ಹಾಲಂಡ್- ವೆಲೆರಿ ಸಂಬಂಧಕ್ಕೆ ಎಳ್ಳುನೀರು
ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲಾಂಡ್ ಹಾಗೂ ವೆಲೆರಿ ತ್ರೈವೇಲರ್ ನಡುವಿನ 7 ವರ್ಷದ ಸಂಬಂಧ ಮುರಿದುಬಿದ್ದಿದೆ...
ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲಾಂಡ್ ಹಾಗೂ ವೆಲೆರಿ ತ್ರೈವೇಲರ್ ನಡುವಿನ 7 ವರ್ಷದ ಸಂಬಂಧ ಮುರಿದುಬಿದ್ದಿದೆ. ನಟಿ ಜೂಲಿ ಗಯೆಟ್ ಜತೆಗಿನ ಚೋರಿ ಚೋರಿ ಚುಪ್ಕೆ ಚುಪ್ಕೆ ಸಂಬಂಧ ಬಹಿರಂಗವಾದ 2 ವಾರಗಳಲ್ಲೇ ವೆಲೆರಿಯಿಂದ ದೂರ ಹೋಗುವ ನಿರ್ಧಾರವನ್ನು ಫ್ರಾಂಕೋಯಿಸ್ ಪ್ರಕಟಿಸಿದ್ದಾರೆ. ಹೀಗಾಗಿ ಅಧ್ಯಕ್ಷರ ನಿವಾಸದಿಂದ ವೆಲೆರಿ ಹೊರಹೋಗುವುದು ಅನಿವಾರ್ಯವಾಗಲಿದೆ. ನಿಯತಕಾಲಿಕೆಯೊಂದು ಜೂಲಿ ಜತೆಗಿನ ಫ್ರಾಂಕೋಯಿಸ್ ಸಂಬಂಧವನ್ನು ಬಹಿರಂಗಪಡಿಸಿತ್ತು. ಆರಂಭದಲ್ಲಿ ಜೂಲಿ ಜತೆಗಿನ ಸಂಬಂಧವನ್ನು ನಿರಾಕರಿಸಿದ್ದ ಫ್ರಾಂಕೋಯಿಸ್ ಬಳಿಕ 'ನಿಜ' ಎಂದು ಒಪ್ಪಿಕೊಂಡಿದ್ದರು. ಈ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೊಳಗಾದ ವೆಲೆರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆ ಚೇತರಿಸಿಕೊಂಡು ಮನೆಗೆ ವಾಪಸಾಗುತ್ತಿದ್ದಂತೆ ಫ್ರಾಂಕೋಯಿಸ್ ಆಕೆಯಿಂದ ದೂರ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.