ಹಿರಿಯ ವಿದ್ವಾಂಸ ಡಾ. ರಂಗನಾಥ ಶರ್ಮ ನಿಧನ
ಕನ್ನಡ ಹಾಗೂ ಸಂಸ್ಕೃತ ಭಾಷೆಯ ಹಿರಿಯ ವಿದ್ವಾಂಸ, ಮಹಾಮಹೋಪಾಧ್ಯಾಯ ಡಾ. ವಿದ್ವಾನ್ ಎನ್. ರಂಗನಾಥ ...
ಮೈಸೂರು: ಕನ್ನಡ ಹಾಗೂ ಸಂಸ್ಕೃತ ಭಾಷೆಯ ಹಿರಿಯ ವಿದ್ವಾಂಸ, ಮಹಾಮಹೋಪಾಧ್ಯಾಯ ಡಾ. ವಿದ್ವಾನ್ ಎನ್. ರಂಗನಾಥ ಶರ್ಮ (99) ಶನಿವಾರ ಬೆಳಗಿನ ಜಾವ ಮೈಸೂರಿನ ತಮ್ಮ ಪುತ್ರಿಯ ನಿವಾಸದಲ್ಲಿ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಪತ್ನಿ ಕೆಲವು ವರ್ಷಗಳ ಹಿಂದಷ್ಟೇ ನಿಧನರಾಗಿದ್ದರು. ಬೆಂಗಳೂರಿನಲ್ಲಿ ವಾಸವಾಗಿದ್ದ ಅವರು ಒಂದೂವರೆ ವರ್ಷಗಳಿಂದ ಮೈಸೂರಿನ ಮಗಳ ಮನೆಯಲ್ಲಿದ್ದರು. ಕಳೆದ ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರ ಅಂತ್ಯಸಂಸ್ಕಾರ ಶನಿವಾರ ಮೈಸೂರಿನ ಗೋಕುಲಂ ಚಿರಶಾಂತಿಧಾಮದಲ್ಲಿ ನೆರವೇರಿಸಲಾಯಿತು.