪಡಿಸಿದ ಭಾರತ ಬೇಗ ಯಶಸ್ಸು ಕಂಡಿತು.
ಆದರೆ, ನಂತರ ಆರಂಭಿಕ ಮಾರ್ಟಿನ್ ಗುಪ್ಟಿಲ್ ಶತಕ (ರನ್ 111, 129 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ಕೇನ್ ವಿಲಿಯಮ್ಸನ್ ಅರ್ಧಶತಕ (ರನ್ 65, 74 ಎಸೆತ, 4 ಬೌಂಡರಿ, 1 ಸಿಕ್ಸರ್) ಬಾರಿಸಿ ಭಾರತದ ಬೌಲರ್‌ಗಳನ್ನು ದಂಡಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ 153 ರನ್‌ಗಳ ಜತೆಯಾಟ ನೀಡಿದರೆ, ಅಂತಿಮ ಘಟ್ಟದಲ್ಲಿ ಲ್ಯೂಕ್ ರೋಂಚಿ ಹಾಗೂ ಟಿಮ್ ಸೌಥಿ ಆರ್ಭಟಿಸಿ ತಂಡ ಬೃಹತ್ ಮೊತ್ತ ಪೇರಿಸಲು ಕಾರಣರಾದರು.
ಕಿವೀಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಶುಭಾರಂಭ ಮಾಡಲಿಲ್ಲ. ಶಿಖರ್ ಧವನ್(28) ಹಾಗೂ ರೋಹಿತ್ ಶರ್ಮಾ(39)   ದೊಡ್ಡ ಮೊತ್ತದ ಜೊತೆಯಾಟ ನೀಡಲಿಲ್ಲ. ಕಳೆದೆರಡು ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಿದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಲ್ಲದೆ ರಹಾನೆ ಸಹ ಒಂದಂಕಿಗೆ ತೃಪ್ತರಾದರು. ಇನಿಂಗ್ಸ್ ಕಟ್ಟುವತ್ತ ಗಮನಹರಿಸಿದ ಧೋನಿ ಅರ್ಧ ಶತಕ ದಾಖಲಿಸಿದರು. ರನ್‌ರೇಟ್ ಒತ್ತಡ ಹೆಚ್ಚುತ್ತಿದ್ದ ಪರಿಣಾಮ ಬಿರುಸಿನ ಆಟಕ್ಕೆ ಮುಂದಾದ ಧೋನಿ, ಔಟಾಗಿ ಪೆವಿಲಿಯನ್ ಸೇರಿಕೊಂಡರು.
ತಿರುವು ಕೊಟ್ಟ ಅಶ್ವಿನ್, ಜಡೇಜಾ: ಧೋನಿ ವಿಕೆಟ್ ಕಳೆದುಕೊಂಡಾಗ ಭಾರತ ತಂಡಕ್ಕೆ ಗೆಲ್ಲಲು ಕೇವಲ 14 ಓವರ್‌ಗಳಲ್ಲಿ 133 ರನ್‌ಗಳ ಅಗತ್ಯವಿತ್ತು. ಹಾಗಾಗಿ ಭಾರತ ತಂಡ ಪಂದ್ಯದ ಮೇಲಿನ ಆಸೆಯನ್ನು ಬಹುತೇಕ ಕೈಬಿಟ್ಟಿತು. ಈ ವೇಳೆ ಆರ್ಭಟಿಸಿದ ಅಶ್ವಿನ್(ರನ್ 65, 46 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ಜಡೇಜಾ(ರನ್ ಅಜೇಯ 66, 45 ಎಸೆತ, 5 ಬೌಂಡರಿ, 4 ಸಿಕ್ಸರ್) ಭಾರತದ ಪಾಲಿಗೆ ಆಸರೆಯಾಗಿ ನಿಂತರು.
ಜಡೇಜಾ ಜೊತೆ  85 ರನ್‌ಗಳ ಜತೆಯಾಟ ನೀಡಿದ ನಂತರ ಅಶ್ವಿನ್ ವಿಕೆಟ್ ಕೈಚೆಲ್ಲಿದರು. ಕೊನೆಯ ಓವರಿನಲ್ಲಿ ಭಾರತಕ್ಕೆ ಗೆಲ್ಲಲು 18 ರನ್ ಬೇಕಿತ್ತು.  ಆದರೆ, ಕೋರೆ ಎಸೆದ ಅಂತಿಮ ಓವರಿನಲ್ಲಿ ಜಡೇಜಾ 17 ರನ್ ಬಾರಿಸಿ (4೤1ವೈಡ್‌೤0೤0೤1ವೈಡ್‌೤4೤6೤1) ತಂಡವನ್ನು ಗೆಲವಿನ ದಡ ಸೇರಿಸದಿದ್ದರೂ, ಸೋಲಿನ ಸುಳಿಯಿಂದ ಪಾರು ಮಾಡಿ ಟೈ ಫಲಿತಾಂಶಕ್ಕೆ ಕಾರಣರಾದರು. 


ಸ್ಕೋರ್ ವಿವರ



ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 314
ಮಾರ್ಟಿನ್ ಗುಪ್ಟಿಲ್ ಸಿ ರಹಾನೆ ಬಿ ಜಡೇಜಾ     111(129)
ಜೆಸ್ಸಿ ರೈಡರ್ ಬಿ ಭುವನೇಶ್ವರ್ ಕುಮಾರ್     20(12)
ಕೇನ್ ವಿಲಿಯಮ್‌ಸನ್ ಬಿ ಮೊಹ್ಮದ್ ಶಮಿ     65(74)
ಕೋರೆ ಆ್ಯಂಡರ್ಸನ್ ಬಿ ಅಶ್ವಿನ್     8(5)
ರಾಸ್ ಟೇಲರ್ ರನೌಟ್ (ರಹಾನೆ)     17(18)
ಬ್ರೆಂಡನ್ ಮೆಕಲಂ ಸಿ ಅಶ್ವಿನ್ ಬಿ ಆ್ಯರೋನ್     0(3)
ಲ್ಯೂಕ್ ರೋಂಚಿ ಸಿ ರಹಾನೆ ಬಿ ಜಡೇಜಾ     38(20)
ನಾಥನ್ ಮೆಕಲಂ ರನೌಟ್ (ಜಡೇಜಾ/ಧವನ್)     1(3)
ಟಿಮ್ ಸೌಥಿ ರನೌಟ್ (ಧೋನಿ/ಕೊಹ್ಲಿ)     27(23)
ಮೆಕ್ಲೆನಾಘನ್ ಸಿ ಜಡೇಜಾ ಬಿ ಮೊಹ್ಮದ್ ಶಮಿ     3(6)
ಹಮೀಶ್ ಬೆನ್ನೆಟ್ ಅಜೇಯ     3(7)
ಇತರೆ (ಎಲ್‌ಬಿ 10, ವೈಡ್ 11) ಒಟ್ಟು     21
ವಿಕೆಟ್ ಪತನ: 1-36, 2-189, 3-198, 4-224, 5-230, 6-270, 7-280, 8-280, 9-288, 10-314
ಬೌಲಿಂಗ್ ವಿವರ
ಭುವನೇಶ್ವರ್ ಕುಮಾರ್ 9-0-48-1
ಮೊಹ್ಮದ್ ಶಮಿ 10-0-84-2
ವರುಣ್ ಆ್ಯರೋನ್ 7-0-52-1
ರವೀಂದ್ರ ಜಡೇಜಾ 10-0-47-2
ಆರ್. ಅಶ್ವಿನ್ 10-0-47-1
ಸುರೇಶ್ ರೈನಾ 4-0-26-0
ಭಾರತ 50 ಓವರ್‌ಗಳಲ್ಲಿ 314
ಶಿಖರ್ ಸಿ ಗುಪ್ಟಿಲ್ ಬಿ ಆ್ಯಂಡರ್ಸನ್     28(25)
ರೋಹಿತ್ ಸಿ ಬೆನ್ನೆಟ್ ಬಿ ಆ್ಯಂಡರ್ಸನ್ 39(38)
ವಿರಾಟ್ ಕೊಹ್ಲಿ ಸಿ ರೋಂಚಿ ಬಿ ಬೆನ್ನೆಟ್     6(20)
ರಹಾನೆ ಸಿ ರೋಂಚಿ ಬಿ ಆ್ಯಂಡರ್ಸನ್     3(14)
ಸುರೇಶ್ ರೈನಾ ಸಿ ರೋಂಚಿ ಬಿ ಸೌಥಿ     31(39)
ಧೋನಿ ಸಿ ಸೌಥಿ ಬಿ ಆ್ಯಂಡರ್ಸನ್     50(60)
ಅಶ್ವಿನ್ ಸಿ ಗುಪ್ಟಿಲ್ ಬಿ ನಾಥನ್ ಮೆಕಲಂ    65(46)
ರವೀಂದ್ರ ಜಡೇಜಾ ಅಜೇಯ     66(45)
ಭುವನೇಶ್ವರ್ ಸಿ ನಾಥನ್ ಮೆಕಲಂ ಬಿ ಬೆನ್ನೆಟ್    4(3)
ಶಮಿ ಸಿ ವಿಲಿಯಮ್‌ಸನ್ ಬಿ ಆ್ಯಂಡರ್ಸನ್     2(7)
ವರುಣ್ ಆ್ಯರೋನ್ ಅಜೇಯ     2(3)
ಇತರೆ (ಬಿ 1, ಎಲ್‌ಬಿ 3, ವೈಡ್ 14) ಒಟ್ಟು     18
ವಿಕೆಟ್ ಪತನ: 1-64, 2-72, 3-74 , 4-79, 5-146, 6-184, 7-269, 8-275, 9-286
ಬೌಲಿಂಗ್ ವಿವರ
ಟಿಮ್ ಸೌಥಿ 10-0-74-1
ಮೆಕ್ಲೆನಾಘನ್ 10-0-76-0
ಬೆನ್ನೆಟ್ 10-2-41-2
ಆ್ಯಂಡರ್ಸನ್ 10-1-63-5
ವಿಲಿಯಮ್‌ಸನ್ 2-0-17-0
ನಾಥನ್ ಮೆಕಲಂ 8-0-39-1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments